ಕೊರೊನಾ ಸೋಂಕು : ಕುವೈತ್ ನೆರವಿಗೆ ಧಾವಿಸಿದ ಭಾರತೀಯ ವೈದ್ಯರ ತಂಡ

0

ಕುವೈತ್ : ಕೊರೊನಾ ವೈರಸ್ ಸೋಂಕು ಗಲ್ಪ್ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ಕುವೈತ್ ಗೆ ಭಾರತ ಸಹಾಯ ಹಸ್ತವನ್ನು ಚಾಚಿದೆ. ಕುವೈತ್ ನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಭಾರತ 15 ಮಂದಿ ವೈದ್ಯರ ತಂಡವನ್ನು ಕುವೈತ್ ಗೆ ಕಳುಹಿಸಿಕೊಟ್ಟಿದೆ.

ಈಗಾಗಲೇ ವಾಯುಸೇನೆಗೆ ಸೇರಿದ ಸಿ 130 ವಿಮಾನದಲ್ಲಿ 15 ಮಂದಿ ವೈದ್ಯರ ತಂಡ ಕುವೈತ್ ತಲುಪಿದೆ. ಭಾರತದಲ್ಲಿ ಕೊರೊನಾ ಸೋಂಕನನ್ನು ನಿಯಂತ್ರಿಸುವಲ್ಲಿ ಸಫಲವಾಗಿರೋ ಭಾರತೀಯ ವೈದ್ಯರ ತಂಡ ಸುಮಾರು 2 ವಾರಗಳ ಕಾಲ ಕುವೈತ್ ನಲ್ಲಿಯೇ ಇದ್ದು, ಕೊರೊನಾ ಚಿಕಿತ್ಸೆ, ಪರೀಕ್ಷೆ ನಡೆಸುವ ಕುರಿತು ಕುವೈತ್ ಆರೋಗ್ಯ ಸಿಬ್ಬಂಧಿಗಳಿಗೆ ತರಬೇತಿಯನ್ನು ನೀಡಲಿದೆ.

ಕುವೈತ್ ನಲ್ಲಿ ಇದುವರೆಗೆ ಒಟ್ಟು 993 ಮಂದಿಗೆ ಕೊರೊನಾ ಸೋಂಕು ಬಾದಿಸಿದ್ದು, ಓರ್ವ ಕೊರೊನಾಕ್ಕೆ ಬಲಿಯಾಗಿದ್ದಾನೆ. ಮಾತ್ರವಲ್ಲ ಇದುವರೆಗೆ 133 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರೋ ಹಿನ್ನೆಲೆಯಲ್ಲಿ ಕುವೈತ್ ಸರಕಾರ ಕೊರೊನಾ ನಿಯಂತ್ರಣಕ್ಕೆ ಭಾರತದ ಸಹಕಾರವನ್ನು ಕೋರಿತ್ತು. ಕುವೈತ್ ಭಾರತದ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿರುವ ಹಿನ್ನೆಲೆಯಲ್ಲಿ ಭಾರತ ವೈದ್ಯರ ತಂಡವನ್ನು ಕಳುಹಿಸಿಕೊಟ್ಟಿದೆ.

ಕೊರೊನಾ ನಿಯಂತ್ರಣಕ್ಕಾಗಿ ಭಾರತೀಯ ವೈದ್ಯರ ತಂಡ ವಿದೇಶಕ್ಕೆ ತೆರಳಿರುವುದು ಇದೇ ಮೊದಲು. ಶೀಘ್ರದಲ್ಲಿಯೇ ಭಾರತೀಯ ವೈದ್ಯರು ಇತರ ದೇಶಗಳಿಗೂ ತೆರಳೋ ಸಾಧ್ಯತೆಯಿದೆ.

ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸಹಕಾರಿಯಾಗಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಈಗಾಗಲೇ ಭಾರತವು, ಅಮೇರಿಕಾ, ಸ್ಪೇನ್, ಜರ್ಮನಿ, ಶ್ರೀಲಂಕಾ, ಅಪಘಾನಿಸ್ತಾನ್, ನೇಪಾಳ, ಭೂತಾನ್, ಬ್ರಿಜಿಲ್, ಬೆಹರಿನ್, ಮಾಲ್ಡಿವ್ಸ್, ಮಾರಿಷಸ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ರಪ್ತು ಮಾಡಿದೆ.

Leave A Reply

Your email address will not be published.