Kim Kardashian : 2022ನೇ ಸಾಲಿನ ಮೆಟ್ ಗಾಲಾದಲ್ಲಿ ಕಿಮ್ ಕಾರ್ಡಶಿಯಾನ್ ಮರ್ಲಿನ್ ಮನ್ರೋ ಧರಿಸಿದ್ದ ಐತಿಹಾಸಿಕ ಹಾಗೂ ಅತ್ಯಂತ ದುಬಾರಿ ಗೌನ್ನ್ನು ಧರಿಸಿದ್ದು ನೆನಪಿದ್ದಿರಬಹುದು. ಅನೇಕರು 60 ವರ್ಷಗಳ ಹಿಂದಿನ ಉಡುಗೆಯನ್ನು ಧರಿಸಿದ್ದನ್ನು ಹೊಗಳಿದರೆ ಇನ್ನೂ ಕೆಲವರು ಇದು ಇತಿಹಾಸಕ್ಕೆ ಮಾಡಿದ ಅವಮಾನ ಎಂದು ಖಂಡಿಸಿದ್ದರು. ಆದರೆ ಇದೀಗ ಕಿಮ್ ಕಾರ್ಡಶಿಯಾನ್ ಇದೇ ಉಡುಗೆಯ ವಿಚಾರದಲ್ಲಿ ಹೊಸದೊಂದು ವಿವಾದದಲ್ಲಿ ಸಿಲುಕಿದ್ದಾರೆ. ಏಕೆಂದರೆ ಮೆಟ್ ಗಾಲಾದಲ್ಲಿ ಕಿಮ್ ಕಾರ್ಡಶಿಯಾನ್ ಧರಿಸಿದ್ದ ಈ ಬಹುಮುಖ್ಯವಾದ ಉಡುಪು ನಾಶವಾಗಿದೆ.
41 ವರ್ಷದ ಕಿಮ್ ಕಾರ್ಡಶಿಯಾನ್ ಈ ಗೌನ್ನ್ನು ಧರಿಸುವ ಸಲುವಾಗಿ ಕೇವಲ 1 ವಾರದಲ್ಲಿ 16 ಪೌಂಡ್ ತೂಕವನ್ನು ಕಳೆದುಕೊಂಡಿದ್ದಾರೆ. ಆದರೂ ಸಹ ಕಿಮ್ ಕಾರ್ಡಶಿಯಾನ್ ಈ ಉಡುಪಿನಲ್ಲಿ ಆರಮದಾಯಕವಾಗಿ ಇದ್ದಂತೆ ತೋರಲಿಲ್ಲ. ಕಾರ್ಡಶಿಯಾನ್ಗೆ ಗೌನ್ನಲ್ಲಿ ಮುಕ್ತವಾಗಿ ಚಲಿಸಲು ಸಾಧ್ಯವಾಗಿರಲಿಲ್ಲ .
ಈ ಉಡುಪನ್ನು ಧರಿಸಲು ನನಗೆ ಅವಕಾಶ ಸಿಕ್ಕಿದ್ದಕ್ಕೆ ನಾನು ಗೌರವಾನ್ವಿತಳು. ಇದು ಅಮರಿಕದ ಇತಿಹಾಸದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ನಾನು ಈ ಉಡುಗೆಯಲ್ಲಿ ಕುಳಿತುಕೊಳ್ಳಲು ಅಥವಾ ತಿನ್ನಲು ಇಷ್ಟಪಡುವುದಿಲ್ಲ . ನಾನು ಸಾಮಾನ್ಯವಗಾಗಿ ಧರಿಸುವ ಬಾಡಿ ಮೇಕಪ್ನ್ನು ಈ ಉಡುಗೆಯಲ್ಲಿ ಧರಿಸಿಲ್ಲ ಎಂದು ಹೇಳಿದ್ದರು. ಇದಾದ ಬಳಿಕ ಪೀಟ್ ಡೇವಿಡ್ಸನ್ ಜೊತೆಯಲ್ಲಿ ಕಿಮ್ ಕಾರ್ಡಶಿಯಾನ್ ಪೋಸ್ ಕೂಡ ನೀಡಿದ್ದರು. ಆದರೆ ಇದೀಗ ಕಿಮ್ ಕಾರ್ಡಶಿಯಾನ್ ವಿರುದ್ಧ ವಿಶ್ವದ ಅತ್ಯಂತ ದುಬಾರಿ ಗೌನ್ಗೆ ಹಾನಿ ಉಂಟು ಮಾಡಿರುವ ಆರೋಪ ಎದುರಾಗಿದೆ.
ಮೆಟ್ ಗಲಾದಲ್ಲಿ ಕಾರ್ಡಶಿಯಾನ್ ಗೌನ್ನ್ನು ಧರಿಸುವ ಮುನ್ನ ಹಾಗೂ ನಂತರದ ಫೋಟೋಗಳನ್ನು ಪಾಪ್ ಕಲ್ಚರ್ ಪ್ರಕಟಿಸಿದೆ. ಈ ಫೋಟೋದಲ್ಲಿ ಗೌನ್ನ ಹಿಂಭಾಗದಲ್ಲಿ ಹರಳುಗಳು ಉರುಳಿರುವದನ್ನು ಕಾಣಬಹುದಾಗಿದೆ .
ಈ ವಿಚಾರ ವೈರಲ್ ಆಗುತ್ತಿದ್ದಂತೆಯೇ ಇಂಟರ್ನೆಟ್ನಲ್ಲಿ ನೆಟ್ಟಿಗರು ಆಕ್ರೋಶವನ್ನು ಹೊರ ಹಾಕಲು ಆರಂಭಿಸಿದ್ದಾರೆ. ಕಿಮ್ ಈ ಉಡುಪನ್ನು ಧರಿಸಬಾರದಿತ್ತು. ಮರ್ಲಿನ್ ಮನ್ರೋಗೆ ಗೌರವ ಕೊಡಲೇಬೇಕು ಎನಿಸಿದ್ದರೆ ಅವರು ಇಂತಹದ್ದೇ ಪ್ರತಿರೂಪದ ಉಡುಪನ್ನು ಧರಿಸಬಹುದಿತ್ತು. ಇದೊಂದು ಐತಿಹಾಸಿಕ ಉಡುಗೆಯಾಗಿದ್ದು ಈಗ ಅದೂ ಹಾಳಾಗಿದೆ ಎಂದು ಮೂಗು ಮುರಿದಿದ್ದಾರೆ.
ಇದನ್ನು ಓದಿ : Virat Kohli : ಸಮುದ್ರ ತಟದಲ್ಲಿ ಕುಳಿತು ಹಾಟ್ ಫೋಟೋ ಶೇರ್ ಮಾಡಿದ ಕಿಂಗ್ ವಿರಾಟ್ ಕೊಹ್ಲಿ
ಇದನ್ನೂ ಓದಿ : Broadcasting Rights : ಅಬ್ಬಬ್ಬಾ… ಐಪಿಎಲ್ ಮುಂದೆ ಇಂಗ್ಲೀಷ್ ಪ್ರೀಮಿಯರ್ ಲೀಗ್ ದಾಖಲೆಯೂ ಉಡೀಸ್
Netizens bash Kim Kardashian for damaging Marilyn Monroe’s iconic dress during her Met Gala outing