Tomato flu : ಕೇರಳದಲ್ಲಿ ಟೊಮ್ಯಾಟೋ ಜ್ವರ : ಏನಿದರ ಲಕ್ಷಣ,ಚಿಕಿತ್ಸೆ ಹೇಗೆ – ಇಲ್ಲಿದೆ ಮಾಹಿತಿ

ಕೇರಳ :Tomato flu : ಕೊರೊನಾ ವೈರಸ್​ ಸೋಂಕು ಹೆಚ್ಚುತ್ತಿರುವುದರ ನಡುವೆಯೇ ಕೇರಳ ಹಲವೆಡೆ ಮತ್ತೊಂದು ಹೊಸ ವೈರಸ್​ ಪತ್ತೆಯಾಗಿದೆ. ಇದಕ್ಕೆ ತಜ್ಞರು ಟೊಮ್ಯಾಟೋ ಜ್ವರ ಎಂದು ಹೆಸರಿಟ್ಟಿದ್ದಾರೆ.ಈ ಅಪರೂಪದ ವೈರಲ್​ ಕಾಯಿಲೆಯು ಕೇರಳದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 80ಕ್ಕೂ ಅಧಿಕ ಮಕ್ಕಳಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ವರದಿಗಳು ತಿಳಿಸಿವೆ.
ಕೇರಳದಲ್ಲಿ ಟೊಮ್ಯಾಟೋ ಜ್ವರ ಹೆಚ್ಚುತ್ತಿರುವ ನಡುವೆಯೇ ತಮಿಳು ನಾಡು ಕೇರಳ ಗಡಿಯಲ್ಲಿರುವ ವಾಳಯಾರ್​ನಲ್ಲಿ ಗಡಿ ಪ್ರವೇಶಿಸುತ್ತಿರುವ ಪ್ರಯೊಬ್ಬರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ವರದಿಯಾಗಿದೆ. ಇಬ್ಬರು ವೈದ್ಯಕೀಯ ಅಧಿಕಾರಿಗಳು ಪ್ರಯಾಣಿಕರನ್ನು ಅದರಲ್ಲೂ ವಿಶೇಷವಾಗಿ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ.


ಇದರೊಂದಿಗೆ ಅಂಗನವಾಡಿಗಳಲ್ಲಿ ಐದು ವರ್ಷದೊಳಗಿನ ಮಕ್ಕಳ ತಪಾಸಣೆಗೆ 24 ಸದಸ್ಯರ ತಂಡವನ್ನು ರಚಿಸಲಾಗಿದೆ.


ಏನಿದು ಟೊಮ್ಯಾಟೋ ಜ್ವರ.. ?
ಟೊಮ್ಯಾಟೋ ಜ್ವರ ಎಂಬುದು ಒಂದು ಹೊಸ ಮಾದರಿಯ ಕಾಯಿಲೆಯಾಗಿದ್ದು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಜ್ವರಕ್ಕೆ ಗುರಿಯಾದ ಮಕ್ಕಳ ದೇಹದ ಮೇಲೆ ದದ್ದುಗಳು ಹಾಗೂ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಕೆಂಪು ಬಣ್ಣದಲ್ಲಿ ಇರುತ್ತದೆ. ಇದೇ ಕಾರಣಕ್ಕೆ ಈ ಜ್ವರಕ್ಕೆ ಟೊಮ್ಯಾಟೋ ಜ್ವರ ಎಂದು ಹೆಸರಿಡಲಾಗಿದೆ. ವರದಿಗಳ ಪ್ರಕಾರ ಇದು ವೈರಲ್​ ಜ್ವರಗಳಾದ ಚಿಕೂನ್​ ಗುನ್ಯಾ ಅಥವಾ ಡೆಂಗ್ಯೂ ಜ್ವರಗಳಲ್ಲೇ ಇನ್ನೊಂದು ವಿಧ ಎಂದು ಭಾವಿಸಲಾಗಿದೆಯಾದರೂ ಇದರ ಪರಿಣಾಮಗಳ ಬಗ್ಗೆ ಈಗಷ್ಟೇ ಅಧ್ಯಯನಗಳು ಆರಂಭವಾಗಿವೆ . ಕೇರಳದ ಕೆಲವು ಭಾಗಗಳಲ್ಲಿ ಮಾತ್ರ ಈ ರೋಗ ಕಂಡು ಬಂದಿದೆ. ಈಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ ಮುಂದೆ ವೈರಸ್​ ಇನ್ನಷ್ಟು ಹೆಚ್ಚಬಹುದು ಎಂದು ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ರೋಗಲಕ್ಷಣಗಳು ಯಾವುವು?

ರೋಗದ ಮುಖ್ಯ ಲಕ್ಷಣಗಳೆಂದರೆ ದದ್ದುಗಳು, ಕೆಂಪು ಬಣ್ಣದ ಗುಳ್ಳೆಗಳು, ಚರ್ಮದ ಕಿರಿಕಿರಿ ಮತ್ತು ನಿರ್ಜಲೀಕರಣ. ಇದಲ್ಲದೆ, ಸೋಂಕಿತ ಮಕ್ಕಳಿಗೆ ತೀವ್ರ ಜ್ವರ, ಮೈ ಕೈ ನೋವು, ಕೀಲು ಊತ, ಸುಸ್ತು, ಹೊಟ್ಟೆಯಲ್ಲಿ ಸೆಳೆತ, ವಾಕರಿಕೆ, ವಾಂತಿ, ಭೇದಿ, ಕೈ, ಮೊಣಕಾಲು, ಪೃಷ್ಠದ ಬಣ್ಣ ಬದಲಾಗುವುದು, ಕೆಮ್ಮು, ಸೀನುವಿಕೆ ಮತ್ತು ಮೂಗು ಸೋರುವಿಕೆ ಇರುತ್ತದೆ

.
ಜ್ವರವನ್ನು ಹೇಗೆ ಎದುರಿಸುವುದು?

ಮಗುವಿಗೆ ಯಾವುದೇ ಜ್ವರ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು. ಸೋಂಕಿತ ಮಗು ಗುಳ್ಳೆಗಳನ್ನು ಒಡೆದುಕೊಳ್ಳದಂತೆ ನೋಡಿಕೊಳ್ಳಬೇಕು. ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಸರಿಯಾಗಿ ವಿಶ್ರಾಂತಿ ನೀಡಬೇಕು.

ಇದನ್ನು ಓದಿ : CSK vs DC Prithvi Shaw : ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಪೃಥ್ವಿ ಶಾ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : supreme court : ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ : 2 ವಾರಗಳಲ್ಲಿ ನೋಟಿಫಿಕೇಶನ್​​

Tomato flu detected in Kerala: What is the virus, its symptoms| Know here

Comments are closed.