ಮಹಾರಾಷ್ಟ್ರ :Rakhi Sawant : ರಾಖಿ ಸಾವಂತ್ ತಮ್ಮ ವೃತ್ತಿ ಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಹೊಸ ಬಾಯ್ಫ್ರೆಂಡ್ ಆದಿಲ್ ಖಾನ್ ಜೊತೆಯಲ್ಲಿ ಎಲ್ಲೆಡೆ ಸುತ್ತುತ್ತಿರುವ ರಾಖಿ ಸಾವಂತ್ ತಮ್ಮ ಮಾಜಿ ಪತಿ ಮಾಡಿದ ಕೆಲಸವೊಂದನ್ನು ನೆನೆದು ಮಾಧ್ಯಮಗಳ ಎದುರು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ತಮ್ಮ ಮಾಜಿ ಪತಿ ನನ್ನೆಲ್ಲ ಸೋಶಿಯಲ್ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡಿದ್ದಾನೆ ಎಂದು ಆರೋಪಿಸಿ ನಟಿ ರಾಖಿ ಸಾವಂತ್ ಗಳ ಗಳನೇ ಅತ್ತಿದ್ದಾರೆ.
ತನ್ನ ಮಾಜಿ ಪತಿಯಿಂದ ಉಂಟಾದ ಸಂಕಷ್ಟದ ಬಗ್ಗೆ ವಿವರಿಸುತ್ತಾ ಹೋದಂತೆ ರಾಖಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಾಜಿ ಪತಿ ರಿತೇಶ್ ನನ್ನೆಲ್ಲ ಸೋಶಿಯಲ್ ಮೀಡಿಯಾ ಖಾತೆಗಳು ಹಾಗೂ ಆನ್ಲೈನ್ ಪಾವತಿಯ ಎಲ್ಲಾ ವೇದಿಕೆಗಳನ್ನು ಹ್ಯಾಕ್ ಮಾಡಿದ್ದಾನೆ. ಈ ಸಂಬಂಧ ನಾನು ರಿತೇಶ್ ವಿರುದ್ಧ ಮುಂಬೈನ ಓಶಿವಾರಾ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾಗಿ ಹೇಳಿದ್ದಾರೆ . ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ್ದ ರಾಖಿ ಸಾವಂತ್ ತನ್ನ ಮಾಜಿ ಪತಿ ರಿತೇಶ್ ನನ್ನ ಹೊಸ ಗೆಳೆಯ ಆದಿಲ್ ಖಾನ್ ಬಗ್ಗೆ ಅಸೂಯೆ ಹೊಂದಿದ್ದಾನೆ. ಹೀಗಾಗಿ ಆತ ಸೇಡು ತೀರಿಸಿಕೊಳ್ಳಲು ಬಯಸುತ್ತಾನೆ ಎಂದು ಹೇಳಿದ್ದಾರೆ.
ಪಪ್ಪರಾಜಿಗಳ ಜೊತೆ ಮಾತನಾಡಿದ ರಾಖಿ ಸಾವಂತ್ ಆತ ನನ್ನ ಫೇಸ್ಬುಕ್ ಪಾಸ್ವರ್ಡ್ಗಳನ್ನು ಸಹ ಬದಲಾಯಿಸಿದ್ದಾನೆ. ಇನ್ಸ್ಟಾಗ್ರಾಂ ಖಾತೆಯ ಪಾಸ್ವರ್ಡ್ನ್ನೂ ಸಹ ಬದಲಾಯಿಸಿದ್ದಾನೆ ಎಂದು ಹೇಳಿಕೊಂಡು ಗಳಗಳನೇ ಅತ್ತಿದ್ದಾರೆ. ನಿಮ್ಮ ಖಾತೆಗಳೆಲ್ಲವೂ ನಿಮಗೆ ಸಿಗಲಿದೆ ಎಂದು ಪಪ್ಪರಾಜಿಗಳು ರಾಖಿ ಸಾವಂತ್ರನ್ನು ಸಮಾಧಾನಗೊಳಿಸಿದರು. ಇದಕ್ಕೆ ಉತ್ತರಸಿದ ರಾಖಿ,ಆತ ಇದನ್ನೆಲ್ಲ ಏಕೆ ಮಾಡುತ್ತಿದ್ದಾನೆ ಎಂಬುದೇ ನನಗೆ ಅರ್ಥವಾಗ್ತಿಲ್ಲ. ನನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಏನೆನೋ ಬರೆಯುತ್ತಾನೆ. ನಿಮಗೆ ಇದೆಲ್ಲ ಅರ್ಥವಾಗುತ್ತಿದೆಯಾ..? ಎಂದು ಹೇಳಿಕೊಂಡು ಅಳುವುದರ ಜೊತೆಯಲ್ಲಿ ಗೆಳೆಯ ಆದಿಲ್ ಖಾನ್ರನ್ನು ಸಮಾಧಾನಪಡಿಸಿದ್ದನ್ನು ಕಾಣಬಹುದಾಗಿದೆ.
ಇದನ್ನು ಓದಿ : Jinal Joshi Photoshoot : ಹಾಟ್ ಹಾಟ್ ಪೋಟೋಸ್ ನಲ್ಲೇ ಮಿಂಚೋ ಬೆಡಗಿ ಜಿನಾಲ್ ಜೋಶಿ
ಇದನ್ನೂ ಓದಿ : Umran Malik : ಉಮ್ರಾನ್ ಮಲಿಕ್ ಶರವೇಗದ ಎಸೆತಕ್ಕೆ ರಿಷಬ್ ಪಂತ್ ಬ್ಯಾಟ್ ಪೀಸ್ ಪೀಸ್
Rakhi Sawant breaks down as ex-husband Ritesh hacks her social media accounts, files complaint
Comments are closed.