ಬೆಂಗಳೂರು :sslc students : 2022-23ನೆ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಸ್ಎಸ್ಎಲ್ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆಯ ಸ್ವರೂಪ ಹಾಗೂ ಕಠಿಣತೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದೆ. ಈ ಸಂಬಂಧ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಸುತ್ತೋಲೆಯನ್ನು ಹೊರಡಿಸುವ ಮೂಲಕ ಆದೇಶವನ್ನು ನೀಡಿದೆ.
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು 2015 ಹಾಗೂ 16ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆಯಲ್ಲಿ ಬದಲಾವಣೆ ಮಾಡಿತ್ತು. ಇದಾದ ಬಳಿಕ 2019 -20ನೇ ಸಾಲಿನಲ್ಲಿಯೂ ಪ್ರಶ್ನೆ ಪತ್ರಿಕೆಯನ್ನು ಪರಿಷ್ಕರಣೆಯನ್ನು ಮಾಡಲಾಗಿತ್ತೇ ಹೊರತು ಕಠಿಣತೆಯಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಇದಾದ ಬಳಿಕ ಕೋವಿಡ್ 2ನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು 2020=21ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆಗಳನ್ನು ಸರಳಗೊಳಿಸಲಾಗಿತ್ತು.
ಇದಾದ ಬಳಿಕ ಕೋವಿಡ್ ಕಾರಣದಿಂದಾಗಿ ಭೌತಿಕ ತರಗತಿಗಳು ಆರಂಭಗೊಳ್ಳಲು ವಿಳಂಬ ಉಂಟಾದ ಹಿನ್ನೆಲೆಯಲ್ಲಿ 2021-22ನೇ ಸಾಲಿನಲ್ಲಿಯೂ ವಿದ್ಯಾರ್ಥಿಗಳ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಶೇ 20ರಷ್ಟು ಪಠ್ಯ ಕಡಿತಗೊಳಿಸಲಾಗಿತ್ತು.
ಆದರೆ 2022-23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಈವರೆಗೆ ಕೋವಿಡ್ ಯಾವುದೇ ರೀತಿಯಲ್ಲಿಯೂ ಅಡ್ಡಿಯಾಗಿಲ್ಲ. ಮೇ 16ರಿಂದಲೇ ಶಾಲೆಗಳು ಆರಂಭಗೊಂಡಿದ್ದು ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಈ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳು ಈ ಹಿಂದಿನಂತೆ 75 ಪ್ರತಿಶತ ಹಾಜರಾತಿಯನ್ನು ಹೊಂದುವುದು ಕಡ್ಡಾಯವಾಗಿದೆ. 2019-20ಮೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿನ ಕಠಿಣತೆಯನ್ನೇ 2022-23ನೇ ಸಾಲಿನ ಪರೀಕ್ಷಾ ಪತ್ರಿಕೆಗಳನ್ನು ಮುಂದುವರಿಸಲಾಗುತ್ತದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ತಿಳಿಸಿದೆ.
ಇದನ್ನು ಓದಿ : NEET MDS:ನೀಟ್ ಎಂಡಿಎಸ್ ಮೆರಿಟ್ ಲಿಸ್ಟ್ ಬಿಡುಗಡೆ; ಮಾರ್ಕ್ ಕಾರ್ಡ್ ಜುಲೈ 27ಕ್ಕೆ
ಇದನ್ನೂ ಓದಿ : Robin Uthappa blessed with a baby girl : ರಾಬಿನ್ ಉತ್ತಪ್ಪಗೆ ಹೆಣ್ಣು ಮಗು, 2ನೇ ಮಗುವಿಗೆ ತಂದೆಯಾದ ಕೊಡಗಿನ ವೀರ
ಇದನ್ನೂ ಓದಿ : Anganwadi workers : ಅಂಗನವಾಡಿ ಕಾರ್ಯಕರ್ತೆಯರಿಗೆ ಇಲ್ಲಿದೆ ಗುಡ್ ನ್ಯೂಸ್ : ಶೀಘ್ರದಲ್ಲೇ ಸಿಗಲಿದೆ ಶಿಕ್ಷಕಿ ಸ್ಥಾನ
ಇದನ್ನೂ ಓದಿ : KL Rahul back to practice : ಗುಡ್ ನ್ಯೂಸ್, NCAನಲ್ಲಿ ಅಭ್ಯಾಸ ಆರಂಭಿಸಿದ ರಾಹುಲ್
important information for sslc students changing the format of question paper