ದೆಹಲಿ : Sidhu Moosewala : ಪಂಜಾಬ್ನ ಕಾಂಗ್ರೆಸ್ ನಾಯಕ ಹಾಗೂ ಪ್ರಸಿದ್ಧ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ದೆಹಲಿ ಪೊಲೀಸ್ ವಿಶೇಷ ದಳವು 19 ವರ್ಷದ ಯುವಕನನ್ನು ಭಾನುವಾರ ರಾತ್ರಿ ಬಂಧಿಸಿದೆ. ಈತ ಶೂಟರ್ಗಳಲ್ಲಿ ಒಬ್ಬನಾಗಿದ್ದು ಆತನ ಸಹಚರರ ಸಮೇತ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳನ್ನು ಅಂಕಿತ್ ತೂರ್ ಹಾಗೂ ಸಚಿನ್ ಚೌಧರಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಸ್ ಹತ್ತಲು ಆಗಮಿಸಿದ್ದ ಆರೋಪಿಗಳನ್ನು ನಾವು ಕಾಶ್ಮೀರಿ ಗೇಟ್ನಲ್ಲಿ ಬಂಧಿಸಿದ್ದೇವೆ. ಆರೋಪಿಗಳಿಂದ ಎರಡು ಪಿಸ್ತೂಲ್ಗಳು, 19 ಲೈವ್ ಕಾಟ್ರಿಡ್ಜ್ಗಳು , ಪಂಜಾಬ್ ಪೊಲೀಸರ ಮೂರು ಸಮವಸ್ತ್ರಗಳು ಹಾಗೂ ಎರಡು ಮೊಬೈಲ್ಗಳು ಜೊತೆ ಡಾಂಗಲ್ ಮತ್ತು ಸಿಮ್ಗಳನ್ನು ವಶಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮೇ 29ರಂದು ಪಂಜಾಬ್ನ ಮಾನ್ಸಾದಲ್ಲಿ ಕಾರು ಚಲಾಯಿಸಿಕೊಂಡು ಬರುತ್ತಿದ್ದ ಸಿಧು ಮೂಸೆವಾಲಾ ಮೇಲೆ ಗುಂಡಿನ ದಾಳಿಯನ್ನು ದುಷ್ಕರ್ಮಿಗಳು ನಡೆಸಿದ್ದರು. ಈ ಗುಂಡಿನ ದಾಳಿಯಲ್ಲಿ ಸಿಧು ಮೂಸೆವಾಲಾ ಸ್ಥಳದಲ್ಲೇ ಸಾವನ್ನಪ್ಪಿದ್ದರು. ದರೋಡೆಕೋರರಾದ ಗೋಲ್ಡಿ ಬ್ರಾರ್ ಹಾಗೂ ಲಾರೆನ್ಸ್ ಬಿಷ್ಣೋಯಿ ಈ ಕೊಲೆಯ ಹೊಣೆಯನ್ನು ಹೊತ್ತಿದ್ದರು. ಪೊಲೀಸ್ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಅಕಾಲಿದಳದ ನಾಯಕ ವಿಕ್ಕಿ ಮಿದ್ದುಖೇರಾ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಬ್ರಾರ್ ಹಾಗೂ ಬಿಷ್ಣೋಯ್ ಈ ಹತ್ಯೆಯನ್ನು ನಡೆಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಭಾನುವಾರ ಬಂಧನಕ್ಕೊಳಗಾಗಿರುವ ಅಂಕಿತ್ ತೂರ್ ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿರುವ ಶೂಟರ್ಗಳಲ್ಲಿ ಒಬ್ಬನಾಗಿದ್ದಾನೆ. ಈತ ಈ ಹಿಂದೆ ರಾಜಸ್ಥಾನದಲ್ಲಿ ನಡೆದ 2 ಕೊಲೆ ಯತ್ನ ಪ್ರಕರಣಗಳಲ್ಲಿ ಪೊಲೀಸರು ಹುಡುಕುತ್ತಿದ್ದ ಆರೋಪಿ ಕೂಡ ಆಗಿದ್ದಾನೆ.
ಇದನ್ನು ಓದಿ : Leena Manimekalai : ಸಿಗರೇಟ್ ಸೇದಿದಂತೆ ಕಾಳಿ ಮಾತೆಯನ್ನು ಚಿತ್ರಿಸಿದ ನಿಮಾರ್ಪಕಿ : ನೆಟ್ಟಿಗರಿಂದ ವ್ಯಾಪಕ ಆಕ್ರೋಶ
ಇದನ್ನೂ ಓದಿ : ದೆಹಲಿಯ ಗುರುದ್ವಾರದಲ್ಲಿ ಮಲಗುತ್ತಿದ್ದ ಹುಡುಗ.. ಈಗ ಕ್ರಿಕೆಟ್ ಜಗತ್ತಿನ ಟಾಕ್ ಆಫ್ ದಿ ಟೌನ್ !
19-year-old shooter among two arrested from Delhi’s ISBT for Sidhu Moosewala murder