ಕಿಚ್ಚ ಸುದೀಪ್ ಅಭಿನಯದ ಬಹುನೀರಿಕ್ಷಿತ ಸಿನಿಮಾ ವಿಕ್ರಾಂತ್ ರೋಣ ರಿಲೀಸ್ ಗೆ ಸಿದ್ಧವಾಗಿದೆ. ಸಿನಿಮಾ ರಿಲೀಸ್ ಗೂ ಮುನ್ನವೇ ರಿಲೀಸ್ ಆಗಿರೋ ಸಾಂಗ್ ಸಖತ್ ಹಾಟ್ ಸಾಂಗ್ ರಾ ರಾ ರಕ್ಕಮ್ಮಾ ಫುಲ್ ಸದ್ದು ಮಾಡಿದೆ. ಇದರ ಜೊತೆಗೆ ತೆರೆಗೆ ಬಂದ ಟ್ರೇಲರ್ ಕೂಡ ಸುದೀಪ್ ಅಭಿಮಾನಿಗಳ ಮನಗೆದ್ದಿದ್ದು, ಬಹು ಭಾಷೆಯಲ್ಲಿ ತೆರೆ ಕಂಡ ಸಿನಿಮಾದ ಟ್ರೇಲರ್ ಯೂಟ್ಯೂಬ್ ನಲ್ಲಿ (Vikrant Rona Trailer record) ದಾಖಲೆ ಬರೆಯುತ್ತಿದೆ.
ಇನ್ನೇನು ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಗೆ ದಿನಗಣನೆ ನಡೆದಿದೆ. ಜುಲೈ 28 ರಂದು ತೆರೆಗೆ ಬರೋ ಈ ಸಿನಿಮಾ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾತುರರಾಗಿ ಕಾಯ್ತಿದ್ದಾರೆ. ಈ ಮಧ್ಯೆ ಸಾಕಷ್ಟು ಕುತೂಹಲ ಮೂಡಿಸಿದ್ದ ಸಿನಿಮಾದ ಟ್ರೇಲರ್ ಜೂನ್ 23 ರಂದು ತೆರೆಕಂಡಿದ್ದು, ಸಖತ್ ವೀವ್ಸ್ ಪಡೆದುಕೊಂಡಿದೆ. ಕಥಾಹಂದರ, ಸಿನಿಮಾದ ದೃಶ್ಯಾವಳಿ ಸೇರಿದಂತೆ ಎಲ್ಲವೂ ಕುತೂಹಲ ಮೂಡಿಸುವಂತಿದ್ದು, ಎಲ್ಲ ಭಾಷೆಯಲ್ಲೂ ಸಖತ್ ವೀವ್ಸ್ ಪಡೆದುಕೊಳ್ಳುತ್ತಿದೆ.

ಕನ್ನಡ,ಹಿಂದಿ,ತೆಲುಗು,ತಮಿಳು ಹಾಗೂ ಮಲೆಯಾಳಂ ಹಾಗೂ ಇಂಗ್ಲೀಷ್ ನಲ್ಲಿ ಟ್ರೇಲರ್ ತೆರೆ ಕಂಡಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರೋ ಈ ಟ್ರೇಲರ್, ಕನ್ನಡದಲ್ಲಿ ಬರೋಬ್ಬರಿ 72.14. ಲಕ್ಷ ವೀವ್ಸ್ ಪಡೆದುಕೊಂಡಿದೆ. ಇನ್ನೂ ತೆಲುಗಿನಲ್ಲಿ ವಿಕ್ರಾಂತ್ ರೋಣ 35.62 ಲಕ್ಷ ವೀವ್ಸ್ ಪಡೆದಿದ್ದರೇ, ಹಿಂದಿಯಲ್ಲಿ 27.12 ಲಕ್ಷ, ತಮಿಳಿನಲ್ಲಿ 19.99 ಲಕ್ಷ ಹಾಗೂ ಮಲೆಯಾಳಂನಲ್ಲಿ 13.38 ಲಕ್ಷ ಹಾಗೂ ಇಂಗ್ಲೀಷ್ ನಲ್ಲೂ ಗಮನಾರ್ಹ ಎಂದರೇ ಬರೋಬ್ಬರಿ 46.18 ಲಕ್ಷ ಮಂದಿ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.
Excited and waiting for this @KicchaSudeep Looks amazing!! Superb work by the entire team!! 👊 https://t.co/tlb0qhBsec
— Suniel Shetty (@SunielVShetty) June 24, 2022
ಈ ಸಿನಿಮಾದಲ್ಲಿ ಸುದೀಪ್ ಮತ್ತೊಮ್ಮೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಿಗೂಢವಾದ ರಹಸ್ಯವೊಂದನ್ನು ಬೇಧಿಸುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ನಿರೂಪ್ ಭಂಡಾರಿ, ನೀತಾ ಅಶೋಕ್ ಸುದೀಪ್ ಗೆ ಜೊತೆಯಾಗಿದ್ದಾರೆ. ಹಿಂದಿ ಹಾಗೂ ಇತರ ಭಾಷೆಗಳ ಪ್ರಮೋಶನ್ ಸೇರಿದಂತೆ ಒಟ್ಟು ಸಿನಿಮಾದ ಬಜೆಟ್ 100 ಕೋಟಿ ದಾಟಿದೆ. ಜಾಕ್ ಮಂಜು ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
#VikrantRonaTrailer Trending Worldwide – https://t.co/kkvqB5CYdh#VikrantRonaJuly28 @KicchaSudeep @anupsbhandari @nirupbhandari @JackManjunath @shaliniartss @InvenioF @ZeeStudios_ @LahariMusic @SKFilmsOfficial #VRonJuly28 pic.twitter.com/X1JwonrUjS
— VikrantRona (@VikrantRona) June 24, 2022
ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್ ಈ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದು, ಐಟಂ ಸಾಂಗ್ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ರಾ ರಾ ರಕ್ಕಮ್ಮ ಹಾಡಿಗೆ ಕಂಪೋಸ್ ಮಾಡಲಾದ ಸ್ಟೆಪ್ ಗಳು ಈಗ ಎಲ್ಲರ ಮನೆಗೆದ್ದಿದ್ದು ಹಾಡು ಸಖತ್ ಮೋಡಿ ಮಾಡ್ತಿದೆ.
ಇದನ್ನೂ ಓದಿ : ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಹೆಚ್ಚಿಸಿದ ಡಿ ಬಾಸ್ : ಸೆಟ್ಟೇರಲಿದೆ ದರ್ಶನ್ ತೂಗುದೀಪ್ ಪ್ಯಾನ್ ಇಂಡಿಯಾ ಸಿನಿಮಾ
ಇದನ್ನೂ ಓದಿ : ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-3 ಗೆ ಮಿಸ್ ವರ್ಲ್ಡ್ ಮಾನುಷಿ ಚಿಲ್ಲರ್ ನಾಯಕಿ ?
Vikrant Rona Trailer record of 72 lakh people watch