ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಮನೆಯಲ್ಲಿಯೇ ಬಂಧಿಯಾಗಿದ್ದ ಪಾಲಿಸಿದಾರರು ಹೇಗಪ್ಪಾ ಪ್ರೀಮಿಯಂ ಕಟ್ಟೋದು ಅನ್ನೋ ಚಿಂತೆಯಲ್ಲಿದ್ದರು. ಆದ್ರೆ ಜೀವ ವಿಮಾ ನಿಗಮ (ಎಲ್ ಐಸಿ) ಮಾರ್ಚ್ ಹಾಗೂ ಎಪ್ರಿಲ್ ತಿಂಗಳಿನಲ್ಲಿ ಪಾವತಿಸಬೇಕಾಗಿದ್ದ ಪ್ರೀಮಿಯಂ ಹಣ ಪಾವತಿಸಲು 30 ದಿನಗಳ ಕಾಲಾವಕಾಶವನ್ನು ನೀಡಿದೆ.

ಮಾರ್ಚ್ 22ರ ನಂತರ ಗ್ರೇಸ್ ಅವಧಿ ಮುಕ್ತಾಯವಾಗುತ್ತಿರುವ ಫೆಬ್ರವರಿ ಪ್ರೀಮಿಯಂಗಳಿಗೆ ಎಪ್ರಿಲ್ 15ರ ವರೆಗೆ ಕಾಲಾವಕಾಶವಿದೆ. ಡಿಜಿಟಲ್ ಪ್ಲಾಟ್ ಫಾರ್ಮ್ ಗಳಿಗೆ ಆನ್ ಲೈನ್ ಮೂಲಕವೂ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪ್ರೀಮಿಯಂ ಪಾವತಿಸಬಹುದು.

ಎಲ್ ಐಸಿ ಪೇ ಡೈರೆಕ್ಟ್ ಆಪ್ ಮೂಲಕವೂ ಪ್ರೀಮಿಯಂ ಪಾವತಿಸಬಹುದು ಎಂದು ಜೀವವಿಮಾ ನಿಗಮ ಹೇಳಿದೆ.

16 ವರ್ಷದೊಳಗಿನ ಪಾಲಿಸಿದಾರರು ಕೊರೊನಾದಿಂದ ಮೃತಪಟ್ಟಿದ್ದಲ್ಲಿ ಅಂಥವರ ಕುಟುಂಬಕ್ಕೆ ತಡಮಾಡದೆ ಕ್ಲೇಮು ಇತ್ಯರ್ಥ ಗೊಳಿಸಲಾಗುತ್ತಿದೆ. ಅಲ್ಲದೇ ಪಾಲಿಸಿದಾರರು ಒಂದೊಮ್ಮೆ ಕೊರೊನಾದಿಂದ ಸಾವನ್ನಪ್ಪಿದ್ದರೆ, ಅಂಥಹ ಪಾಲಿಸಿದಾರರ ಕುಟುಂಬಸ್ಥರ ಕ್ಲೇಮುಗಳನ್ನು ತುರ್ತು ಆಧಾರದ ಮೇಲೆ ಇತ್ಯರ್ಥ ಮಾಡಲಾಗುತ್ತದೆ.

ಕೊರೊನಾ ಈಗಾಗಲೇ ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ಇದರಲ್ಲಿ ಎಲ್ ಐಸಿ ಪಾಲಸಿದಾರರಿರುವ ಕುಟುಂಬಗಳನ್ನು ಪತ್ತೆ ಹೆಚ್ಚುಲು ಜೀವ ವಿಮಾ ನಿಗಮದ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಸರಕಾರಿ ಅಧಿಕಾರಿಗಳು ಒದಗಿಸುವ ಪಟ್ಟಿಗಳ ಆಧಾರದ ಮೇಳೆ ಸಂತ್ರಸ್ತರ ಕುಟುಂಬಗಳಿಗೆ ಸಹಾಯ ಮಾಡಲಾಗುವುದು ಎಂದು ಜೀವ ವಿಮಾ ನಿಗಮ ತಿಳಿಸಿದೆ.