ಬೆಂಗಳೂರು : ಪಾದರಾಯನಪುರದಲ್ಲಿ ಪುಂಡರ ಅಟ್ಟಹಾಸ ಮೇರೆ ಮೀರಿದೆ. ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡೋದಕ್ಕೆ ತೆರಳಿದ್ದ ಕೊರೊನಾ ವಾರಿಯರ್ಸ್ ಮೇಲೆಯೇ ಪುಂಡರು ಹಲ್ಲೆಗೆ ಯತ್ನಿಸಿದ್ದಾರೆ. ಘಟನೆಯ ಬೆನ್ನಲ್ಲೇ ಪಾದರಾಯನಪುರ ವಾರ್ಡಿನಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಬೆಂಗಳೂರಿನ ಪಾದರಾಯನಪುರ ಕೊರೊನಾ ಹಾಟ್ ಸ್ಪಾಟ್. ದಿನೇ ದಿನೇ ಪಾದರಾಯನಪುರದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಕೊರೊನಾ ಪೀಡಿತ ವ್ಯಕ್ತಿಯ ಜೊತೆಗೆ ಸಂಪರ್ಕದಲ್ಲಿದ್ದ 58 ಮಂದಿ ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡೋದಕ್ಕೆ ಬಿಬಿಎಂಪಿ, ಆರೋಗ್ಯ ಸಿಬ್ಬಂಧಿಗಳು ಪೊಲೀಸರ ಜೊತೆಗೆ ತೆರಳಿದ್ದಾರೆ.

ಸುಮಾರು 15 ಮಂದಿಯನ್ನು ಆರೋಗ್ಯ ತಪಾಸಣೆ ನಡೆಸಿ, ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಉಳಿದವರ ತಪಾಸಣೆಗೆ ಮುಂದಾಗುತ್ತಿದ್ದ ಪುಂಡರು ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲದೇ ಈ ವೇಳೆಯಲ್ಲಿ ಚೆಕ್ ಪೋಸ್ಟ್ ಗಳನ್ನು ಒಡೆದು ಹಾಕಿದ್ದಾರೆ.

ಅಲ್ಲದೇ ಹಾಕಿದ್ದ ಬ್ಯಾರಿಕೇಡ್ ಹಾಗೂ ಟೆಂಟ್ ಗಳನ್ನು ಧ್ವಂಸಗೊಳಿಸಿದ್ದಾರೆ. ಕಡಿಮೆ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂಧಿ ಇರುವುದನ್ನು ಅರಿತ ಪುಂಡರು, ದಾಂಧಲೆ ನಡೆಸಿದ್ದಾರೆ. ಏಕಾಏಕಿ ವಾಹನಗಳ ಜೊತೆಗೆ ಗುಂಪು ಕಟ್ಟಿಕೊಂಡು ಬಂದ ಜನರು ಪೊಲೀಸರನ್ನು ಕೆಲವು ದೂರದ ವರೆಗೆ ಅಟ್ಟಾಡಿಸಿಕೊಂಡು ಬಂದಿದ್ದಾರೆ.

ಪ್ರಾಥಮಿಕ ಸಂಪರ್ಕ ಹೊಂದಿದ್ದವರು 58 ಮಂದಿಯನ್ನು ಕ್ವಾರಂಟೈನ್ ಮಾಡೋದಕ್ಕೆ ಆರೋಗ್ಯ ಸಿಬ್ಬಂಧಿಗಳು ಮತ್ತು ಬಿಬಿಎಂಪಿ ಸಿಬ್ಬಂಧಿ ಬಂದಿದ್ದಾರೆ. ಸ್ಥಳದಲ್ಲಿ ಸಬ್ ಇನ್ ಸ್ಪೆಕ್ಟರ್ ಕೂಡ ಇದ್ದರು. ಪಟ್ಟಿ ಮಾಡುವಾಗ ತಡವಾಗಿತ್ತು. ಈ ಹಿಂದೆ ಟಿಪ್ಪು ನಗರದಲ್ಲಿ ಸೇರಿದಂತೆ ಹಲವು ಕಡೆಗಳಲ್ಲಿ ಇದೇ ರೀತಿಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಸಿಬ್ಬಂಧಿಗಳು ಕ್ವಾರಂಟೈನ್ ಮಾಡಲು ಬರುತ್ತಿದ್ದಂತೆಯೇ ಅಲ್ಲಿಯೇ ಇದ್ದವರು ನ್ಯಾಯ ಬೇಕು ಅಂತಾ ಘೋಷಣೆ ಕೂಗಿದ್ದಾರೆ. ನಂತರ ಬ್ಯಾರಿಕೇಡ್ ಗಳನ್ನು ಕಿತ್ತು ಎಸೆದಿದ್ದಾರೆ ಹಲ್ಲೆಗೆ ಮುಂದಾಗಿದ್ದಾರೆ ಅಂತಾ ಡಿಸಿಪಿ ರಮೇಶ್ ಹೇಳಿದ್ದಾರೆ.
ಅಷ್ಟಕ್ಕೂ ಪಾದರಾಯನಪುರದಲ್ಲಿ ನಡೆದಿದ್ದೇನು ?. ಇಲ್ಲಿದೆ NEWS NEXT EXCLUSIVE VEDIO