Top 5 Bikes : ಭಾರತದ ಟಾಪ್‌ 5 ಗರಿಷ್ಠ ಮೈಲೇಜ್‌ ಕೊಡುವ ಬೈಕ್‌ಗಳಿವು!

ಭಾರತ(India)ದಲ್ಲಿ ಅತ್ಯಂತ ಜನಪ್ರಿಯ ವಾಹನವೆಂದರೆ ದ್ವಿಚಕ್ರ ವಾಹನ (Bikes). ಏಕೆಂದರೆ ಇದರ ಖರೀದಿ ಮತ್ತು ವೆಚ್ಚ ಇವೆರಡೂ ಅನುಕೂಲಕರವಾಗಿದೆ. ಜನರು ಸ್ಕೂಟರ್‌ಗಳು, ಬೈಕ್‌ಗಳನ್ನು ಎಂತಹುದೇ ಜನನಿಬಿಡ ಸ್ಥಳಗಳಲ್ಲಿ ಬಹಳ ಸುಲಭವಾಗಿ ಒಯ್ಯಬಹುದು. ಅದಲ್ಲದೆ ಅಂತಹ ಪಾರ್ಕಿಂಗ್‌ ಸಮಸ್ಯೆಯೂ ತಲೆದೂರದು. ಆದರೆ ಪೆಟ್ರೋಲ್‌ ಮತ್ತು ಡೀಸಲ್‌ ದುಬಾರಿಯಾದ ಕಾರಣ ಜನರು ಹೆಚ್ಚು ಮೈಲೇಜ್‌ (Fuel Efficient) ಕೊಡುವ ದ್ವಿಚಕ್ರವಾಹನ ಹುಡುಕುತ್ತಿದ್ದಾರೆ. ಅದಕ್ಕಾಗಿಯೇ ನಾವು ಇಲ್ಲಿ ಅಂತಹ ಗರಿಷ್ಠ ಮೈಲೇಜ್‌ ಕೊಡುವ ಬೈಕ್‌ಗಳ ಪಟ್ಟಿ ನೀಡಿದ್ದೇವೆ.

ಗರಿಷ್ಠ ಮೈಲೇಜ್‌ ಕೊಡುವ ಬೈಕ್‌ಗಳು (Top 5 Bikes) :

  1. ಟಿವಿಎಸ್‌ ಸ್ಪೋರ್ಟ್‌ (TVS Sport) :
    ಹಗುರವಾದ ವಿನ್ಯಾಸ ಮತ್ತು ಪ್ರತಿ ಲೀಟರ್‌ಗೆ 73 ಕಿಲೋಮೀಟರ್‌ ನೀಡುವ ಪ್ರಭಾವಶಾಲಿ ಇಂಧನ ಕ್ಷಮತೆಯಿಂದಾಗಿ ಟಿವಿಎಸ್‌ ಸ್ಪೋರ್ಟ್‌ ಇಂದು ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಬೈಕ್‌ಗಳಲ್ಲಿ ಒಂದಾಗಿದೆ. ಇದರ ಮಧ್ಯಭಾಗದಲ್ಲಿ ಸಿಂಗಲ್‌–ಸಿಲಿಂಡರ್‌, ನಾಲ್ಕು ಸ್ಟ್ರೋಕ್‌ ಇಂಜಿನ್‌ ಇದೆ. ಇದು ಗಾಳಿ ತಂಪಾಗುವ ಮತ್ತು ಇಂಧನ ಇಂಜೆಕ್ಷನ್‌ ವ್ಯವಸ್ಥೆಯನ್ನು ಹೊಂದಿದೆ. ಈ ಬೈಕ್‌ನ ಇಂಧನ ಟ್ಯಾಂಕ್‌ 10 ಲೀಟರ್‌ ಸಾಮರ್ಥ್ಯ ಹೊಂದಿದೆ. ಇದರ ಎಕ್ಸ್‌ ಶೋ ರೂಂ 60,000 ನಿಂದ ಪ್ರಾರಂಭವಾಗುತ್ತದೆ.
  2. ಬಜಾಜ್‌ ಪ್ಲಾಟಿನಾ 110 (Bajaj Platina 110) :
    ಪ್ರತಿ ಲೀಟರ್‌ಗೆ 70 ಕಿಲೋಮೀಟರ್‌ ಮೈಲೇಜ್‌ ನೀಡುವ ಮೂಲಕ ಬಜಾಜ್‌ ಪ್ಲಾಟಿನಾ 110 ಸಹ ಈ ಪಟ್ಟಿಯಲ್ಲಿ ಸ್ಥಾನ ಪಡಯಲು ಯಶಸ್ವಿಯಾಗಿದೆ. ಈ ಬೈಕ್‌ 100 CC ಸಿಂಗಲ್‌ ಸಿಲಿಂಡರ್‌, 4 ಸ್ಟ್ರೋಕ್‌ ಇಂಜಿನ್‌ ನಿಂದ ನಿಯಂತ್ರಿಸಲ್ಪಡುತ್ತದೆ. ಇದರ ಎಕ್ಸ್‌ ಶೋ ರೂಂ ಬೆಲೆಯು 69,216 ರೂ. ಗಳಿಂದ ಪ್ರಾರಂಭವಾಗುತ್ತದೆ. 11 ಲೀಟರ್‌ ಇಂಧನ ಸಾಮರ್ಥ್ಯದೊಂದಿಗೆ ಈ ಬೈಕ್‌ ಉತ್ತಮ ಶ್ರೇಣಿಯನ್ನು ಸಹ ಪಡೆದಿದೆ.
  1. ಬಜಾಜ್‌ ಸಿಟಿ 110X (Bajaj CT 100X) :
    ಬಜಾಜ್‌ ಸಿಟಿ 100X ಪ್ರತಿ ಲೀಟರ್‌ಗೆ 70 ಕಿಲೋಮೀಟರ್‌ ಮೈಲೇಜ್‌ ಅನ್ನು ನೀಡುವುದರಿಂದ ಇದನ್ನು ಗರಿಷ್ಠ ಮೈಲೇಜ್‌ ನೀಡುವ ಬೈಕ್‌ಗಳ ಪಟ್ಟಿಗೆ ಸೇರಿಸಲಾಗಿದೆ. ಇದು ಟಿವಿಎಸ್‌ ಸ್ಪೋರ್ಟ್‌ಗೆ ನೇರ ಪ್ರತಿಸ್ಪರ್ಧಿಯಾಗಿದೆ. ಇದರ ಆರಂಭಿಕ ಎಕ್ಸ್‌ ಶೋ ರೂಂ ಬೆಲೆಯು 65,000 ರೂಪಾಯಿ. ಕಾರ್ಯಕ್ಷಮತೆಯಲ್ಲಿ ಇದು ಕೂಡಾ ಟಿವಿಎಸ್‌ ಸ್ಪೋರ್ಟ್‌ ಅನ್ನೇ ಹೋಲುತ್ತದೆ. ಇದರ ಇಂಧನ ಟ್ಯಾಂಕ್‌ 10.5 ಲೀಟರ್‌ ಪೆಟ್ರೋಲ್‌ ಸಾಮರ್ಥ್ಯ ಹೊಂದಿದೆ.
  2. ಹೀರೋ ಸ್ಪ್ಲೆಂಡರ್‌ ಪ್ಲಸ್‌ (Hero Splendor Plus) :
    ಈ ಬೈಕ್‌ ಇಂಧನ ಮಿತವ್ಯಯ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಉತ್ತಮ ಮಾರುಕಟ್ಟೆ ಖ್ಯಾತಿಯನ್ನು ಹೊಂದಿದೆ. ಇದು ಪ್ರತಿ ಲೀಟರ್‌ಗೆ 70 ಕಿಲೋಮೀಟರ್‌ ಆಶ್ಚರ್ಯಕರ ಮೈಲೇಜ್‌ ನೀಡುವ ಬೈಕ್ಗಳಲ್ಲಿ ಒಂದಾಗಿದೆ. ಹೀರೋ ಸ್ಪ್ಲೆಂಡರ್‌ 97.2 CC ಎಂಜಿನ್‌ ನಿಂದ ನಿಯಂತ್ರಿಸಲ್ಪಡುತ್ತದೆ. ಇದರ ಆರಂಭಿಕ ಎಕ್ಸ್‌ ಶೋಂ ರೂಂ ಬೆಲೆಯು 69,380 ರೂಪಾಯಿಗಳಾಗಿದೆ.
  3. ಟಿವಿಎಸ್‌ ಸ್ಟಾರ್‌ ಸಿಟಿ (TVS Star City Plus) :
    ಪ್ರತಿ ಲೀಟರ್‌ಗೆ 70 ಕಿಲೋಮೀಟರ್‌ ಮೈಲೇಜ್‌ನೊಂದಿಗೆ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಎರಡನೇ ಟಿವಿಎಸ್‌ ಬೈಕ್‌ ಆಗಿದೆ. ಇಂಧನ ಆರ್ಥಿಕತೆಯ ಬಗ್ಗೆ ಕಾಳಜಿವಹಿಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಇದರ ಎಕ್ಸ್‌ ಶೋಂ ರೂಂ ಬೆಲೆಯು 70,205 ರೂಪಾಯಿ ಆಗಿದೆ. ಇದು ತನ್ನ ಪ್ರತಿಸ್ಪರ್ಧಿ ಬೈಕ್‌ಗಿಂತ ಹೆಚ್ಚಿನ ಬೆಲೆ ಹೊಂದಿದೆ. ಇದರ ವಾಹನ ಶಕ್ತಿಯು ಸಿಂಗಲ್‌ ಸಿಲಿಂಡರ್‌ ಇಂಜಿನ್‌ ಆಗಿದ್ದು, ಏರ್‌–ಕೂಲ್ಡ್‌ ಮತ್ತು ನಾಲ್ಕು ಸ್ಟ್ರೋಕ್‌ಗಳನ್ನು ಬಳಸುತ್ತದೆ. ಈ ಬೈಕ್‌ನ ಪೆಟ್ರೋಲ್‌ ಟ್ಯಾಂಕ್‌ 10 ಲೀಟರ್‌ ಇಂಧನವನ್ನು ಹೊಂದುವ ಸಾಮರ್ಥ್ಯವಿದೆ.

(ಪೂರಕ ಮಾಹಿತಿ ಡಿಎನ್‌ಎ)

ಇದನ್ನೂ ಓದಿ : Lost your ATM-cum-Debit card : ನಿಮ್ಮ ಎಟಿಎಂ- ಕಮ್- ಡೆಬಿಟ್ ಕಾರ್ಡ್ ಅನ್ನು ಕಳೆದುಕೊಂಡಿದ್ದೀರಾ? ಕಾರ್ಡ್ ಅನ್ನು ಹೇಗೆ ಬ್ಲಾಕ್ ಮಾಡುವುದು

ಇದನ್ನೂ ಓದಿ : Email Password : ನಿಮ್ಮ ಇಮೇಲ್‌ನ ಪಾಸ್‌ವರ್ಡ್‌ ಬದಲಿಸುವುದು ಹೇಗೆ ಗೊತ್ತೇ?

(Top 5 Bikes 5 fuel efficient bikes in India)

Comments are closed.