actor deepak mahadev : ನಾಗಿಣಿ 2 ಧಾರವಾಹಿ ಖ್ಯಾತಿಯ ಕಿರುತೆರೆ ನಟ ನಿನಾದ್ ಇತ್ತೀಚೆಗಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ ರಮ್ಯಾ ಎಂಬವರ ಜೊತೆಯಲ್ಲಿ ನಿನಾದ್ ಮದುವೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ರಮ್ಯಾ ಹಾಗೂ ನಿನಾದ್ ಜೋಡಿ ವೈವಾಹಿಕ ಬಂಧ ಬೆಸೆದರು. ಈ ವಿವಾಹ ಕಾರ್ಯಕ್ರಮದಲ್ಲಿ ನಾಗಿಣಿ 2 ಧಾರವಾಹಿಯ ತಂಡ ಸೇರಿದಂತೆ ಸಾಕಷ್ಟು ಕಿರುತೆರೆಯ ನಟರು ಕಾಣಿಸಿಕೊಂಡಿದ್ದರು. ನಿನಾದ್ ಹಾಗೂ ರಮ್ಯಾ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮದುವೆ ಸುದ್ದಿಯ ಜೊತೆಯಲ್ಲಿಯೇ ನಿನಾದ್ ನಾಗಿಣಿ 2 ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ನಾಗಿಣಿ 2 ಸೀರಿಯಲ್ನ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ನಟ ನಿನಾದ್ ಇದೀಗ ಅದೇ ಧಾರವಾಹಿಯಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಅದರೆ ಈ ಬಗ್ಗೆ ನಾಗಿಣಿ 2 ಕಿರುತೆರೆ ತಂಡ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ, ನಾಗಿಣಿ 2 ಧಾರವಾಹಿಯಲ್ಲಿ ಸಧ್ಯ ನಿನಾದ್ ಅಭಿನಯದ ಎಪಿಸೋಡ್ಗಳೇ ಬರುತ್ತಿದೆ.
ಮದುವೆಯಾಗುತ್ತಿದ್ದಂತೆಯೇ ನಿನಾದ್ ಯಾಕೆ ನಾಗಿಣಿ 2 ತಂಡದಿಂದ ಹೊರ ಬಂದರು ಎಂಬುದಕ್ಕೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಮೂಲಗಳ ಪ್ರಕಾರ ಕಿರುತೆರೆಯ ಖ್ಯಾತ ನಟ ದೀಪಕ್ ಮಹದೇವ್ ನಿನಾದ್ ಪಾತ್ರದಲ್ಲಿ ಇನ್ಮುಂದೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ ಈ ಯಾವುದರ ಬಗ್ಗೆಯೂ ಇನ್ನೂ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ.
ನಿನಾದ್ ಜಾಗವನ್ನು ತುಂಬಲಿರುವ ದೀಪಕ್ ಮಹದೇವ್ ನಿನ್ನಿಂದಲೇ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಇದಾದ ಬಳಿಕ ಮರಳಿ ಮನಸ್ಸಾಗಿದೆ ಎಂಬ ಧಾರವಾಹಿಯಲ್ಲಿಯೂ ದೀಪಕ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನಾಗಿಣಿ 2 ಧಾರವಾಹಿಯ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
ಇದನ್ನು ಓದಿ : Prashath : ಹಾಸನದಲ್ಲಿ ಡಾ.ರಾಜ್ ಅಭಿಮಾನಿ ಕುಟುಂಬದ ಸದಸ್ಯನ ಬರ್ಬರ ಹತ್ಯೆ: ಪ್ರತಿಕಾರಕ್ಕಾಗಿ ನಡೆಯಿತಾ ಪ್ರಶಾಂತ್ ಹತ್ಯೆ
ಇದನ್ನೂ ಓದಿ : ಶಾಸಕರೊಬ್ಬರ ಮರ್ಸಿಡಿಸ್ ಕಾರಿನಲ್ಲಿ ಬಾಲಕಿಯ ಮೇಲೆ ಬಾಲಕರಿಂದ ಸಾಮೂಹಿಕ ಅತ್ಯಾಚಾರ
actor deepak mahadev replace to actor ninad in naagini 2 serial