Cannes 2022 Red Carpet : ತೀರ್ಪುಗಾರರಾಗಿ ಗಮನ ಸೆಳೆದ ದೀಪಿಕಾ ಪಡುಕೋಣೆ! ವಿಷಯ ತಿಳಿದ ಅಭಿಮಾನಿಗಳು ಫುಲ್‌ ಖುಷ್‌..!!

ಎಲ್ಲರ ಗಮನ ದೀಪಿಕಾ ಪಡುಕೋಣೆ ಯತ್ತ ಏಕೆಂದರೆ ಫ್ರಾನ್ಸ್‌ನಲ್ಲಿ ( France) ನಡೆಯಲಿರುವ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಖ್ಯಾತ ನಟಿ ದೀಪಿಕಾ ಪಡುಕೋಣೆ ತೀರ್ಪುಗಾರರಾಗಿದ್ದಾರೆ. ಈ ವಿಷಯ ತಿಳಿದ ಅಭಿಮಾನಿಗಳಿಗೆ ಅಂತು ಫುಲ್ ಖುಷ್. ಹೌದು ನಿನ್ನೆಯಿಂದ ಮೇ 28ರವರೆಗೆ ಪ್ರತಿಷ್ಠಿತ ಕ್ಯಾನೆಸ್ (2022 Cannes Film Festival ) ಚಲನಚಿತ್ರೋತ್ಸವ ನಡೆಯಲಿದೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ವಿವಿಧ ಕಡೆಯಿಂದ ಕಲಾವಿದರು ಆಗಮಿಸುತ್ತಾರೆ. ಇನ್ನೂವಿಶೇಷವಾಗಿ ನಟಿ ದೀಪಿಕಾ ಪಡುಕೋಣೆ ರೆಟ್ರೋ ಸೀರೆಯಲ್ಲಿ ( Retro Saree)ಕಾಣಿಸಿಕೊಂಡ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದೆ.

ದೀಪಿಕಾ ಪಡುಕೋಣೆ ತನ್ನ ವಿಭಿನ್ನ ಸಿನಿಮಾ ಹಾಗೂ ಅಭಿನಯದಿಂದ ಜನರನ್ನು ಮೆಚ್ಚುಗೆಯ ಪಾತ್ರರಾಗಿದ್ದಾರೆ. ಇನ್ನೂ ಫ್ರಾನ್ಸ್‌ನಲ್ಲಿ ನಡೆಯಲಿರುವ ಕ್ಯಾನೆಸ್ 75ನೇ ಚಲನಚಿತ್ರೋತ್ಸವು ಇದಾಗಿದೆ. ಈ ಹಿಂದೆ 2013ರಲ್ಲಿ ವಿದ್ಯಾ ಬಾಲನ್ ಅವರು ತೀರ್ಪುಗಾರರಾಗಿದ್ದರು, ಆ ನಂತರದಲ್ಲಿ ಆಸನವನ್ನು ಇದೀಗ ದೀಪಿಕಾ ತುಂಬುತ್ತಿದ್ದಾರೆ. ಸವ್ಯವಾಚಿ ಮುಖರ್ಜಿ ವಿನ್ಯಾಸ ಮಾಡಿರುವ ಉಡುಗೆಯನ್ನು ದೀಪಿಕಾ ಪಡುಕೋಣೆ ಧರಿಸಿದ್ದಾರೆ. ಸೀರೆಯನ್ನು ಉಟ್ಟು ದೀಪಿಕಾ ತುಂಬಾ ಸುಂದರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿಮಗೆ ತೀರ್ಪುಗಾರರಾಗಿ ಕೆಲಸ ಮಾಡುವುದು ಕಷ್ಟವೇ ??
ಅದಕ್ಕೆ ಉತ್ತರ ನೀಡಿದ ದೀಪಿಕಾ,ಇದು ತುಂಬ ದೊಡ್ಡ ಗೌರವ. ಅಪರೂಪಕ್ಕೆ ನಮಗೆ ಅವಕಾಶ ಸಿಕ್ಕಾಗ, ನಾವು ಅದನ್ನು ತುಂಬಾ ನಮ್ರತೆ ಮತ್ತು ಕೃತಜ್ಞತೆಯಿಂದ ತೆಗೆದುಕೊಳ್ಳಬೇಕು. ಸಿನಿಮಾ ತುಂಬ ಬಲಶಾಲಿಯಾದುದು, ಜನರ ಜೀವನದ ಮೇಲೆ ಪರಿಣಾಮ ಬೀರಬಹುದಾದಂತಹ ತಾಕತ್ತು ಸಿನಿಮಾಕ್ಕಿದೆ. ನಾವೆಲ್ಲ ಸೃಜನಶೀಲ ವ್ಯಕ್ತಿಗಳು, ನಾವು ಯಾರೂ ಇಲ್ಲಿ ವಿಮರ್ಶೆ ಮಾಡುವುದು, ತೀರ್ಪು ನೀಡುವುದು ಆಗದು ಎಂದು ನನಗೆ ಅನಿಸುತ್ತದೆ. ತೀರ್ಪುಗಾರರಾಗಿ ಕೆಲಸ ಮಾಡುವುದು ಬಹುದೊಡ್ಡ ಜವಾಬ್ದಾರಿ ಎಂದು ಎಲ್ಲರಿಗೂ ಗೊತ್ತಿದೆ. ನಮಗೆ ನಾವೇ ಕಷ್ಟ ತಂದುಕೊಳ್ಳಬಾರದು ಎಂದು ನಾವೆಲ್ಲ ಟೀಮ್ ನೊಂದಿಗೆ ಚರ್ಚೆ ನಡೆಸಿದೆವು.ಇಲ್ಲಿ ನಾನು ತೀರ್ಪು ನೀಡುವುದಕ್ಕಿಂತ ಸೃಜನಶೀಲತೆಯನ್ನು ಎಂಜಾಯ್ ಮಾಡಲು ಬಯಸುವೆ. ಎಂದು ವ್ಯಕ್ತಪಡಿಸಿದರು.

ಸೀರೆಯೇ ಒಂದು ಕಥೆ
”ಈ ಚಲನಚಿತ್ರೋತ್ಸವದಲ್ಲಿ ದೀಪಿಕಾ ಸೀರೆಯುಟ್ಟಿದ್ದಾರೆ. ಈ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸೀರೆಯೇ ಒಂದು ಕಥೆ, ಅದನ್ನು ಹೇಳಿ ಮುಗಿಸಲಾಗದು. ನಾವು ವಿಶ್ವದಲ್ಲಿ ಎಲ್ಲಿಯೇ ಇದ್ದರೂ ಕೂಡ ಅದಕ್ಕೆ ಅದರದ್ದೇ ಆದ ಜಾಗವಿದೆ ಎಂದು ಸಬ್ಯಸಾಚಿ ಮುಖರ್ಜಿ ಹೇಳಿದ್ದಾರೆ. ಅದನ್ನು ನಾನು ಒಪ್ಪದೇ ಇರಲಾಗದು”

ಈ ಹಿಂದಿನ ತೀರ್ಪುಗಾರರಾದವರು
ಮೃಣಾಲ್ ಸೇನ್ (1982)
ನಿರ್ದೇಶಕಿ ಮೀರಾ ನಾಯರ್ (1990)
ಅರುಂಧತಿ ರಾಯ್ (2000)
ಐಶ್ವರ್ಯಾ ರೈ ಬಚ್ಚನ್ ( 2003 )
ನಂದಿತಾ ದಾಸ್ (2005)
ಶರ್ಮಿಳಾ ಠಾಗೋರ್ ( 2009 )
ಶೇಖರ್ ಕಪೂರ್ ( 2010 )
ವಿದ್ಯಾ ಬಾಲನ್ (2013)

ಇದನ್ನೂ ಓದಿ : tomato flu High Alert : ಮಕ್ಕಳಿಗೆ ಟೊಮ್ಯಾಟೊ ಜ್ವರ, ಕರ್ನಾಟಕದಲ್ಲಿ ಹೈ ಅಲರ್ಟ್‌ : ಡಾ.ಸುಧಾಕರ್ ಸೂಚನೆ

ಇದನ್ನೂ ಓದಿ : Cannes 2022 Red Carpet : ರೆಟ್ರೋ ಸಾರಿಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ! ಫುಲ್‌ ಫಿದಾ ಆದ್ರು ಫಾನ್ಸ್‌!!

(Cannes 2022 Red Carpet Deepika Padukone in jury duty)

Comments are closed.