Yogi Adityanath : ಸಾಮ್ರಾಟ್​ ಪೃಥ್ವಿರಾಜ್​ ಸ್ಪೆಷಲ್​ ಸ್ಕ್ರೀನಿಂಗ್​ನಲ್ಲಿ ಭಾಗಿಯಾದ ಯೋಗಿ ಸಂಪುಟಕ್ಕೆ ಅಖಿಲೇಶ್​ ಟಾಂಗ್​

Yogi Adityanath  : ಮೊಹಮ್ಮದ್​ ಘೋರಿ ವಿರುದ್ಧ ಹೋರಾಡಿದ ರಜಪೂತ ದೊರೆ ಪೃಥ್ವಿರಾಜ್​​ ಚೌಹಾಣ್​ ಜೀವನಾಧಾರಿತ ಸಿನಿಮಾ ಸಾಮ್ರಾಟ್​ ಪೃಥ್ವಿರಾಜ್​ಗೆ ಉತ್ತರ ಪ್ರದೇಶದಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ. ಅಕ್ಷಯ್​ ಕುಮಾರ್​ ಮುಖ್ಯ ಭೂಮಿಕೆಯ ಈ ಸಿನಿಮಾದ ಸ್ಪೆಷಲ್​ ಸ್ಕ್ರೀನಿಂಗ್​ ಆಯೋಜಿಸಲಾಗಿದ್ದು ನಟ ಅಕ್ಷಯ್​ ಕುಮಾರ್​ ಜೊತೆಯಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಸೇರಿದಂತೆ ಸಂಪುಟ ಸಚಿವರು ಭಾಗಿಯಾದರು. ಸ್ಪೆಷಲ್​ ಸ್ಕ್ರೀನಿಂಗ್​​ನಲ್ಲಿ​ ಉತ್ತರ ಪ್ರದೇಶದ ಸಂಪುಟದ ಸದಸ್ಯರು ಭಾಗಿಯಾಗಿರುವ ಫೋಟೋಗಳು ವೈರಲ್​ ಆಗುತ್ತಿದ್ದಂತೆಯೇ ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್​ ಯಾದವ್​​ ಯೋಗಿ ಆದಿತ್ಯನಾಥ್​ಗೆ ಟ್ವಿಟರ್​ನಲ್ಲಿ ಟಾಂಗ್​ ನೀಡಿದ್ದಾರೆ.


ನೀವು ಹಿಂಬದಿ ಸೀಟಿನಲ್ಲಿ ಕುಳಿತಿದ್ದರೆ ಹಾಗೂ ಉಚಿತವಾಗಿ ಸಿನಿಮಾ ವೀಕ್ಷಿಸುವ ಬದಲು ಹಣಕೊಟ್ಟು ವೀಕ್ಷಿಸುತ್ತಿದ್ದರೆ ಈ ಸಿನಿಮಾ ಇನ್ನೂ ಸುಂದರ ಎನಿಸುತ್ತಿತ್ತು. ಅಲ್ಲದೇ ಇದರಿಂದ ರಾಜ್ಯದ ಬೊಕ್ಕಸಕ್ಕೂ ಯಾವುದೇ ರೀತಿ ಹಾನಿ ಉಂಟಾಗುತ್ತಿರಲಿಲ್ಲ ಎಂದು ಟ್ವಿಟರ್​ನಲ್ಲಿ ಕಿಡಿಕಾರಿದ್ದಾರೆ .

ಐತಿಹಾಸಿಕ ಚಲನಚಿತ್ರವನ್ನು ವೀಕ್ಷಿಸಿದ ನಂತರ, ಉತ್ತರ ಪ್ರದೇಶದ ಪ್ರಸ್ತುತ ಸ್ಥಿತಿಯನ್ನು ಸಹ ನೋಡಲು ಕ್ಯಾಬಿನೆಟ್ ಅನ್ನು ವಿನಂತಿಸಲಾಗಿದೆ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೇ ಈ ಹಿಂದೆ ಮಾಡಿಟ್ಟಿರುವ ಹಿಟ್ಟಿನಿಂದ ಇಂದು ರೊಟ್ಟಿ ಮಾಡಲು ಸಾಧ್ಯವಿಲ್ಲ ಎಂದೂ ಬರೆದಿದ್ದಾರೆ


ಲಕ್ನೋದ ಲೋಕಭವನದಲ್ಲಿ ಸಿನಿಮಾದ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು, ಬಾಲಿವುಡ್​ ನಟ ಅಕ್ಷಯ್​ ಕುಮಾರ್​, ನಟಿ ಮಾನುಷಿ ಚಿಲ್ಲರ್​ ಹಾಗೂ ನಿರ್ದೇಶಕ ಚಂದ್ರಪ್ರಕಾಶ್​ ದ್ವಿವೇದಿ ಈ ಸ್ಪೆಷಲ್​ ಸ್ಕ್ರೀನಿಂಗ್​ನಲ್ಲಿ ಉಪಸ್ಥಿತರಿದ್ದರು.


ಸಮಾಜವಾದಿ ಪಕ್ಷದ ಸರ್ಕಾರವು ನಿರ್ಮಿಸಿದ್ದ ಆಧುನಿಕ ಸಭಾಂಗಣದಲ್ಲಿ ಬಿಜೆಪಿ ಸಂಪುಟವು ಐತಿಹಾಸಿಕ ಸಿನಿಮಾಗಳನ್ನು ಆನಂದಿಸುತ್ತಿದೆ ಎಂದು ಅಖಿಲೇಶ್​ ಯಾದವ್​ ಟಾಂಗ್​ ನೀಡಿದ್ದಾರೆ.
ಇಂದಿನಿಂದ ದೇಶಾದ್ಯಂತ ಸಾಮ್ರಾಟ್​ ಪೃಥ್ವಿರಾಜ್​ ಸಿನಿಮಾ ತೆರೆಕಂಡಿದೆ. ಅಕ್ಷಯ್​ ಕುಮಾರ್​ ಈ ಸಿನಿಮಾದಲ್ಲಿ ರಜಪೂತ ದೊರೆ ಪೃಥ್ವಿರಾಜ್​ ಚೌಹಾಣ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾನುಷಿ ಚಿಲ್ಲರ್​ ರಾಜಕುಮಾರಿ ಸಂಯೋಗಿತಾ ಪಾತ್ರದಲ್ಲಿ ನಟಿಸಿದ್ದಾರೆ. ಸಂಜಯ್​ ದತ್​ ಹಾಗೂ ಸೋನು ಸೂದ್​ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನು ಓದಿ : rape hubby’s friend :ಪತಿಯೊಂದಿಗೆ ಸಲುಗೆಯಿಂದಿದ್ದ ಮಹಿಳೆಯ ಮೇಲೆ ಗ್ಯಾಂಗ್​​ರೇಪ್​ಗೆ ಸುಪಾರಿ ಕೊಟ್ಟ ಪತ್ನಿ

ಇದನ್ನೂ ಓದಿ : Kerala HC Reunites Lesbian : ಪೋಷಕರ ಒತ್ತಡದಿಂದ ದೂರಾದ ಸಲಿಂಗಕಾಮಿಗಳನ್ನು ಒಂದುಗೂಡಿಸಿದ ಕೇರಳ ಹೈಕೋರ್ಟ್​

As Yogi Adityanath Watches Movie With Akshay Kumar, Akhilesh Yadav’s Dig

Comments are closed.