ಬೆಂಗಳೂರು : engineer exam : ಲೋಕೋಪಯೋಗಿ ಇಂಜಿನಿಯರ್ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ಆರೋಪಿ ರುದ್ರಗೌಡ ಡಿ. ಪಾಟೀಲ್ನನ್ನು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯವು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಕಳೆದ ವರ್ಷ ನಡೆದಿದ್ದ ಲೋಕೋಪಯೋಗಿ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಬ್ಲೂಟುತ್ ಸಾಧನವನ್ನು ಬಳಸಿ ಓರ್ವ ಅಭ್ಯರ್ಥಿ ಪರೀಕ್ಷೆಯನ್ನು ಬರೆದಿದ್ದ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪರೀಕ್ಷಾ ಕೇಂದ್ರ ಇದ್ದಿದ್ದರಿಂದ ಆರೋಪಿಯು ಈತನನ್ನು ಬಂಧಿಸಿದ್ದರು. ಅಭ್ಯರ್ಥಿಯು ವಿಚಾರಣೆ ಸಂದರ್ಭದಲ್ಲಿ ರುದ್ರಗೌಡ ಡಿ. ಪಾಟೀಲ್ ಹೆಸರನ್ನು ಬಾಯ್ಬಿಟ್ಟಿದ್ದ. ಇದಾದ ಬಳಿಕ ಕಾಲೇಜು ಮುಖ್ಯಸ್ಥ ನಾಗರಾಜ್ ಕಾಮ್ಲೆ ಸೇರಿ 16 ಮಂದಿಯನ್ನು ಬಂಧಿಸಿದ್ದರು. ಬಾಡಿ ವಾರಂಟ್ ಜಾರಿ ಮಾಡಿ ರುದ್ರಗೌಡ ಡಿ ಪಾಟೀಲ್ನನ್ನು ಬಂಧಿಸಲಾಗಿತ್ತು.
ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರಾದ ರುದ್ರಗೌಡ ಡಿ ಪಾಟೀಲ್ನನ್ನು ವಿಚಾರಣೆ ನಡೆಸಿದ 1ನೇ ಎಸಿಎಂಎಂ ನ್ಯಾಯಾಲಯವು ಆದೇಶ ಹೊರಡಿಸಿದೆ.
supreme court : ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ : 2 ವಾರಗಳಲ್ಲಿ ನೋಟಿಫಿಕೇಶನ್
ಬೆಂಗಳೂರು : ಇಡೀ ದೇಶಾದ್ಯಂತ ಕಾರ್ಪೋರೇಷನ್ ಎಲೆಕ್ಷನ್ ನಡೆಸುವಂತೆ ಸುಪ್ರೀಂಕೋರ್ಟ್ (Supreme Court) ತ್ರಿದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ. ಈ ಸಂಬಂಧ ಎರಡು ವಾರಗಳಲ್ಲಿ ನೋಟಿಫಿಕೇಶನ್ ಹೊರಡಿಸುವಂತೆ ಸರ್ವೋಚ್ಛ ನ್ಯಾಯಾಲಯ ಹೇಳಿದ್ದು ಈ ಮೂಲಕ ಬಿಬಿಎಂಪಿ ಚುನಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ.
ಸುರೇಶ್ ಮೋಹನ್ ಹಾಗೂ ಮಧ್ಯ ಪ್ರದೇಶಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್ ಎಸ್ಸಿ, ಎಸ್ಟಿ ಮೀಸಲಾತಿ ಹೊರತುಪಡಿಸಿ ಉಳಿದವುಗಳನ್ನು ಜನರಲ್ ಎಂದು ಪರಿಗಣಿಸಿ ಚುನಾವಣೆ ನಡೆಸಿ , ಹಳೆ ವಾರ್ಡ್ ಸಂಖ್ಯೆಗೆ ಚುನಾವಣೆ ಮಾಡಿ ಎಂದು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ . 243 ವಾರ್ಡ್ಗಳ ಬದಲಾಗಿ 198 ವಾರ್ಡ್ಗಳಿಗೆ ಬಿಬಿಎಂಪಿ ಚುನಾವಣೆಗೆ ನಡೆಯಲಿದೆ.
2020ರ ಸೆಪ್ಟೆಂಬರ್ 23ರಂದು ಹೊರಡಿಸಿರುವ ಅಧಿಸೂಚನೆಯಂತೆ ಕರ್ನಾಟಕ ನಗರ ಪಾಲಿಕೆಯ ಮೂರನೇ ತಿದ್ದುಪಡಿಸಿ ಕಾಯ್ದೆಯ ಪ್ರಕಾರ 243 ಬಿಬಿಎಂಪಿ ವಾರ್ಡ್ಗಳಿಗೆ ಬದಲಾಗಿ 198 ವಾರ್ಡ್ಗಳಿಗೆ ಆರು ವಾರಗಳ ಒಳಗಾಗಿ ಚುನಾವಣೆ ನಡೆಸಿ ಎಂದು ರಾಜ್ಯ ಹೈಕೋರ್ಟ್ 2020ರ ಡಿಸೆಂಬರ್ ನಾಲ್ಕರಂದು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಆದರೆ ರಾಜ್ಯ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿದ್ದ ರಾಜ್ಯ ವಿಧಾನಸಭೆಯು 243 ವಾರ್ಡ್ಗಳಿಗೆ ಚುನಾವಣೆ ನಡೆಯಲಿ ಎಂದು ಹೇಳಿತ್ತು.
ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ ಕುರಿತಂತೆ ಮಧ್ಯಪ್ರದೇಶದಿಂದ ಸಲ್ಲಿಕೆಯಾದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ 2ವಾರಗಳ ಒಳಗಾಗಿ ಸ್ಥಳೀಯ ಚುನಾವಣೆಗಳಿಗೆ ನೋಟಿಫಿಕೇಶನ್ ಹೊರಡಿಸುವಂತೆ ಹೇಳಿದೆ.
ಇನ್ನು ಈ ವಿಚಾರವಾಗಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಸುಪ್ರೀಂ ಕೋರ್ಟ್ ಬಿಬಿಎಂಪಿ ಚುನಾವಣೆಯನ್ನು ನಡೆಸುವಂತೆ ಹಸಿರು ನಿಶಾನೆಯನ್ನು ನೀಡಿದೆ. ನಾವು ಬೂತ್ ಮಟ್ಟದಲ್ಲಿ ಕೆಲಸ ಮಾಡಿದ್ದು ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ. ಯಾವುದೇ ಕಾರಣಕ್ಕೂ ನಾವು ಚುನಾವಣೆಗೆ ಹೆದರಿಕೊಳ್ಳುವುದಿಲ್ಲ ಎಂದು ಹೇಳಿದರು.
ಇದನ್ನು ಓದಿ : CSK vs DC Prithvi Shaw : ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಪೃಥ್ವಿ ಶಾ ಆಸ್ಪತ್ರೆಗೆ ದಾಖಲು
ಇದನ್ನೂ ಓದಿ : Chris Gayle : IPL 2022ನಲ್ಲಿ ಕ್ರಿಸ್ಗೇಲ್ ಹೊರಗುಳಿದಿದ್ಯಾಕೆ ? ಕೊನೆಗೂ ಬಯಲಾಯ್ತು ನಿಜವಾದ ಕಾರಣ
engineer exam illegal court sent accused to 10 days police custody