ಮಂಗಳವಾರ, ಏಪ್ರಿಲ್ 29, 2025
HomeSportsCricketSourav Ganguly congratulated Hardik Pandya : ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆಲ್ಲಿಸಿಕೊಟ್ಟ ‘’ಪಾಂಡು’’ಗೆ ವಿಶೇಷ...

Sourav Ganguly congratulated Hardik Pandya : ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆಲ್ಲಿಸಿಕೊಟ್ಟ ‘’ಪಾಂಡು’’ಗೆ ವಿಶೇಷ ಅಭಿನಂದನೆ ತಿಳಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

- Advertisement -

ಮ್ಯಾಂಚೆಸ್ಟರ್: (Sourav Ganguly congratulated hardik pandya) ಆತಿಥೇಯ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ 2-1ರ ಅಂತರದಲ್ಲಿ ಗೆದ್ದುಕೊಂಡಿದೆ. ಗೆಲುವಿಗೆ ಇಂಗ್ಲೆಂಡ್ ಒಡ್ಡಿದ 260 ರನ್’ಗಳ ಗುರಿ ಬೆನ್ನಟ್ಟಿದ ಭಾರತ 42.1 ಓವರ್’ಗಳಲ್ಲಿ 5 ವಿಕೆಟ್ ಕಳೆದುಕೊಂಡು ಭರ್ಜರಿ ಜಯ ದಾಖಲಿಸಿತು. ಒಂದು ಹಂತದಲ್ಲಿ ಕೇವಲ 72 ರನ್’ಗಳಿಗೆ ನಾಯಕ ರೋಹಿತ್ ಶರ್ಮಾ(17), ಶಿಖರ್ ಧವನ್(01), ವಿರಾಟ್ ಕೊಹ್ಲಿ(17) ಮತ್ತು ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಂಡಿದ್ದ ಭಾರತ ಸೋಲಿನ ಸುಳಿಗೆ ಸಿಲುಕಿತ್ತು.

ಆದರೆ ವಿಕೆಟ್ ಕೀಪರ್ರ್ ರಿಷಭ್ ಪಂತ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಮೋಘ ಕೌಂಟರ್ ಅಟ್ಯಾಕ್ ಜೊತೆಯಾಟದ ಮೂಲಕ ತಂಡವನ್ನು ಗೆಲ್ಲಿಸಿದರು. ಈ ಎಡಗೈ-ಬಲಗೈ ಜೋಡಿ 6ನೇ ವಿಕೆಟ್’ಗೆ 133 ರನ್ ಸೇರಿಸಿ ತಂಡಕ್ಕೆ 5 ವಿಕೆಟ್’ಗಳ ಭರ್ಜರಿ ಜಯ ತಂದುಕೊಟ್ಟಿತು.

ಬೌಲಿಂಗ್’ನಲ್ಲಿ ಮಿಂಚಿ 4 ವಿಕೆಟ್(4/24) ಕಬಳಿಸಿದ್ದ ಪಾಂಡ್ಯ ಬ್ಯಾಟಿಂಗ್’ನಲ್ಲೂ ಅಬ್ಬರಿಸಿ 55 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ ಸ್ಫೋಟಕ 71 ರನ್ ಸಿಡಿಸಿದ್ರೆ, ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಚೊಚ್ಚಲ ಶತಕ ಬಾರಿಸಿದ ರಿಷಭ್ ಪಂತ್ 113 ಎಸೆತಗಳಲ್ಲಿ 16 ಬೌಂಡರಿ ಮತ್ತು 2 ಸಿಕ್ಸರ್ಸ್ ಸಹಿತ ಅಜೇಯ 125 ರನ್ ಸಿಡಿಸಿ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

ಇಂಗ್ಲೆಂಡ್ ನೆಲದಲ್ಲಿ ಸ್ಮರಣೀಯ ಸರಣಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಗಂಗೂಲಿ, ‘’ಇಂಗ್ಲೆಂಡ್’ನಲ್ಲಿ ಸೂಪರ್ ಪರ್ಫಾಮೆನ್ಸ್, ಅವರ ದೇಶದಲ್ಲಿ ಇದು ಸುಲಭವಲ್ಲ. ಟೆಸ್ಟ್ ಸರಣಿಯಲ್ಲಿ 2-2, ಟಿ20 ಹಾಗೂ ಏಕದಿನ ಸರಣಿ ಗೆಲುವು.. ದ್ರಾವಿಡ್, ರೋಹಿತ್, ರವಿಶಾಸ್ತ್ರಿ, ವಿರಾಟ್ ಕೊಹ್ಲಿಗೆ ಅಭಿನಂದನೆಗಳು. ರಿಷಭ್ ಪಂತ್ ಆಟ ಅದ್ಭುತ ಮತ್ತು ವಿಶೇಷ. ಪಾಂಡು ಆಟವೂ ಅಷ್ಟೇ ಅದ್ಭುತ’’ ಎಂದು ಸೌರವ್ ಗಂಗೂಲಿ ಟ್ಟೀಟ್ ಮಾಡಿದ್ದಾರೆ.

ತಮ್ಮ ಟ್ವೀಟ್’ನಲ್ಲಿ ಸೌರವ್ ಗಂಗೂಲಿ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ‘’ಪಾಂಡು’’ ಎಂದು ಕರೆದಿದ್ದಾರೆ. ಸರಣಿಯುದ್ದಕ್ಕೂ ಭರ್ಜರಿ ಆಲ್ರೌಂಡ್ ಆಟ ಪ್ರದರ್ಶಿಸಿದ ಪಾಂಡ್ಯ ಸರಣಿಶ್ರೇಷ್ಠರಾಗಿ ಮೂಡಿ ಬಂದರೆ, ಅಮೋಘ ಶತಕ ಬಾರಿಸಿ ಸರಣಿ ಗೆದ್ದುಕೊಟ್ಟ ರಿಷಭ್ ಪಂತ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ : Suryakumar Yadav Success :ಸೂರ್ಯಕುಮಾರ್ ಯಾದವ್ ಯಶಸ್ಸಿನ ಹಿಂದೆ ರೋಹಿತ್ ಶರ್ಮಾ ಪಾತ್ರ ; ರಹಸ್ಯ ಬಿಚ್ಚಿಟ್ಟ SKY !

ಇದನ್ನೂ ಓದಿ : Virat Kohli England tour : 6 ಇನ್ನಿಂಗ್ಸ್ 76 ರನ್, ಕೊಹ್ಲಿ ಇಂಗ್ಲೆಂಡ್ ಟೂರ್ ನಿರಾಶಾದಾಯಕ ಅಂತ್ಯ

BCCI president Sourav Ganguly congratulated hardik pandya for winning the series in England

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular