ಸೋಮವಾರ, ಏಪ್ರಿಲ್ 28, 2025
HomeCoastal NewsNot Sell for CRZ sand : ಸಿಆರ್‌ಝಡ್ ವ್ಯಾಪ್ತಿಯ ಮರಳು ಮಾರಾಟ ಮಾಡುವಂತಿಲ್ಲ :...

Not Sell for CRZ sand : ಸಿಆರ್‌ಝಡ್ ವ್ಯಾಪ್ತಿಯ ಮರಳು ಮಾರಾಟ ಮಾಡುವಂತಿಲ್ಲ : ಹಸಿರು ಪೀಠ ಮಹತ್ವದ ಆದೇಶ

- Advertisement -

ಉಡುಪಿ : ಕರಾವಳಿ ಭಾಗದ ಮರುಳುಗಾರಿಕೆಗೆ ಹಸಿರು ಪೀಠ ಮಹತ್ವದ ಆದೇಶ ನೀಡಿದೆ. ಸಿಆರ್‌ಝಡ್ (ಉಪ್ಪು ನೀರಿನ ನದಿಯಲ್ಲಿ) ಪ್ರದೇಶದಲ್ಲಿ ತೆಗೆದಿರುವ ಮರಳನ್ನು ಮಾರಾಟ (Not Sell for CRZ sand ) ಮಾಡುವಂತೆ ಇಲ್ಲ ಎಂದು ರಾಷ್ಟ್ರೀಯ ಹಸಿರು ಪೀಠ ಆದೇಶ ಮಾಡಿದೆ. ಪರ್ಮಿಟ್ ಪ್ರಕ್ರಿಯೆ ರಾಜಧನ ಸಂಗ್ರಹ , ಹೊರಗಡೆ ಮರಳು ಮಾರಾಟಕ್ಕೆ ಅನುಮತಿ ನೀಡಿರುವ ರಾಜ್ಯ ಸರಕಾರದ ನಿಯಮಾವಳಿಯೂ ಕೂಡ ಸಿಆರ್‌ಝಡ್ ಅಧಿಸೂಚನೆಯಲ್ಲಿ ನಿಷೇಧಿಸಲಾದ ಮರಳುಗಾರಿಕೆಗೆ ಸಮವಾಗಿದೆ ಎಂದಿದೆ. ಸಿಆರ್‌ಝಡ್ ಪ್ರದೇಶದಲ್ಲಿ ಮರಳನ್ನು ತೆಗೆಯುವುದೇ ಆದರೆ ಅದನ್ನು ಮಾರಾಟ (Not Sell for CRZ sand) ಮಾಡುವಂತಿಲ್ಲ. ತೆಗೆದಿರುವ ಮರಳನ್ನು ಕೇವಲ ನದಿ ಪಾತ್ರವನ್ನು ಸಮತಟ್ಟು ಮಾಡಲು ಅಥವಾ ನದಿಪಾತ್ರದ ದಂಡೆ ಗಟ್ಟಿಗೊಳಿಸಲು ಬಳಸಬೇಕು ಎಂದು ಸೂಚನೆ ನೀಡಲಾಗಿದೆ.

ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ಪೀಠದ ದಕ್ಷಿಣ ವಿಭಾಗದ ನ್ಯಾಯಾಂಗ ಸದಸ್ಯ ಕೆ ರಾಮಕೃಷ್ಣನ್, ತಜ್ಞ ಸದಸ್ಯ ಡಾ. ಸತ್ಯ ಗೋಪಾಲ ಕೊರ್ಲಪಾಟಿ ಅವರಿದ್ದ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ. ಪರವಾನಿಗೆ ಹೊಂದಿರುವವರು ಅಥವಾ ಅವರ ಕುಟುಂಬದ ಸದಸ್ಯರು ಮಾತ್ರ ಕಟ್ಟುನಿಟ್ಟಾಗಿ ಸಾಂಪ್ರದಾಯಿಕ ವಿಧಾನಗಳನ್ನು ಮಾತ್ರ ಬಳಸಿ ಮರಳು ತೆಗೆಯಬೇಕು. ಯಾವುದೇ ಉಪಗುತ್ತಿಗೆ ಅಥವಾ ಬಾಹ್ಯ ಕಾರ್ಮಿಕರ ನಿಯೋಜನೆ ಇರಬಾರದು ಎಂಬುದನ್ನು ಪೀಠವು ಸ್ಪಷ್ಟಪಡಿಸಿದೆ.

ಉಡುಪಿ ಜಿಲ್ಲೆಯಲ್ಲಿ ಸಿಆರ್‌ಝಡ್ ವ್ಯಾಪ್ತಿಯಲ್ಲಿ 23 ಮರಳು ದಿಬ್ಬಗಳನ್ನು ಗುರುತಿಸಿ ರಾಜ್ಯ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರ ಅನುಮೋದನೆ ನೀಡಿತ್ತು. ಅದರಲ್ಲಿ ನಾಲ್ಕು ಮರಳು ದಿಬ್ಬಗಳು ಕುಂದಾಪುರ ವ್ಯಾಪ್ತಿಯಲ್ಲಿದ್ದು ಅದರ ಪರವಾನಿಗೆ ಅವಧಿ ಪೂರ್ಣಗೊಂಡಿದೆ. ಉಳಿದಂತೆ ಪ್ರಸ್ತುತ ಉಡುಪಿ ಬ್ರಹ್ಮಾವರ ಭಾಗದಲ್ಲಿ 13 ಮರಳು ದಿಬ್ಬಗಳಲ್ಲಿ ಮರಳನ್ನು ತೆರವುಗೊಳಿಸಲಾಗುತ್ತಿದೆ. ಸಿಆರ್‌ಝಡ್ ವ್ಯಾಪ್ತಿಯ ಮರಳು ತೆಗೆಯುವ ವಿಚಾರವಾಗಿ ಹಸಿರುಪೀಠ ನೀಡಿದ ಆದೇಶದ ಪ್ರಮಾಣಿಕೃತ ಪ್ರತಿಯನ್ನು ಪಡೆದು ಕೊಳ್ಳಬೇಕು. ಈ ಆದೇಶವನ್ನು ಜಿಲ್ಲಾ ಆಡಳಿತ ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಈ ಬಗ್ಗೆ ಗಣಿ ಇಲಾಖೆಯ ಅಧಿಕಾರಿಗಳಿಗೂ ಸ್ಪಷ್ಟ ಸೂಚನೆಯನ್ನು ನೀಡಿದ್ದೇವೆ ಎಂದು ಉಡುಪಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆಯನ್ನು ನಡೆಸಿ ಆ ಮರಳನ್ನು ಇಷ್ಟು ದಿನಗಳ ಕಾಲ ಕಟ್ಟಡ ನಿರ್ಮಾಣ ಸೇರಿದಂತೆ ಹೊರ ಜಿಲ್ಲೆಗಳಿಗೂ ಸಾಗಾಟ ಮಾಡಲಾಗುತ್ತಿದೆ. ಆದರೆ ಇದೀಗ ಹಸಿರು ಪೀಠದ ಆದೇಶ ಮರಳುಗಾರಿಕೆ ನಡೆಸುತ್ತಿರುವವರಿಗೆ ಶಾಕ್‌ ಕೊಟ್ಟಿದೆ.

ಇದನ್ನೂ ಓದಿ : ಮರಕ್ಕೆ ಕ್ರೂಸರ್‌ ಢಿಕ್ಕಿ 7 ಮಂದಿ ಸಾವು, 6 ಮಂದಿ ಗಂಭೀರ : ನಿಶ್ಚಿತಾರ್ಥ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ದುರಂತ

ಇದನ್ನೂ ಓದಿ : Dengue fever : ಕುಂದಾಪುರದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಪ್ರಕರಣ : ಏನಿದರ ಲಕ್ಷಣ

Not Sell for CRZ sand, National Green Tribunal orders

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular