ಗರ್ಭಿಣಿಗೆ ಹೆರಿಗೆ, ವೈದ್ಯರಿಗೆ ಕ್ವಾರಂಟೈನ್ : ಕೊರೊನಾ ಸೋಂಕಿದ್ದರು ಸುಳ್ಳು ಹೇಳಿದ ದಂಪತಿ !

0

ಬೆಂಗಳೂರು : ಆ ದಂಪತಿಗಳಿಬ್ಬರಿಗೂ ಕೊರೊನಾ ಸೋಂಕಿತ್ತು. ಆದ್ರೆ ಅದನ್ನು ಮುಚ್ಚಿಟ್ಟು ಗರ್ಭಿಣಿ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದನ್ನು ಅರಿಯದ ವೈದ್ಯರು ಗರ್ಭಣಿಗೆ ಹೆರಿಗೆ ಮಾಡಿಸಿದ್ದಾರೆ. ಆದ್ರೀಗ ಕೊರೊನಾ ಪೀಡಿತ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದ ವೈದ್ಯರು ಹಾಗು ಆರೋಗ್ಯ ಸಿಬ್ಬಂಧಿಗಳನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ಆತಂಕ ಶುರುವಾಗಿದೆ.

ಬೆಂಗಳೂರಿನ ಕುರುಬರ ಹಳ್ಳಿಯಲ್ಲಿರುವ ಲೋಟಸ್ ಆಸ್ಪತ್ರೆಗೆ ಗರ್ಭಿಣಿಯನ್ನು ದಾಖಲು ಮಾಡಲಾಗಿತ್ತು. ವೈದ್ಯರು ಆಕೆಗೆ ಹೆರಿಗೆ ಮಾಡಿಸಿದ್ದರು. ಆಕೆ ಮಗುವಿಗೆ ಜನನ ನೀಡಿದ ಬಳಿಕ ದಂಪತಿಗಳು ತಮಗೆ ಕೊರೊನಾ ಸೋಂಕು ಇದೆ ಅನ್ನೋದನ್ನು ವೈದ್ಯರ ಮುಂದೆ ಬಾಯ್ಬಿಟ್ಟಿದ್ದಾರೆ.

ಇದರಿಂದಾಗಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂಧಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ ಕುರಿತು ಮಾಹಿತಿ ಪಡೆದಿರೋ ಆರೋಗ್ಯ ಇಲಾಖೆ ಆಸ್ಪತ್ರೆಯಲ್ಲಿರುವ ವೈದ್ಯರನ್ನು ಹಾಗೂ ಆರೋಗ್ಯ ಸಿಬ್ಬಂಧಿಗಳನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ಆಸ್ಪತ್ರೆಯನ್ನು ಸಂಪೂರ್ಣವಾಗಿ ಬೀಗ ಹಾಕಲಾಗಿದೆ.

ಕೇವಲ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂಧಿಗಳಷ್ಟೇ ಅಲ್ಲಾ, ಆಸ್ಪತ್ರೆಗೆ ಬಂದಿದ್ದ ರೋಗಿಗಳಿಗೂ ಕೂಡ ಸೋಂಕು ತಗುಲಿದೆಯಾ ಅನ್ನೋ ಆತಂಕವೂ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

ಆಸ್ಪತ್ರೆಯ ಸುತ್ತಮುತ್ತಲೂ ಕೊರೊನಾ ಸೋಂಕು ವ್ಯಾಪಿಸದಂತೆ ಆಸ್ಪತ್ರೆಯ ಮುಂಭಾಗದ ರಸ್ತೆಯನ್ನೇ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಪೊಲೀಸರು ಬಿಗಿ ಭದ್ರತೆಯನ್ನು ಕಲ್ಪಿಸಿದ್ದಾರೆ.

Leave A Reply

Your email address will not be published.