BMW G310RR : ಭಾರತದಲ್ಲಿ ಬಿಡುಗಡೆಯಾದ BMW G 310 RR ಬೈಕ್‌ ! ಇದು KTM, ಕವಾಸಕಿ ನಿಂಜಾಗೆ ಪ್ರತಿಸ್ಪರ್ಧಿಯಾಗಲಿದೆಯೇ?

BMW ಜರ್ಮನ್ ವಾಹನ ತಯಾರಕಾ ಕಂಪನಿ. ಇದು BMW G310RR ಅನ್ನುವ ಫುಲ್‌-ಫೇರ್ಡ್ ಮೋಟಾರ್‌ಸೈಕಲ್‌ ತಯಾರಿಸಿದೆ. BMW ಮೊಟೊರಾಡ್‌ ನ ಚಿಕ್ಕ ಸ್ಪೋರ್ಟ್‌ಬೈಕ್ G310 RR ಇದೀಗ ಭಾರತದಲ್ಲಿ ಮಾರಾಟಮಾಡಲು ಸಜ್ಜಾಗಿದೆ. ಇದಕ್ಕಾಗಿ ಮುಂಗಡ ಬುಕ್ಕಿಂಗ್‌ಗಳು ಈಗಾಗಲೇ ತೆರೆದಿವೆ. ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಥವಾ ಅವರ ಹತ್ತಿರದ BMW Motorrad ಇಂಡಿಯಾ ಡೀಲರ್‌ಶಿಪ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.

BMW Motorrad ಇಂಡಿಯಾ BMW G 310 RR ಅನ್ನು ರೂ 2.85 ಲಕ್ಷದ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ (ಎಕ್ಸ್ ಶೋ ರೂಂ). ಫುಲ್ಲೀ-ಫೇರ್ಡ್ ಮೋಟಾರ್‌ಸೈಕಲ್ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. RR ಸ್ಪೋರ್ಟ್ ಬೆಲೆಯು ರೂ 2.85 ಲಕ್ಷ (ಎಕ್ಸ್-ಶೋ ರೂಂ) ಆಗಿದ್ದರೆ RR ಸ್ಟೈಲ್ ಸ್ಪೋರ್ಟ್ ಬೆಲೆಯು ರೂ 2.99 ಲಕ್ಷ (ಎಕ್ಸ್ ಶೋ ರೂಂ) ಆಗಿದೆ. ಈ ಬೈಕನ್ನು ಭಾರತದ TVS ಮೋಟಾರ್ ಕಂಪನಿಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಹಿಂದೆ ಅಪಾಚೆ RR 310 ಅನ್ನು ಭಾರತದಲ್ಲಿ ತಮ್ಮ ಪ್ರಮುಖ ಕೊಡುಗೆಯಾಗಿ ಬಿಡುಗಡೆ ಮಾಡಿತ್ತು.

BMW G 310 RR ನ ವೈಶಿಷ್ಟ್ಯಗಳು ಹೀಗಿವೆ :

ಕೇವಲ 2.9 ಸೆಕೆಂಡ್‌ಗಳಲ್ಲಿ 0 ದಿಂದ 60 kmph ವೇಗ ಪಡೆಯಬಹುದಾದ BMW G 310 RR ಬೈಕ್‌ ಸಿಂಗಲ್‌ ಸಿಲಿಂಡರ್‌, ಲಿಕ್ವಿಡ್‌ ಕೂಲ್ಡ್‌ ತಂತ್ರಜ್ಞಾನ, ಫ್ಯೂಯಲ್‌ ಇಂಜೆಕ್ಟೆಡ್‌ ಮೋಟಾರ್‌ ಹೊಂದಿದೆ.

ಇದು ಇತರ ಮೋಟಾರ್‌ ಸೈಕಲ್‌ನಂತೆಯೇ ಆಲ್‌-LED ಲೈಟಿಂಗ್, ಬ್ಲೂಟೂತ್ ಸಂಪರ್ಕ ಹೊಂದಿರುವ 5.0-ಇಂಚಿನ ಬಣ್ಣದ TFT ಡಿಸ್ಪ್ಲೇ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಬೈ-ಡೈರೆಕ್ಷನಲ್ ಕ್ವಿಕ್‌ಶಿಫ್ಟರ್ ಮತ್ತು ಟ್ರಾಕ್ಷನ್‌ ಕಂಟ್ರೋಲ್‌ ಒಳಗೊಂಡಿದೆ.

BMW ಮೊಟೊರಾಡ್‌ ಇಂಡಿಯಾ ಹೊಸ G 310 RR ಅನ್ನು ಎರಡು ರೂಪಾಂತರಗಳನ್ನು ಹೊಂದಿದೆದೆ. ಒಂದು – RR ಸ್ಟೈಲ್‌ ಮತ್ತು ಮತ್ತೊಂದು RR ಸ್ಟೈಲ್ ಸ್ಪೋರ್ಟ್, ಇದರ ಬೆಲೆಯು ಕ್ರಮವಾಗಿ ರೂ 2.85 ಲಕ್ಷ ಮತ್ತು ರೂ 2.99 ಲಕ್ಷ (ಎಕ್ಸ್ ಶೋ ರೂಂ) ಆಗಿದೆ.

312.2cc, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಘಟಕ 9,700rpm ನಲ್ಲಿ 34hp ಮತ್ತು 7,700rpm ನಲ್ಲಿ 27.3Nm ಟಾರ್ಕ್ ನೀಡುತ್ತದೆ. ಇದು ಮಳೆ, ನಗರ ಮತ್ತು ಅಪಾಚೆಯಂತಹ ಕ್ರೀಡೆ, ಶಕ್ತಿ ಮತ್ತು ಎಬಿಎಸ್ ಸೂಕ್ಷ್ಮತೆಯನ್ನು ಬದಲಾಯಿಸುವ ರೈಡ್ ಮೋಡ್‌ ಹೊಂದಿದೆ.

BMW Motorrad G310 RR ಗಾಗಿ ಮುಂಗಡ-ಬುಕಿಂಗ್ ಅನ್ನು ಪ್ರಾರಂಭಿಸಿದೆ, ಇದರ ಎಕ್ಸ್ ಶೋ ರೂಂ ಬೆಲೆಯು ರೂ. 2.80 ಮತ್ತು 2.90 ಲಕ್ಷ ನಿಗದಿಗೊಳಿಸಲಾಗಿದೆ.

ಇದನ್ನೂ ಓದಿ : BSNL Recruitment 2022 : BSNL ನಲ್ಲಿ ಅಪ್ರೆಂಟಿಸ್‌ಶಿಪ್‌ ತರಬೇತಿಗೆ ಅವಕಾಶ! ಅರ್ಜಿ ಸಲ್ಲಿಸುವುದು ಹೇಗೆ?

ಇದನ್ನೂ ಓದಿ :CBSE Term 2 2022 ರ 10 ನೇ ತರಗತಿ ಪರಿಕ್ಷೆಯ ಹಾಲ್‌ ಟಿಕೇಟ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ ಗೊತ್ತೇ?

(BMW G310RR launched in India check its features, price and specification)

Comments are closed.