Add Beneficiary in SBI YONO : SBI YONO ದಲ್ಲಿ ಬೆನಿಫಿಷಿಯರಿಗಳನ್ನು ಸೇರಿಸುವುದು ಹೇಗೆ ಗೊತ್ತಾ?

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(SBI) ತನ್ನ ಖಾತೆದಾರರಿಗೆ SBI YONO ಮತ್ತುSBI YONO Lite ನಂತಹ ಆನ್‌ಲೈನ್‌ ಅಪ್ಲಿಕೇಶನ್‌ಗಳ ಮೂಲಕ ಅನೇಕ ಸೇವೆಗಳನ್ನು ಒದಗಿಸುತ್ತಿದೆ (Add Beneficiary in SBI YONO). ಈ ಎರಡೂ ಆನ್‌ಲೈನ್‌ ಅಪ್ಲಿಕೇಶನ್‌ಗಳಲ್ಲಿ ಹಣ ಕಳುಹಿಸುವುದು ಮತ್ತು ಪಡೆಯುವುದು, ಬಿಲ್‌ ಪಾವತಿಸಲು, ಟಾಪ್‌–ಅಪ್‌ ರಿಚಾರ್ಜ್‌ ಮಾಡುವಂತಹ ಹಲವು ಸೌಲಭ್ಯಗಳಿವೆ. ಖಾತೆದಾರರು ಈ ಆಪ್ ಮೂಲಕ ತಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಚೆಕ್‌ ಮಾಡಿಕೊಳ್ಳಬಹುದು. ಜೊತೆಗೆ ‘ಇ–ಪಾಸ್‌ಬುಕ್‌’ ಮೂಲಕ ನಾವು ಮಾಡಿದ ವಹಿವಾಟುಗಳನ್ನು ನೋಡಿಕೊಳ್ಳಬಹುದು.

ಈ ಆಪ್‌ ನಿಮ್ಮ ಖಾತೆಗೆ ಬೆನಿಫಿಷಿಯರಿಗಳನ್ನು ಸೇರಿಸಿಕೊಳ್ಳವ ಅವಕಾಶವನ್ನು ನೀಡಿದೆ. ಹಣ ಸಂದಾಯ ಮಾಡಲು ಬಯಸುವ ವ್ಯಕ್ತಿಗಳ ಖಾತೆ ಸಂಖ್ಯೆಯನ್ನು ಬೆನಿಫಿಷಿಯರಿಯಲ್ಲಿ ಸೇರಿಸಿಕೊಳ್ಳುವ ಮೂಲಕ ನೀವು ಸುಲಭ ಮತ್ತು ತ್ವರಿತವಾಗಿ ಹಣ ಪಾವತಿಸಬಹುದಾಗಿದೆ. ಬೆನಿಫಿಷಿಯರಿಯಲ್ಲಿ ವ್ಯಕ್ತಿಗಳನ್ನು ಸೇರಿಸುವ ಮಾಹಿತಿ ಇಲ್ಲಿದೆ:

ಇದನ್ನೂ ಓದಿ : Bank Holiday July 2022 : ಜುಲೈ ತಿಂಗಳಲ್ಲಿ 12 ದಿನ ಬ್ಯಾಂಕ್‌ ರಜೆ

SBI YONO ದಲ್ಲಿ ಬೆನಿಫಿಷಿಯರಿಗಳನ್ನು ಸೇರಿಸಿಕೊಳ್ಳುವುದು ಹೇಗೆ?

ಮೊದಲಿಗೆ SBI YONO ಆಪ್‌ನ ಹೊಸ ಆವೃತ್ತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ನಂತರ ಈ ಕೆಳಗಿನ ಸ್ಟೆಪ್ಸ್‌ ಅನುಸರಿಸಿ.

  1. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ SBI YONO ಆಪ್‌ ತೆರೆಯಿರಿ.
  2. MPIN ಅಥವಾ ಯುಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ನೀಡುವುದರ ಮೂಲಕ ಲಾಗಿನ್‌ ಆಗಿ.
  3. ಬ್ಯಾಂಕ್‌ ಅಕೌಂಟ್‌ನಲ್ಲಿರುವ Yono Pay ಆಪ್ಷನ್‌ ಟ್ಯಾಪ್‌ ಮಾಡಿ. ( YONO Lite ಬಳಕೆದಾರರು ಫಂಡ್‌ ಟ್ರಾನ್ಸ್‌ಫರ್‌ (Fund Transfer) ಮೇಲೆ ಕ್ಲಿಕ್‌ ಮಾಡಿ.)
  4. ಆಡ್‌/ಮ್ಯಾನೇಜ್‌ ಬೆನಿಫಿಷಿಯರಿ(Add/Manage Beneficiary) ಟ್ಯಾಪ್‌ ಮಾಡಿ.
  5. ಇಲ್ಲಿ ಮುಂದುವರಿಯಲು ಮತ್ತೆ SBI ಇಂಟರ್‌ನೆಟ್‌ ಬ್ಯಾಂಕಿಂಗ್‌ ಪ್ರೊಫೈಲ್‌ ಪಾಸ್‌ವರ್ಡ್‌ ನಮೂದಿಸಿ, ನಂತರ ಸಬ್ಮಿಟ್‌ ಮಾಡಿ.
  6. ಬೆನಿಫಿಷಿಯರಿಯನ್ನು ಸೇರಿಸಲು ಕೆಲವು ಪ್ರಕ್ರಿಯೆಗಳನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ‘ಸೆಲೆಕ್ಟ್‌ ಬೆನಿಫಿಷಿಯರಿ ಟೈಪ್‌’ ಡ್ರಾಪ್‌ ಡೌನ್‌ ಬಟನ್‌ ಮೇಲೆ ಟ್ಯಾಪ್‌ ಮಾಡಿ.
  7. ಅಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಥವಾ ಅದರ್‌ ಬ್ಯಾಂಕ್‌ ಅಕೌಂಟ್‌ ನಲ್ಲಿ ಆಯ್ಕೆ ಮಾಡಿ.
  8. ನಂತರ ಬೆನಿಫಿಷಿಯರಿಯ ಹೆಸರು, ಬ್ಯಾಂಕ್‌ ಖಾತೆಯ ಸಂಖ್ಯೆ, IFSC Code ಇನ್ನಿತರ ವಿವಿರಗಳನ್ನು ನೀಡಿ. ಮತ್ತು ಟ್ರಾನ್ಸಫರ್‌ ಲಿಮಿಟ್‌ ಆಪ್ಷನ್‌ ನಲ್ಲಿ ಹಣ ವರ್ಗಾಯಿಸುವ ಗರಿಷ್ಠ ಮಿತಿಯನ್ನು ನಿಗದಿಪಡಿಸಿಕೊಳ್ಳಿ. ಉದಾಹರಣೆಗೆ: 10,000 ರೂ. ಎಂದು ನಮೂದಿಸಿದ್ದರೆ ಆಗ ಬೆನಿಫಿಷಿಯರಿಗೆ ಒಂದು ಸಲಕ್ಕೆ ಗರಿಷ್ಠ 10,000 ರೂ. ಗಳನ್ನು ಮಾತ್ರ ಪಾವತಿಸಬಹುದು.
  9. ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಬರುವ OTP ಯನ್ನು ನಮೂದಿಸುವ ಮೂಲಕ ದೃಢೀಕರಿಸಬೇಕು.
  10. 24 ಗಂಟೆಗಳ ಒಳಗೆ ನಿಮ್ಮ SBI YONO / SBI YONO Lite ಅಪ್ಲಿಕೇಷನ್‌ಗೆ ಬೆನಫಿಷಿಯರಿ ಖಾತೆಯು ಲಿಂಕ್‌ ಆಗಿರುತ್ತದೆ.

ಹೀಗೆ SBI YONO/SBI YONO Lite ಆಪ್‌ಗೆ ಬೆನಿಫಿಷಿಯರಿಗಳನ್ನು ಸುಲಭವಾಗಿ ಸೇರಿಸಿಕೊಳ್ಳಬಹುದು. ನಂತರ ನೀವು ಬಯಸಿದಾಗ ಸುಲಭವಾಗಿ ಅವರಿಗೆ ಹಣ ಸಂದಾಯ ಮಾಡಬಹುದು.

ಇದನ್ನೂ ಓದಿ :Senior Citizens : ಹಿರಿಯ ನಾಗರಿಕರಿಗೆ FDಗಳ ಮೇಲೆ ಹೆಚ್ಚಿನ ಬಡ್ಡಿ!!

(Add Beneficiary in SBI YONO, SBI YONO Lite App for easy transaction)

Comments are closed.