ಬುಧವಾರ, ಏಪ್ರಿಲ್ 30, 2025
HomeCinemaActor Vijay devarakonda : ಕ್ಯಾಮರಾ ಎದುರು ಬೆತ್ತಲಾದ ನಟ ವಿಜಯ್ ದೇವರಕೊಂಡ :...

Actor Vijay devarakonda : ಕ್ಯಾಮರಾ ಎದುರು ಬೆತ್ತಲಾದ ನಟ ವಿಜಯ್ ದೇವರಕೊಂಡ : ಫುಲ್ ವೈರಲ್ ಆಯ್ತು ಪೋಟೋ

- Advertisement -

ಬಹುಭಾಷಾ ನಟಿಯಾಗಿ ಮಿಂಚುತ್ತಿರೋ ರಶ್ಮಿಕಾ ಮಂದಣ್ಣ ಜೊತೆ ಗಾಸಿಪ್ ನಲ್ಲಿ ಜೋರಾಗಿ ಕೇಳಿಬಂದಿದ್ದ ಹೆಸರು ಟಾಲಿವುಡ್ ನಟ ವಿಜಯ್ ದೇವರಕೊಂಡ (Actor Vijay devarakonda). ಈಗ ವಿಜಯ್ ದೇವರ್ ಕೊಂಡ ಬೆತ್ತಲಾಗೋ ಮೂಲಕ ಸುದ್ದಿಯಾಗಿದ್ದಾರೆ. ನಟಿಯರು ಬೆತ್ತಲಾಗೋದು ಕಾಮನ್ ಅರೇ ಇದೇನಿದು ನಟ ಬೆತ್ತಲಾಗಿದ್ದು ಅಂತಿದ್ದೀರಾ ಈ ಸ್ಟೋರಿ ಓದಿ. ಟಾಲಿವುಡ್ ನ ಹ್ಯಾಂಡ್ಸಮ್ ಹಂಕ್ ವಿಜಯ್ ದೇವರಕೊಂಡ ಸಖತ್ ಸುದ್ದಿಯಲ್ಲಿದ್ದಾರೆ. ಮೈಮೇಲೆ ಒಂದೇ ಒಂದು ಬಟ್ಟೆಯೂ ಇಲ್ಲದೇ ಪೋಸ್ ಕೊಡುವ ಮೂಲಕ ಸೆನ್ಸೇಶನ್ ಸೃಷ್ಟಿಸಿದ್ದಾರೆ.

ಇದೇನೋ ಗ್ರಾಫಿಕ್ಸ್ ಮಾಡಿರೋ ಪೋಟೋ ಇರಬೇಕು ಅಂತ ನೀವಂದುಕೊಂಡಿದ್ರೇ ಅದು ಸುಳ್ಳು. ಯಾಕಂದ್ರೇ ಸ್ವತಃ ಈ ಪೋಟೋವನ್ನು ವಿಜಯ್ ದೇವರಕೊಂಡ ಅವರೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಪಿಕೆಯಲ್ಲಿ ಅಮೀರ್ ಖಾನ್ ರೆಡಿಯೋದಲ್ಲಿ ಮಾನ ಮೆಚ್ಚಿಕೊಂಡ ಪೋಟೋ ನೋಡಿದ್ದೀರಲ್ಲಾ? ಅದೇ ರೀತಿಯಲ್ಲಿ ಇಲ್ಲಿ ವಿಜಯ್ ದೇವರಕೊಂಡ ಹೂವುಗಳಿಂದ ಮಾನ ಮುಚ್ಚಿಕೊಂಡು ಪೋಸ್ ನೀಡಿದ್ದಾರೆ.

ವಿಜಯ್ ದೇವರಕೊಂಡ ತಮ್ಮ ಸಿನಿಮಾ ಲೈಗರ್ ಗಾಗಿ ಇಂತಹದೊಂದು ಸಾಹಸ ಮಾಡಿದ್ದಾರಂತೆ. ತುಂಡು ಬಟ್ಟೆಯೂ ಇಲ್ಲದಂತೆ ವಿಜಯ್ ದೇವರಕೊಂಡ ಪೋಸ್ ಕೊಡುತ್ತಿದ್ದಂತೆ ಪೋಟೋ ಸಖತ್ ವೈರಲ್ ಆಗಿದೆ. ಹಾಗೇ ನೋಡಿದ್ರೇ ವಿಜಯ್ ದೇವರಕೊಂಡ ಹೀಗೆ ಬೆತ್ತಲಾಗ್ತಾ ಇರೋದು ಇದೇ ಮೊದಲಲ್ಲ. ಅವರ ವೃತ್ತಿ ಬದುಕಿಗೆ ಬ್ರೇಕ್ ನೀಡಿದ ಸಿನಿಮಾವೊಂದರಲ್ಲೂ ವಿಜಯ್ ದೇವರಕೊಂಡ ಬಟ್ಟೆ ಹಾಕದೇ ಪೋಸ್ ನೀಡಿದ್ದರಂತೆ.

ಲೈಗರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ರಿಲೀಸ್ ಆಗಿರೋ ಸಿನಿಮಾದ ಫರ್ಸ್ಟ್ ಲುಕ್ , ಟ್ರೇಲರ್ ಸಿನಿಮಾದ ಮೇಲೆ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಸಿನಿಮಾ ಇದೇ ಅಗಸ್ಟ್ 25 ರಂದು ತೆರೆಗೆ ಬರಲಿದ್ದು, ಭಾಕ್ಸಾಫೀಸ್ ನಲ್ಲಿ ಮೋಡಿ ಮಾಡೋ ಮುನ್ಸೂಚನೆ ನೀಡಿದೆ.

ಸದ್ಯ ವಿಜಯ್ ದೇವರಕೊಂಡ ಸಿನಿಮಾದ ಪ್ರಮೋಶನ್ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಪ್ರಮೋಶನ್ ಟ್ರಿಕ್ಸ್ ರೂಪವಾಗಿಯೇ ಹೀಗೆ ಬೆತ್ತಲಾಗಿ ಕ್ಯಾಮರಾ ಎದುರು ಬಂದಿದ್ದಾರೆ ಎನ್ನಲಾಗ್ತಿದೆ. ಲೈಗರ್ ಸಿನಿಮಾದ ಫರ್ಸ್ಟ್ ಲುಕ್ ಗೋವಾದಲ್ಲಿ ರಿಲೀಸ್ ಆಗಿದ್ದು, ಈ ವೇಳೆ ವಿಜಯ್ ದೇವರಕೊಂಡ ಕುಟುಂಬದ ಜೊತೆ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುವ ಮೂಲಕ ಅಲ್ಲೇನೋ ಕುಚ್ ಕುಚ್ ನಡೆದಿದೆ ಎಂಬ ಅನುಮಾನ ಮೂಡಿಸಿದ್ದರು.

ಇದನ್ನೂ ಓದಿ : Jothe Jotheyali Serial :ಮುಕ್ತಾಯವಾಗುತ್ತಿದೆಯಾ ‘ಜೊತೆ ಜೊತೆಯಲಿ’ ಧಾರವಾಹಿ : ಸುಳಿವು ಬಿಚ್ಚಿಟ್ಟಿದೆ ಈ ವಿಡಿಯೋ

ಇದನ್ನೂ ಓದಿ : totapuri : ದಸರಾ ಹಬ್ಬಕ್ಕೆ ಸಿನಿ ರಸಿಕರಿಗೆ ಧಮಾಕಾ : ತೆರೆ ಮೇಲೆ ಬರ್ತಿದೆ ‘ತೋತಾಪುರಿ’ ಸಿನಿಮಾ

Actor Vijay devarakonda posing in front of the camera, full viral photo

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular