WhatsApp Tips And Tricks : WhatsApp ನ ಈ ಸಿಕ್ರೇಟ್‌ ಫೀಚರ್‌ಗಳು ನಿಮಗೆ ಗೊತ್ತಾ?

ಮೆಟಾ ಒಡೆತನದಲ್ಲಿರುವ WhatsApp ತನ್ನ ಬಳಕೆದಾರರಿಗೆ ಹಲವಾರು ಹೊಸ ಹೊಸ ಫಿಚರ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ(WhatsApp Tips And Tricks ). ಕೆಲವು ನಮ್ಮೆಲ್ಲರಿಗೂ ತಿಳಿದಿದೆ. ಕೆಲವು ಸಿಕ್ರಿಟ್‌ ಆಗಿಯೇ ಉಳಿದಿದೆ. ಬಹಳಷ್ಟು ಫೀಚರ್‌ಗಳಿಗಾಗಿ ನಾವು ಹುಡುಕುತ್ತೇವೆ. ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ WhatsApp ಅನ್ನು ಸುಲಭವಾಗಿ ಬಳಸುವ ಮಾರ್ಗಗಳನ್ನು ಹುಡುಕುತ್ತೇವೆ? ನಿಮಗಿದು ಗೊತ್ತೇ? ನೀವು ಕಳುಹಿಸುವ ಸಂದೇಶಗಳಲ್ಲಿಯ ಅಕ್ಷರಗಳನ್ನು ಸಹ ನೀವು ಫಾರ್ಮೆಟ್‌ ಮಾಡಬಹುದು ಮತ್ತು ಕೆಲವು ಸಂಭಾಷಣೆಗಳಿಗೆ ಹೆಚ್ಚಿನದನ್ನು ಸೇರಿಸಬಹುದು. ಪರ್ಯಾಯವಾಗಿ, ನಿಮ್ಮ PC ಯಲ್ಲಿಯೂ ನೀವು WhatsApp ಬಳಸಬಹುದು. ಹೀಗೆ ಹಲವಾರು ಫೀಚರ್‌ಗಳು ಸಿಕ್ರೆಟ್‌ ಆಗಿಯೇ ಇದೆ.

ನೀವು ತಿಳಿದುಕೊಳ್ಳಲೇ ಬೇಕಾದ WhatsApp ನ ವಿವಿಧ ಸಿಕ್ರಿಟ್‌ ಫೀಚರ್‌ಗಳು ಮತ್ತು ಟಿಪ್ಸ್‌ಗಳ ಮಾಹಿತಿ ಇಲ್ಲಿದೆ ನೋಡಿ.

ಟೆಕ್ಸ್ಟ್‌ಗಳನ್ನು ಫಾರ್ಮೆಟ್‌ ಮಾಡುವುದು :
WhatsApp ನಲ್ಲಿ ನೀವು ಬರೆದ ಟೆಕ್ಸ್ಟ್‌ಗಳನ್ನು ಬೋಲ್ಡ್‌, ಇಟಾಲಿಕ್‌ ಅಥವಾ ಸ್ಟ್ರೈಕ್‌ಥ್ರೂ ಮಾಡಬಹುದು. ಅದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ ನೀವು ಬರೆದ ಅಕ್ಷರಗಳ ಮೊದಲು ಮತ್ತು ನಂತರ ಕೆಲವು ಸ್ಪೆಶಲ್‌ ಕ್ಯಾರೆಕ್ಟರ್‌ಗಳನ್ನು ಬಳಸಿ ಫಾರ್ಮೆಟ್‌ ಮಡಬಹುದು.‌

  • ಅಕ್ಷರಗಳನ್ನು ಬೋಲ್ಡ್‌ ಮಾಡಲು * ಉಪಯೋಗಿಸಿ. (ಉದಾಹರಣೆಗೆ: *bold*)
  • ಅಕ್ಷರಗಳನ್ನು ಇಟಾಲಿಕ್‌ ಮಾಡಲು ಅಂಡರ್‌ಸ್ಕೋರ್‌ ಬಳಸಿ. (ಉದಾಹರಣೆಗೆ: _italics_)
  • ಅಕ್ಷರಗಳ ಹಿಂದೆ * ಬರಲು ಎರಡು ** ಉಪಯೋಗಿಸಿ (ಉದಾಹರಣೆಗೆ: **bold*)

ಮೆಸ್ಸೇಜ್‌ ಸ್ಟಾರ್‌ ಮಾಡಿ ಮತ್ತು ಸುಲಭವಾಗಿ ಹುಡುಕಿ:
ಮೆಸ್ಸೇಜ್‌ಗಳನ್ನು ಸ್ಟಾರ್‌ ಮಾಡುವುದರಿಂದ ಸುಲಭವಾಗಿ ಹುಡುಕಬಹುದು. ನೆನಪಿಟ್ಟುಕೊಳ್ಳಬೇಕಾದ ಮೆಸ್ಸೇಜ್‌ಗಳು, ಫೋನ್‌ ನಂಬರ್‌, ಲೋಕೆಷನ್‌, ಅಥವಾ ಕೆಲವು ಆರ್ಟಿಕಲ್‌ಗಳ ಲಿಂಕ್‌ಗಳು ಇವುಗಳನ್ನು ಸ್ಟಾರ್‌ ಮೆಸ್ಸೇಜ್‌ ಮಾಡುವುದರಿಂದ ನಿಮ್ಮ ಹುಡುಕುವ ಕೆಲಸವು ಸುಲಭವಾಗುತ್ತದೆ. ನಿಮಗೆ ಬೇಕಾದ ಮೆಸ್ಸೇಜ್‌ ನ ಮೇಲೆ ಸ್ವಲ್ಪ ಸಮಯದ ವರೆಗೆ ಲಾಂಗ್‌ ಪ್ರೆಸ್ ಮತ್ತು ಹೋಲ್ಡ್‌ ಮಾಡಿ. ಸ್ಟಾರ್‌ ಐಕಾನ್‌ ಅನ್ನು ಟಾಪ್‌ ಮಾಡಿ. ಚಿಕ್ಕದಾದ ಸ್ಟಾರ್‌ ಐಕಾನ್‌ ಮೆಸ್ಸೇಜ್‌ ಕಾಣಿಸುವುದು. ಇದು ನೀವು ನಂತರ ನೆವಿಗೇಟ್‌ ಮಾಡುವಾಗ ಸುಲಭವಾಗಿ ದೊರೆಯುವುದು.

ಇದನ್ನೂ ಓದಿ : WhatsApp Feature: ಇನ್ನು ಮುಂದೆ ವಾಟ್ಸ್‌ಅಪ್‌ ನಲ್ಲಿ 2 ಜಿಬಿ ಫೈಲ್‌ ಶೇರ್‌ ಮಾಡಲು ಅವಕಾಶ! ಇದು ವಾಟ್ಸ್‌ಅಪ್‌ ನ ಮುಂದಿನ ಅತಿ ದೊಡ್ಡ ಫೀಚರ್‌ ಆಗಬಹುದೇ?

ಮೆಸ್ಸೇಜ್‌ನ ಡಿಟೇಲ್ಸ್‌ ನೋಡುವುದು:
ಗ್ರೂಪ್‌ನಲ್ಲಿ ಹಾಕಿದ ಮೆಸ್ಸೇಜ್‌ ಡಿಲೀವರ್ಡ್‌ ಅಥವಾ ರೀಡ್‌ ಆಗಿದೆಯೇ ಎಂದು ತಿಳಿಯುವ ಕೌತುಕವಿರುತ್ತದೆ. ಅದಕ್ಕೆ ಹೀಗೆ ಮಾಡಿ, ಮಸ್ಸೇಜ್‌ ಮೇಲೆ ಲಾಂಗ್‌ ಪ್ರೆಸ್‌ ಮಾಡಿ, ಮೆನ್ಯು ಬಟನ್‌ ಮೇಲೆ ಟಾಪ್‌ ಮಾಡಿ, ನಂತರ ಇನ್ಫೋಗೆ ಹೋಗಿ ಚೆಕ್‌ ಮಾಡಿ.

ಕೊನೆಯದಾಗಿ ನೋಡಿದ ಸ್ಟೇಟಸ್‌ ಹೈಡ್‌ ಮಾಡುವುದು:
ನೀವು ಕೊನೆಯದಾಗಿ ಯಾವಾಗ ಆನ್‌ಲೈನ್‌ನಲ್ಲಿದ್ದಿರಿ ಎಂದು ಜನರು ತಿಳಿಯುವುದು ಕೆಲವೊಮ್ಮೆ ಒತ್ತಡವನ್ನು ತರುತ್ತದೆ. ಕೆಲವು ಸಂದರ್ಭಗಳಲ್ಲಿ ಅತ್ಯುತ್ತಮ ಸಂದೇಶಗಳಿಗೆ ಪ್ರತಿಕ್ರಿಯಿಸಲೇ ಬೇಕಾಗುತ್ತದೆ. ಕೊನೆಯದಾಗಿ ನೋಡಿದ ಸಮಯವನ್ನು ನಿಮ್ಮ ಸ್ನೇಹಿತರು ಅಥವಾ ಕ್ಯಾಶುವಲ್‌ ಕಾಂಟಾಕ್ಟ್‌ಗಳು ತಿಳಿಯಬಾರದು ಎಂದು ನೀವು ಬಯಸಿದರೆ ಹೀಗೆ ಮಾಡಿ.

ಸೆಟ್ಟಿಂಗ್ಸ್‌ ಗೆ ಹೋಗಿ, ಅಲ್ಲಿ ಅಕೌಂಟ್‌ ಆಯ್ದುಕೊಳ್ಳಿ, ನಂತರ ಪ್ರೈವೆಸಿ ಗೆ ಹೋಗಿ, ಅಲ್ಲಿ ಡ್ರಾಪ್‌ ಡೌನ್‌ನಿಂದ ಲಾಸ್ಟ್‌ ಸೀನ್‌ ಆಯ್ದುಕೊಳ್ಳಿ. ನಂತರ ಎವರಿಒನ್‌, ಮೈ ಕಾಂಟಾಕ್ಟ್‌, ಮತ್ತು ನೋಬಡಿ ಅಲ್ಲಿ ಯಾವುದು ಬೇಕೋ ಅದನ್ನು ಆಯ್ಕೆ ಮಾಡಿ.

ಸಂಭಾಷಣೆ ಮ್ಯೂಟ್‌ ಮಾಡಿ :
WhatsApp ಗ್ರೂಪ್‌ ಚಾಟ್‌ ಅಥವಾ ಸ್ನೇಹಿತರ ಚಾಟ್‌ ಮ್ಯೂಟ್‌ ಮಾಡುವ ಅವಕಾಶ ಒದಗಿಸಿದೆ. ಚಾಟ್‌ ಓಪನ್ ಮಾಡಿ, ಬಲಗಡೆಯ ಥ್ರೀ ಡಾಟ್‌ ಮೇಲೆ ಟಾಪ್‌ ಮಾಡಿ. ಅಲ್ಲಿ ಮ್ಯೂಟ್‌ ಆಯ್ದು ಕೊಳ್ಳಿ. ಇದು 8 ಗಂಟೆ, ಒಂದು ದಿನ ಅಥವಾ ಯಾವಾಗಲೂ ಎಂಬ ಆಪ್ಷನ್‌ ಸಹ ನೀಡುತ್ತದೆ.

ಇದನ್ನೂ ಓದಿ :Price History ‘ಪ್ರೈಸ್ ಹಿಸ್ಟರಿ’ ಎಂಬ ಆನ್‌ಲೈನ್ ಶಾಪಿಂಗ್ ಮಾರ್ಗದರ್ಶಿ

(WhatsApp Tips And Tricks did you know about these secret features of WhatsApp)

Comments are closed.