ಸೋಮವಾರ, ಏಪ್ರಿಲ್ 28, 2025
HomekarnatakaBlack Friday : ಕರಾಳ ಶುಕ್ರವಾರ : ಪ್ರತ್ಯೇಕ ಅಪಘಾತ 13 ಮಂದಿ ದುರ್ಮರಣ

Black Friday : ಕರಾಳ ಶುಕ್ರವಾರ : ಪ್ರತ್ಯೇಕ ಅಪಘಾತ 13 ಮಂದಿ ದುರ್ಮರಣ

- Advertisement -

ಬೆಂಗಳೂರು : ಕರ್ನಾಟಕದ ಪಾಲಿಗಿಂದು ಕರಾಳ ಶುಕ್ರವಾರ (Black Friday). ಕಲಬುರಗಿ, ಬಾಗಲಕೋಟೆ ಹಾಗೂ ಆನೇಕಲ್‌ನಲ್ಲಿ ನಡೆದಿರುವ ಪ್ರತ್ಯೇಕ ರಸ್ತೆ ಅಪಘಾತ ದಲ್ಲಿ ಒಟ್ಟು 13 ಮಂದಿ ಸಾವನ್ನಪ್ಪಿದ್ದು, ಹತ್ತಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಲಬುರಗಿಯಲ್ಲಿ ನಡೆದಿರುವ ದುರಂತಕ್ಕೆ ಸಂಬಂಧಿಸಿದಂತೆ ಸಚಿವ ಶ್ರೀರಾಮುಲು ತನಿಖೆಗೆ ಆದೇಶ ನೀಡಿದ್ದಾರೆ.

Black Friday : ಹುಟ್ಟುಹಬ್ಬದ ಸಂಭ್ರಮದಲ್ಲಿದ್ದವರು ಮಸಣ ಸೇರಿದ್ರು

ಖಾಸಗಿ ಬಸ್‌ನಲ್ಲಿ ಮಗುವಿನ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಗೋವಾದಿಂದ ಹೈದ್ರಾಬಾದ್‌ಗೆ ಮರಳುತ್ತಿದ್ದ ಕುಟುಂಬದಲ್ಲೀಗ ಸೂತಕದ ಛಾಯೆ ಆಚರಿಸಿದೆ. ಕಲಬುರಗಿಯ ಕಮಲಾಪುರದ ಬಳಿಯಲ್ಲಿ ಖಾಸಗಿ ಬಸ್‌ ಹಾಗೂ ಟೆಂಪೋ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವವಾಗಿ ದಹನವಾಗಿದ್ದಾರೆ. ಬಸ್ಸಿನಲ್ಲಿ ಸುಮಾರು ೨೮ ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಏಳು ಮಂದಿ ನಾಪತ್ತೆಯಾಗಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯರ ಸಹಕಾರದಿಂದ ಹಲವರನ್ನು ರಕ್ಷಿಸಲಾಗಿದೆ. ಅಪಘಾತದಲ್ಲಿ ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಸ್ತೆಯಲ್ಲಿ ನಿಂತಿದ್ದವರಿಗೆ ವಾಹನ ಢಿಕ್ಕಿ ನಾಲ್ವರು ದುರ್ಮರಣ

ಬೆಳ್ಳಂಬೆಳಗ್ಗೆಯೇ ಬಾಗಲಕೋಟೆಯಲ್ಲಿ ದುರಂತ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ನಿಂತಿದ್ದವರಿಗೆ ವಾಹನ ಢಿಕ್ಕಿಯಾಗಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ನಡೆದಿದೆ. ಕ್ಯಾಂಟರ್‌ ಟೈರ್‌ ಪಂಕ್ಚರ್‌ ಆಗಿದ್ದ ವೇಳೆಯಲ್ಲಿ ನಾಲ್ವರು ರಸ್ತೆಯ ಪಕ್ಕದಲ್ಲಿ ನಿಂತಿದ್ದರು. ಈ ವೇಳೆಯಲ್ಲಿ ವೇಗವಾಗಿ ಬಂದ ಅಪರಿಚಿತ ವಾಹನ ಢಿಕ್ಕಿಯಾಗಿದೆ. ಬೀಳಗಿ ಮೂಲದ ರಜಾಕ್‌ ತಾಂಬೋಳೆ, ನಾಶಿರ್‌ ಮುಲ್ಲಾ, ಮಲ್ಲಪ್ಪ ಮಳಲಿ ಹಾಗೂ ರಾಮಸ್ವಾಮಿ ಎಂಬವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೀಳಗಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Black Friday : ಜಾಲಿರೈಡ್‌ ಹೋದವರ ಪ್ರಾಣ ಪಕ್ಷಿ ಹಾರಿಹೊಯ್ತು

ಕಲಬುರಗಿ, ಬಾಗಲಕೋಟೆಯ ಬೆನ್ನಲ್ಲೇ ಆನೇಕಲ್‌ನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಸ್ಪೋರ್ಟ್‌ ಬೈಕ್‌ನಲ್ಲಿ ಜಾಲಿ ರೈಡ್‌ಗೆ ತೆರಳಿದ್ದ ಯುವಕ, ಯುವತಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಗಗನ್‌ ಹಾಗೂ ಯಶಸ್ವಿನಿ ಎಂಬವರೇ ಮೃತ ದುರ್ದೈವಿಗಳು. ಸ್ಪೋರ್ಟ್‌ ಬೈಕ್‌ ನಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿ ರಸ್ತೆಯ ತಿರುವಿನಲ್ಲಿ ಬೈಕ್‌ ಕಂಟ್ರೋಲ್‌ ತಪ್ಪಿ ಮರಕ್ಕೆ ಢಿಕ್ಕಿಯಾಗಿದೆ. ಆದರೆ ಇಬ್ಬರೂ ಕೂಡ ಹೆಲ್ಮೆಟ್‌ ಧರಿಸದೇ ಇರೋದ್ರಿಂದಾಗಿ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟಿದ್ದಾರೆ.

ಅಪಘಾತದ ತನಿಖೆ ಸಚಿವ ಶ್ರೀರಾಮುಲು ಆದೇಶ :

ಕಲಬುರಗಿಯಲ್ಲಿ ನಡೆದಿರುವ ಭೀಕರ ಅಪಘಾತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಈಗಾಗಲೇ ಸಚಿವ ಶ್ರೀರಾಮುಲು ಆದೇಶ ಹೊರಡಿಸಿದ್ದಾರೆ. ಅಧಿಕಾರಿಗಳ ತಂಡ ಸದ್ಯ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆಯನ್ನು ನಡೆಸಿದ್ದಾರೆ. ಖಾಸಗಿ ಬಸ್‌ನಲ್ಲಿ ಒಟ್ಟು 28 ಮಂದಿ ಪ್ರಯಾಣಿಸುತ್ತಿದ್ದು, ಈ ಪೈಕಿ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಚಿವ ಶ್ರೀರಾಮುಲು ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟಿರುವವರು ಹಾಗೂ ಗಾಯಾಳುಗಳಿಗೆ ಪರಿಹಾರವನ್ನು ನೀಡುವ ಕುರಿತು ಸಿಎಂ ಬಸವರಾಜ್‌ ಬೊಮ್ಮಾಯಿ ಅವರ ಜೊತೆಗೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ : Congress secret deal : ಪಕ್ಷಕ್ಕಾಗಿ ಮಹಾತ್ಯಾಗ 2023 ರಲ್ಲೂ ಸಿಎಂ ಆಗಲ್ವಾ ಡಿ.ಕೆ.ಶಿವಕುಮಾರ್‌ : ಏನಿದು ಕಾಂಗ್ರೆಸ್‌ ರಹಸ್ಯ ಒಪ್ಪಂದ

ಇದನ್ನೂ ಓದಿ : BIG BREAKING : ಖಾಸಗಿ ಬಸ್‌ – ಟೆಂಪೋ ಭೀಕರ ಅಪಘಾತ : ಮಗು ಸೇರಿ ಐವರು ಸಜೀವ ದಹನ

Black Friday Karnataka Major 3 accident 13 dead 10 injured

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular