Rishabh Pant : ರಿಷಭ್ ಪಂತ್ ಬ್ಯಾಟಿಂಗ್ ಸರಿ ಇಲ್ಲ ಎಂದ ಪಾಕ್ ಮಾಜಿ ವೇಗಿ !

ಲಂಡನ್: ಟೀಮ್ ಇಂಡಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (Rishabh Pant) ಈಗ ಕ್ರಿಕೆಟ್ ಜಗತ್ತಿನ ಟಾಕ್ ಆಫ್ ದಿ ಟೌನ್. ಇಂಗ್ಲೆಂಡ್ ವಿರುದ್ಧ ಎಡ್ಜ್’ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಬಾರಿಸುವ ಮೂಲಕ ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ರಿಷಭ್ ಪಂತ್.

ಭಾರತ 98 ರನ್ನಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ರವೀಂದ್ರ ಜಡೇಜ ಜೊತೆಗೂಡಿ ದ್ವಿಶತಕದ ಜೊತೆಯಾಟವಾಡಿದ ರಿಷಭ್ ಪಂತ್ (Rishabh Pant ) ತಂಡಕ್ಕೆ ಆಸರೆಯಾಗಿದ್ದರು. 111 ಎಸೆತಗಳನ್ನು ಎದುರಿಸಿದ್ದ ಪಂತ್, 20 ಬೌಂಡರಿ ಮತ್ತು 4 ಸಿಕ್ಸರ್ಸ್ ನೆರವಿನಿಂದ 146 ರನ್ ಸಿಡಿಸಿ ಔಟಾಗಿದ್ದರು. ಇದು ಇಂಗ್ಲೆಂಡ್ ನೆಲದಲ್ಲಿ ಪಂತ್ ಬಾರಿಸಿದ 2ನೇ ಟೆಸ್ಟ್ ಶತಕ.ಆಂಗ್ಲರ ದಾಳಿಯನ್ನು ಚೆಂಡಾಡಿ ಸ್ಫೋಟಕ ಶತಕ ಬಾರಿಸಿದ ರಿಷಭ್ ಪಂತ್ ಸಾಹಸವನ್ನು ಇಡೀ ಕ್ರಿಕೆಟ್ ಜಗತ್ತೇ ಕೊಂಡಾಡುತ್ತಿದೆ. ಆದರೆ ಪಾಕಿಸ್ತಾನ ಮಾಜಿ ವೇಗದ ಬೌಲರ್ ಮೊಹಮ್ಮದ್ ಆಸಿಫ್ ಮಾತ್ರ ಪಂತ್ ಬ್ಯಾಟಿಂಗ್ ಬಗ್ಗೆ ಕೊಂಕು ಮಾತುಗಳನ್ನಾಡಿದ್ದಾರೆ. ‘’ರಿಷಭ್ ಪಂತ್ ಶತಕದಲ್ಲು ಧಮ್ ಇರಲಿಲ್ಲ. ಆತನ ಬ್ಯಾಟಿಂಗ್’ನಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನು ಗುರುತಿಸುವಲ್ಲಿ ಇಂಗ್ಲೆಂಡ್ ಬೌಲರ್’ಗಳು ವಿಫಲರಾಗಿದ್ದಾರೆ’’.

-ಮೊಹಮ್ಮದ್ ಆಸಿಫ್, ಪಾಕಿಸ್ತಾನದ ಮಾಜಿ ವೇಗದ ಬೌಲರ್.

ಬಲಗೈ ವೇಗಿ ಮೊಹಮ್ಮದ್ ಆಸಿಫ್ ಸ್ಪಾಟ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಕ್ರಿಕೆಟ್’ನಿಂದ ಬ್ಯಾನ್ ಆಗಿದ್ದರು.

ಇದನ್ನೂ ಓದಿ : Rahul Dravid celebrate : ರಾಹುಲ್ ದ್ರಾವಿಡ್ ಯಾವತ್ತಾದ್ರೂ ಈ ರೀತಿ ಸಂಭ್ರಮಿಸಿದ್ದನ್ನು ನೋಡಿದ್ದೀರಾ ?

ಇದನ್ನೂ ಓದಿ : Jaspreet Bumrah : ಒಂದೇ ಓವರ್‌ನಲ್ಲಿ 35 ರನ್.. ಬ್ಯಾಟಿಂಗ್ ದಿಗ್ಗಜ ಲಾರಾ ದಾಖಲೆ ಮುರಿದ ಬುಮ್ರಾ !

ಇದನ್ನೂ ಓದಿ : ಗುಡ್ ನ್ಯೂಸ್ : ರೋಹಿತ್ ಶರ್ಮಾಗೆ ಕೋವಿಡ್ ನೆಗೆಟಿವ್ !

ಇದನ್ನೂ ಓದಿ : Ravi Shastri : ಒಂದೇ ಸರಣಿ… 2 ಟೂರ್… ಹೊಸ ಅವತಾರದಲ್ಲಿ ಟೀಮ್ ಇಂಡಿಯಾ ಮಾಜಿ ಕೋಚ್ ಶಾಸ್ತ್ರಿ !

Ind vs Eng Rishabh Pant is not batting well, It Was Totally England Bowlers’ Fault says Pak Bowler Mohammad Asif

Comments are closed.