Suryakumar Yadav Success :ಸೂರ್ಯಕುಮಾರ್ ಯಾದವ್ ಯಶಸ್ಸಿನ ಹಿಂದೆ ರೋಹಿತ್ ಶರ್ಮಾ ಪಾತ್ರ ; ರಹಸ್ಯ ಬಿಚ್ಚಿಟ್ಟ SKY !

ಲಂಡನ್: ಮುಂಬೈ ಬ್ಯಾಟರ್ ಸೂರ್ಯಕುಮಾರ್ ಯಾದವ್ (Suryakumar Yadav success) ಟೀಮ್ ಇಂಡಿಯಾದ ನೂತನ ಬ್ಯಾಟಿಂಗ್ ಸ್ಟಾರ್. ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ್ದ SKY ಖ್ಯಾತಿಯ ಸೂರ್ಯಕುಮಾರ್ ಯಾದವ್, ಏಕದಿನ ಹಾಗೂ ಟಿ20 ಕ್ರಿಕೆಟ್’ನಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಆಧಾರಸ್ಥಂಭ ಎನಿಸಿಕೊಂಡಿದ್ದಾರೆ.

ಸೂರ್ಯಕುಮಾರ್ ಯಾದವ್ ಯಶಸ್ಸಿನ ಹಿಂದೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಪಾತ್ರ ದೊಡ್ಡದು. ಈ ವಿಚಾರವನ್ನು ಸ್ವತಃ ಸೂರ್ಯಕುಮಾರ್ ಯಾದವ್ ಅವರೇ ಬಹಿರಂಗ ಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯಕ್ಕೆ ಪೂರ್ವಭಾವಿಯಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೂರ್ಯ ಕುಮಾರ್ ಯಾದವ್, ತಮ್ಮ ಯಶಸ್ಸಿನಲ್ಲಿ ರೋಹಿತ್ ಪಾತ್ರದ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

‘’ನಾನು ಮುಂಬೈ ಪರ ದೇಶೀಯ ಕ್ರಿಕೆಟ್ ಆಡಲು ಶುರಿ ಮಾಡಿದ ದಿನಗಳಿಂದಲೂ ರೋಹಿತ್ ಶರ್ಮಾ ನನ್ನನ್ನು ಗಮನಿಸುತ್ತಿದ್ದಾರೆ ಮತ್ತು ನನ್ನ ಕ್ರಿಕೆಟ್ ಬಗ್ಗೆ ನನ್ನೊಂದಿಗೆ ಮಾತನಾಡುತ್ತಿದ್ದಾರೆ. ಐಪಿಎಲ್’ನಲ್ಲೂ ನಾವಿಬ್ಬರೂ ಮುಂಬೈ ಇಂಡಿಯನ್ಸ್ ಪರ ಆಡುವುದರಿಂದ ಅಲ್ಲೂ ಸಾಕಷ್ಟು ಸಮಯ ಕಳೆದಿದ್ದೇವೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. 2021ರ ಐಪಿಎಲ್’ನ 2ನೈ ಚರಣದ ಪಂದ್ಯಗಳಲ್ಲಿ ನಾನು ರನ್ ಗಳಿಸಲು ಒದ್ದಾಡುತ್ತಿದ್ದಾಗ ನನ್ನ ಬಳಿ ಬಂದು ಮಾತನಾಡಿಸಿ ಆತ್ಮವಿಶ್ವಾಸ ತುಂಬಿದ ಮೊದಲ ವ್ಯಕ್ತಿ ರೋಹಿತ್ ಶರ್ಮಾ. ರನ್ ಗಳಿಸುವ ಮೂಲಕ ಮತ್ತು ಭಾರತಕ್ಕೆ ಪಂದ್ಯಗಳನ್ನು ಗೆಲ್ಲಿಸುವ ಮೂಲಕ ರೋಹಿತ್ ಶರ್ಮಾ ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ’’.
ಸೂರ್ಯಕುಮಾರ್ ಯಾದವ್, ಟೀಮ್ ಇಂಡಿಯಾ ಆಟಗಾರ.

ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ದೇಶೀಯ ಕ್ರಿಕೆಟ್’ನಲ್ಲಿ ಮುಂಬೈ, ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಟೀಮ್ ಇಂಡಿಯಾ ಪರ ಕಳೆದ ಕೆಲ ವರ್ಷಗಳಿಂದ ಜೊತೆಯಾಗಿ ಆಡುತ್ತಿದ್ದಾರೆ.

ಇದನ್ನೂ ಓದಿ : Virat Kohli England tour : 6 ಇನ್ನಿಂಗ್ಸ್ 76 ರನ್, ಕೊಹ್ಲಿ ಇಂಗ್ಲೆಂಡ್ ಟೂರ್ ನಿರಾಶಾದಾಯಕ ಅಂತ್ಯ

ಇದನ್ನೂ ಓದಿ : Virat Kohli Rohit Sharma : ಟೀಮ್ ಇಂಡಿಯಾ ಅಭ್ಯಾಸದ ವೇಳೆ ಮಿಲಿಯನ್ ಡಾಲರ್ ಫೋಟೋ : ಕೊಹ್ಲಿ, ರೋಹಿತ್ ಫ್ಯಾನ್ಸ್ ಫುಲ್ ಖುಷ್

Rohit Sharma role behind Suryakumar Yadav success SKY revealed the secret

Comments are closed.