ಸೋಮವಾರ, ಏಪ್ರಿಲ್ 28, 2025
HomeBreakingಮಿಸೈಲ್ ಬಳಕೆಯೂ ಇಲ್ಲಾ… ಯುದ್ದವೂ ಇಲ್ಲಾ ! WHO ಜೊತೆ ಸೇರಿ ಅಮೇರಿಕಾವನ್ನು ಮಲಗಿಸಿತಾ ಚೀನಾ...

ಮಿಸೈಲ್ ಬಳಕೆಯೂ ಇಲ್ಲಾ… ಯುದ್ದವೂ ಇಲ್ಲಾ ! WHO ಜೊತೆ ಸೇರಿ ಅಮೇರಿಕಾವನ್ನು ಮಲಗಿಸಿತಾ ಚೀನಾ ?

- Advertisement -

ಅಮೇರಿಕಾ.. ವಿಶ್ವದ ದೊಡ್ಡಣಾ… ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರ. ದೈತ್ಯ ಯುದ್ದ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಅಮೇರಿಕಾವನ್ನು ಸೋಲಿಸೋದು ವಿಶ್ವದ ಬಲಿಷ್ಟ ರಾಷ್ಟ್ರಗಳಿಗೂ ಸಾಧ್ಯವಿಲ್ಲ. ಆದ್ರಿಂದು ಯಾವುದೇ ಮಿಸೈಲ್ ಬಳಕೆ ಮಾಡದೇ, ಯುದ್ದವನ್ನೂ ಮಾಡದೇ ಚೀನಾ ಅಮೇರಿಕಾವನ್ನು ಮಲಗಿಸಿಬಿಟ್ಟಿದೆ !

ಚೀನಾದ ವುಹಾನ್ ನಗರದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ಅನ್ನೋ ಮಹಾಮಾರಿ ಇಂದು ವಿಶ್ವವನ್ನೇ ನಡುಗಿಸಿಬಿಟ್ಟಿದೆ. ವಿಶ್ವದ ದೈತ್ಯ ರಾಷ್ಟ್ರಗಳೇ ಇಂದು ಕೊರೊನಾದ ಮುಂದೆ ಮಂಡಿಯೂರಿವೆ. ಅಮೇರಿಕಾ, ಸ್ಪೈನ್, ಇಟಲಿ, ಫ್ರಾನ್ಸ್ ನಂತರ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವನ್ನು ಹೊಂದಿರೋ ರಾಷ್ಟ್ರಗಳೇ ತತ್ತರಿಸಿವೆ. ಅದ್ರಲ್ಲೂ ದೊಡ್ಡಣ್ಣ ಎನಿಸಿಕೊಂಡಿರೋ ಅಮೇರಿಕಾ ಕೊರೊನಾ ಆರ್ಭಟಕ್ಕೆ ನಿಜಕ್ಕೂ ತತ್ತರಿಸಿ ಹೋಗಿವೆ.

ಇದುವರೆಗೆ ಅಮೇರಿಕಾದಲ್ಲಿ 6,44,348 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಬರೋಬ್ಬರಿ 28,554 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 48,708 ಮಂದಿ ಡೆಡ್ಲಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಆದರೆ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿರೋ 51,096 ಮಂದಿ ಇಂದಿಗೂ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಇವರ ಸ್ಥಿತಿ ಚಿಂತಾಜನಕವಾಗಿದೆ.

ಆದರೆ ವಿಶ್ವದಲ್ಲಿಯೇ ಕೊರೊನಾ ವೈರಸ್ ಹುಟ್ಟಿಗೆ ಕಾರಣವಾಗಿರೋ ಚೀನಾ ಮಾತ್ರ ಕೊರೊನಾ ಸೋಂಕಿನಿಂದ ಬಚಾವಾಗಿದೆ ಅನ್ನುತ್ತಿದೆ ವಿಶ್ವ ಆರೋಗ್ಯ ಸಂಸ್ಥೆಯ ವರದಿ. ವಿಶ್ವ ಆರೋಗ್ಯ ಸಂಸ್ಥೆ (WHO) ನೀಡಿರುವ ಅಂಕಿಅಂಶಗಳ ಪ್ರಕಾರ ಚೀನಾದಲ್ಲಿ ಇದುವರೆಗೆ 82,341 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಈ ಪೈಕಿ ಕೇವಲ 3,342 ಮಂದಿಯಷ್ಟೇ ಸಾವನ್ನಪ್ಪಿದ್ದಾರೆ.

ಅಲ್ಲದೇ 77,892 ಮಂದಿ ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆದು ಪಾರಾಗಿದ್ದಾರೆ. ಇದೀಗ 1,172 ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಕೇವಲ 95 ಮಂದಿಯಷ್ಟೇ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುತ್ತಿದೆ WHO.

ಆದರೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರೋ ಅಂಕಿಅಂಶಗಳು ಇದೀಗ ವಿಶ್ವದ ಜನರ ಅನುಮಾನಕ್ಕೆ ಕಾರಣವಾಗಿದೆ. ಅದ್ರಲ್ಲೂ ಚೀನಾದ ಮಾಧ್ಯಮಗಳೇ ಚೀನಾದಲ್ಲಿ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಮೃತಪಟ್ಟವರನ್ನು ಸಾಮೂಹಿಕವಾಗಿ ಅಂತ್ಯಕ್ರೀಯೆ ನಡೆಸಲಾಗಿದೆ. ಕೊರೊನಾ ಪೀಡಿತರ ಚಿಕಿತ್ಸೆಗಾಗಿ 10 ದಿನದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ ಅಂತಾ ವರದಿ ಮಾಡಿವೆ.

ಇನ್ನೂ ಚೀನಾದ ಟೆಲಿಕಾಂ ಸಂಸ್ಥೆಯೊಂದು ಕಳೆದ ಜನವರಿ ತಿಂಗಳಿನಿಂದಲೂ ತನ್ನ 85 ಲಕ್ಷ ಗ್ರಾಹಕರ ಮೊಬೈಲ್ ಪೋನ್ ಸ್ವಚ್ ಆಫ್ ಆಗಿದೆ. ನನ್ನ ಗ್ರಾಹಕರನ್ನು ಚೀನಾ ಹತ್ಯೆ ಮಾಡಿದೆ ಅಂತಾ ಆರೋಪ ಮಾಡಿತ್ತು. ಆದರೆ ಚೀನಾದ ಮಾಧ್ಯಮಗಳು ಮಾಡುತ್ತಿರೊ ವರದಿಗೂ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ಸರಕಾರ ನೀಡುತ್ತಿರೋ ಕೊರೊನಾ ಅಂಕಿ ಅಂಶಗಳಿಗೂ ಅಜಗಜಾಂತರ ವ್ಯತ್ಯಾಸವಿದೆ.

ಇನ್ನು ವಿಶ್ವ ಆರೊಗ್ಯ ಸಂಸ್ಥೆ ಕೊರೊನಾ ವಿಚಾರದಲ್ಲಿ ಆರಂಭದಿಂದಲೂ ಗೊಂದಲಕರವಾದ ಹೇಳಿಕೆಗಳನ್ನು ನೀಡುತ್ತಲೇ ಬಂದಿದೆ. ಆರಂಭದಲ್ಲಿ ಕೊರೊನಾ ಮನುಷ್ಯನಿಂದ ಮನುಷ್ಯನಿಗೆ ಹರಡುವುದಿಲ್ಲಾ ಎಂದಿದ್ದ ವಿಶ್ವ ಆರೋಗ್ಯ ಸಂಸ್ಥೆ ಅಧ್ಯಕ್ಷ ಅಂಟಾನಿಯೋ ಗುಟೇರಸ್, ತದನಂತದಲ್ಲಿ ಕೊರೊನಾ ಸಾಂಕ್ರಾಮಿಕ ರೋಗವೇ ಅಲ್ಲಾ ಅಂತಾ ಹೇಳಿದ್ದರು.

ಚೀನಾದಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದ್ದರೂ ಕೂಡ ವಿಶ್ವ ಆರೋಗ್ಯ ಸಂಸ್ಥೆ ನೀಡುತ್ತಿದ್ದ ಹೇಳಿಕೆ ವಿಶ್ವದ ರಾಷ್ಟ್ರಗಳು ಬಲವಾಗಿಯೇ ನಂಬಿದ್ದವು. ಆ ಹೊತ್ತಿಗಾಗಲೇ ಚೀನಾದಲ್ಲಿದ್ದ ಸುಮಾರು 50 ರಿಂದ 70 ಲಕ್ಷಕ್ಕೂ ಅಧಿಕ ಮಂದಿ ವಿಶ್ವದ ನಾನಾ ರಾಷ್ಟ್ರಗಳಿಗೆ ತೆರಳಿದ್ದಾರೆ. ಹೀಗಾಗಿಯೇ ಕೊರೊನಾ ಮಹಾಮಾರಿ ಇಂದು ವಿಶ್ವದಾದ್ಯಂತ ವ್ಯಾಪಿಸಿದೆ.

ಅದ್ರಲ್ಲೂ ವಿಶ್ವ ಆರೋಗ್ಯ ಸಂಸ್ಥೆಗೆ ಅಪಾರ ಪ್ರಮಾಣದಲ್ಲಿ ಧನಸಹಾಯವನ್ನು ಮಾಡುತ್ತಿದ್ದ ಅಮೇರಿಕಾ ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಗಳನ್ನು ಚಾಚೂ ತಪ್ಪದೇ ಪಾಲನೆ ಮಾಡಿತ್ತು. ಚೀನಾದಲ್ಲಿ ಲಕ್ಷ ಲಕ್ಷ ಮಂದಿ ಸಾವನ್ನಪ್ಪುತ್ತಿದ್ದರೂ ಕೂಡ ವಿಶ್ವ ಆರೋಗ್ಯ ಸಂಸ್ಥೆ ನೀಡುತ್ತಿದ್ದ ಅಂಕಿ ಅಂಶಗಳನ್ನೇ ನಂಬಿ ಕುಳಿತಿತ್ತು ಅಮೇರಿಕಾ.

ಇದರಿಂದಾಗಿಯೇ ಅಮೇರಿಕಾದಲ್ಲಿಂದು ಕೊರೊನಾ ಸೋಂಕಿಗೆ ಜನರ ಹಾದಿ ಬೀದಿಯಲ್ಲಿ ಬಿದ್ದು ಸಾಯುತ್ತಿದ್ದಾರೆ. ಕೊರೊನಾ ತೀವ್ರತೆಯಿಂದ ಜನರನ್ನು ಬಜಾವ್ ಮಾಡಲು ಅಮೇರಿಕಾ ಇನ್ನಲ್ಲಿದ ಕಸರತ್ತು ನಡೆಸುತ್ತಿದೆ. ಭಾರತದ ಸಹಾಯವನ್ನು ಯಾಚಿಸಿರೋ ಅಮೇರಿಕಾ ಔಷಧಗಳನ್ನೂ ಭಾರತದಿಂದ ತರಿಸಿಕೊಂಡಿದೆ. ಆದ್ರೀಗ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿಯೇ ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಜೊತೆಗೆ ಸೇರಿ ಕಳ್ಳಾಟವಾಡಿದೆ. ಕೊರೊನಾ ವಿಚಾರವಾಗಿ ವಿಶ್ವಕ್ಕೆ ಮೋಸ ಮಾಡಿದೆ ಅಂತಾ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಯಾಕೆ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಧನ ಸಹಾಯವನ್ನೂ ನಿಲ್ಲಿಸಿ ಬಿಟ್ಟಿದ್ದಾರೆ.

ವಿಶ್ವವನ್ನೂ ಕೊರೊನಾ ರೋಗದಿಂದ ಮುಕ್ತಿಗೊಳಿಸಬೇಕಿದ್ದ ವಿಶ್ವ ಆರೋಗ್ಯ ಸಂಸ್ಥೆ ನಿಜಕ್ಕೂ ಚೀನಾದ ಜೊತೆ ಸೇರಿ ವಿಶ್ವವನ್ನೇ ಕೊರೊನಾದ ಮೃತ್ಯುಕೂಪಕ್ಕೆ ತಳ್ಳಿದೆ. ಅಮೇರಿಕಾವನ್ನು ಮಣಿಸೋದಕ್ಕೆ ಚೀನಾದ ಜೊತೆಗೆ ಕೈ ಜೋಡಿಸಿರೋ ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷ ಅಂಟಾನಿಯೋ ಗುಟೇರಸ್ ಇಂದು ವಿಶ್ವಕ್ಕೆ ಮೋಸ ಮಾಡಿದ್ದಾರೆ.

ಅಮೇರಿಕಾವನ್ನು ಯುದ್ದದ ಮೂಲಕ ಸೋಲಿಸೋದಕ್ಕೆ ಸಾಧ್ಯವೇ ಇಲ್ಲಾ ಅನ್ನೋದನ್ನು ಅರಿತಿರುವ ಚೀನಾ ಕೊರೊನಾ ಅನ್ನೋ ಜೈವಿಕ ಬಾಂಬ್ ಮೂಲಕ ಅಮೇರಿಕಾವನ್ನು ಯುದ್ದವೇ ಇಲ್ಲದೇ ಸೋಲಿಸಿದೆ ಅನ್ನೋ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಸಾಲದಕ್ಕೆ ಸದಾ ಅಮೇರಿಕಾವನ್ನು ವಿರೋಧಿಸುತ್ತಲೇ ಬಂದಿದ್ದ ಚೀನಾ ಕೊರೊನಾ ವಿಚಾರದಲ್ಲಿಯೂ ಸುಳ್ಳು ಹೇಳಿರುವುದು ವಿಶ್ವದ ಮುಂದೆ ಜಗಜ್ಹಾಹೀರಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ದ ಸಮರ ಸಾರಿರೋ ಅಮೇರಿಕಾ ಧನಸಹಾಯವನ್ನು ನಿಲ್ಲಿಸಿದ್ರೆ, ಅಮೇರಿಕಾ ಚೀನಾ ವಿರುದ್ದ ಸೇಡು ತೀರಿಸಿಕೊಳ್ಳೋದಕ್ಕೆ ಕಾಯುತ್ತಿದೆ. ಕೊರೊನಾ ಮುಗಿಯುತ್ತಿದ್ದಂತೆಯೇ ಚೀನಾ ಅಮೇರಿಕಾ ನಡುವೆ ಯುದ್ದ ಫಿಕ್ಸ್ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಚೀನಾ ಮಾತ್ರ ಯುದ್ದವಿಲ್ಲದೇ, ಯುದ್ದ ಸಾಮಗ್ರಿಗಳನ್ನೂ ಬಳಸದೇ ಅಮೇರಿಕಾವನ್ನ ಕೊರೊನಾ ಮೂಲಕವೇ ಸೋಲಿಸಿದ್ದು ಮಾತ್ರ ಸುಳ್ಳಲ್ಲ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular