ಶುಕ್ರವಾರ, ಮೇ 9, 2025
HomeeducationKarnataka SSLC Result 2022 : ಗುರುವಾರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ : ಪರಿಶೀಲಿಸಲು ಇಲ್ಲಿ...

Karnataka SSLC Result 2022 : ಗುರುವಾರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ : ಪರಿಶೀಲಿಸಲು ಇಲ್ಲಿ ಕ್ಲಿಕ್‌ ಮಾಡಿ

- Advertisement -

ಬೆಂಗಳೂರು : ಕರ್ನಾಟಕ ರಾಜ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ (Karnataka SSLC Result 2022) ಫಲಿತಾಂಶ ಗುರುವಾರ ಪ್ರಕಟವಾಗಲಿದೆ. ಮಧ್ಯಾಹ್ನ 12.30 ಕ್ಕೆ ಫಲಿತಾಂಶ ಪ್ರಕಟವಾಗಲಿದ್ದು, ಮಧ್ಯಾಹ್ನ 1 ಗಂಟೆಯ ನಂತರ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಹಾಗೂ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.

ಮಾರ್ಚ್‌ 28 ರಿಂದ ಏಪ್ರಿಲ್ 11 ರವರಗೆ ಎಸ್‍ಎಸ್‍ಎಲ್‌ಸಿ ವಾರ್ಷಿಕ ಪರೀಕ್ಷೆ ನಡೆದಿತ್ತು. ಈ ಬಾರಿ ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಮುಖ್ಯ ಪರೀಕ್ಷೆಗೆ 15,387 ಶಾಲೆಗಳಿಂದ 8,73,884 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 4,52,732 ವಿದ್ಯಾರ್ಥಿಗಳು, 4,21,110 ವಿದ್ಯಾರ್ಥಿನಿಯರು ಮತ್ತು 4 ತೃತೀಯ ಲಿಂಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅಲ್ಲದೆ ವಿಭಿನ್ನ ಸಾಮರ್ಥ್ಯವುಳ್ಳ 5,307 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ವಿದ್ಯಾರ್ಥಿಗಳು ಈ ಬಾರಿ ತಮ್ಮ ಮೊಬೈಲ್‌ನಲ್ಲಿಯೇ ಫಲಿತಾಂಶವನ್ನು ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ತಾವು ನೋಂದಾಯಿಸಿಕೊಂಡಿರುವ ಮೊಬೈಲ್‌ ನಂಬರ್‌ ಗೆ ಎಸ್‌ಎಂಎಸ್‌ ಮೂಲಕ ಫಲಿತಾಂಶವನ್ನು ಕಳುಹಿಸಲು ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಇನ್ನು ಮಧ್ಯಾಹ್ನ ೧ ಗಂಟೆಯ ನಂತರ ಫಲಿತಾಂಶವನ್ನು ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ karresults.nic.in ನಲ್ಲಿ ಲಭ್ಯವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Karnataka SSLC Result 2022 ವಿದ್ಯಾರ್ಥಿಗಳಿಗೆ ಸಿಗಲಿದೆ ಶೇಕಡಾ 10 ಗ್ರೇಸ್ ಅಂಕ

ಕೊರೋನಾದಿಂದ ಕಳೆದ ಎರಡು ವರ್ಷಗಳಿಂದ ಕರ್ನಾಟಕವೂ ಸೇರಿದಂತೆ ದೇಶದ ಎಲ್ಲೆಡೆ ಶೈಕ್ಷಣಿಕ ಚಟುವಟಿಕೆಗಳ‌ ಮೇಲೆ ಕಾರ್ಮೋಡ ಕವಿದಿತ್ತು. ಹೀಗಾಗಿ ಮಕ್ಕಳು ಆನ್ ಲೈನ್ ಶಿಕ್ಷಣದಲ್ಲೇ ಪಾಠಕಲಿಯುವ ಸ್ಥಿತಿ ಇತ್ತು. ಅದರಲ್ಲೂ ವಿಶೇಷವಾಗಿ ಈ ಭಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ನೇರವಾಗಿ 8ನೇ ತರಗತಿಯಿಂದ ಎಸ್ ಎಸ್ ಎಲ್ ಸಿ ಗೆ ಬಂದಂತ ಸ್ಥಿತಿ. ಹೀಗೆ ಆತಂಕದಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ರಾಜ್ಯ ಶಿಕ್ಷಣ ಇಲಾಖೆ ಸಿಹಿಸುದ್ದಿ (SSLC Grace marks ) ನೀಡಿದೆ.

ಹೌದು, ಕೆಲವೇ ಅಂಕಗಳಲ್ಲಿ ಫೇಲ್ ಆಗೋ ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ಮಾಡಲು ನಿರ್ಧರಿಸಿದೆ. ಮೂರು ವಿಷಯಗಳಲ್ಲಿ ಕೆಲವೇ ಅಂಕಗಳಲ್ಲಿ ಫೇಲಾಗುವ ವಿದ್ಯಾರ್ಥಿಗಳಿಗೆ ವಿಶೇಷ ವಾಗಿ ಅನ್ವಯವಾಗಲಿದೆ. ಯಾವುದೇ ಮೂರು ವಿಷಯಗಳಿಗೆ ಈ ಗ್ರೇಸ್ ಅಂಕ ಅನ್ವಯವಾಗಲಿದೆ. ಈ ಮೊದಲು ಕೇವಲ ಶೇ 5 ರಷ್ಟು ಗ್ರೇಸ್ ಅಂಕ ನೀಡಲಾಗುತ್ತಿತ್ತು. ಈಗ ಮೂರು ವಿಷಯಗಳಿಗೆ ಶೇ.10ರಷ್ಟು ಗ್ರೇಸ್ ನೀಡಲು ನಿರ್ಧಾರ ಮಾಡಲಾಗಿದೆ. ಈ ಮೊದಲು ಶೇ.5ರಷ್ಟು ಗ್ರೇಸ್ ಅಂಕ ನೀಡಲಾಗುತ್ತಿತ್ತು. ಕೋವಿಡ್ ಕಾರಣಕ್ಕೆ ಶೇ.10ಕ್ಕೆ ಏರಿಸಲಾಗಿತ್ತು. ಅದೇ ನಿಯಮವನ್ನು ಈ ವರುಷವೂ ಮುಂದುವರಿಸಲು ತೀರ್ಮಾನ ಮಾಡಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಮೂರು ಥಿಯರಿ ಪರೀಕ್ಷೆ ಸೇರಿ 26 ಅಂಕ ಕೃಪಾಂಕ ನೀಡಲು ನಿರ್ಧಾರ ಆದರೆ ಮೂರು ವಿಷಯಗಳಲ್ಲಿ ಕೃಪಾಂಕ ನೀಡಿದರೂ ಪಾಸಾಗಲಿಲ್ಲವೆಂದರೆ ಅಂಥಹ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡುವುದಿಲ್ಲ ಎಂದಿದ್ದಾರೆ.

Karnataka SSLC Result 2022 ಫಲಿತಾಂಶವನ್ನು ಪರಿಶೀಲಿಸಲು ಹಂತ ಹಂತದ ವಿವರಗಳು :

ಹಂತ 1 – ಕರ್ನಾಟಕ ಬೋರ್ಡ್ ಫಲಿತಾಂಶ ವೆಬ್‌ಸೈಟ್‌ಗೆ ಭೇಟಿ ನೀಡಿ : karresults.nic.in 2022 SSLC ಫಲಿತಾಂಶ.

ಹಂತ 2 – ಇದು 2022 ರ SSLC ವೆಬ್‌ಸೈಟ್‌ನಲ್ಲಿ Karresults nic ನ ಮುಖಪುಟವನ್ನು ತೆರೆಯುತ್ತದೆ.

ಹಂತ 3 – 10 ನೇ ಫಲಿತಾಂಶ ಕರ್ನಾಟಕ 2022 ವೆಬ್‌ಸೈಟ್‌ನಲ್ಲಿ, ಕರ್ನಾಟಕ SSLC ಎಂದು ಹೇಳುವ ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 4 – ಇದು KSEEB SSLC ಫಲಿತಾಂಶ 2022 ಲಾಗಿನ್ ವಿಂಡೋಗೆ ಕಾರಣವಾಗುತ್ತದೆ.

ಹಂತ 5 – kseeb.kar.nic.in 2022 ಫಲಿತಾಂಶ ವಿಂಡೋದಲ್ಲಿ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.

ಹಂತ 6 – SSLC ಫಲಿತಾಂಶ 2022 ಕರ್ನಾಟಕವು ಪರದೆಯ ಮೇಲೆ ಕಾಣಿಸುತ್ತದೆ.

ಹಂತ 7 – SSLC ಫಲಿತಾಂಶ ಪರಿಶೀಲನೆಯ ನಂತರ ಪ್ರಿಂಟ್‌ಔಟ್ ಅಥವಾ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ ಮತ್ತು ಭವಿಷ್ಯದ ಉಲ್ಲೇಖಗಳಿಗಾಗಿ ಅದನ್ನು ಸುರಕ್ಷಿತವಾಗಿರಿಸಿಕೊಳ್ಳಿ.

ಇದನ್ನೂ ಓದಿ : Price History ‘ಪ್ರೈಸ್ ಹಿಸ್ಟರಿ’ ಎಂಬ ಆನ್‌ಲೈನ್ ಶಾಪಿಂಗ್ ಮಾರ್ಗದರ್ಶಿ

ಇದನ್ನೂ ಓದಿ : CBSE Term 2 Exam Results : ಸಿಬಿಎಸ್‌ಇ ಟರ್ಮ್ 2 ಪರೀಕ್ಷೆಯ ಫಲಿತಾಂಶ ಯಾವಾಗ ?

Karnataka SSLC Result 2022 Declare Click here to Check

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular