ಸೋಮವಾರ, ಏಪ್ರಿಲ್ 28, 2025
HomeWorldus shootout : ಅಮೆರಿಕ ಮಾಲ್​ವೊಂದರಲ್ಲಿ ಗುಂಡಿನ ದಾಳಿ : ಬಂದೂಕುಧಾರಿ ಸಹಿತ ನಾಲ್ವರು ಸಾವು

us shootout : ಅಮೆರಿಕ ಮಾಲ್​ವೊಂದರಲ್ಲಿ ಗುಂಡಿನ ದಾಳಿ : ಬಂದೂಕುಧಾರಿ ಸಹಿತ ನಾಲ್ವರು ಸಾವು

- Advertisement -

ಅಮೆರಿಕ : us shootout : ಅಮೆರಿಕದಲ್ಲಿ ಮೇ ತಿಂಗಳಲ್ಲಿ ಬಂದೂಕುಧಾರಿಯೊಬ್ಬ ಟೆಕ್ಸಾಸ್​ನ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆಸಿ 21 ಮಂದಿ ಸಾವಿಗೆ ಕಾರಣನಾದ ಘಟನೆಯು ಇನ್ನು ಮಾಸುವ ಮುನ್ನವೇ ಇದೀಗ ಮತ್ತೊಂದು ಗುಂಡಿನ ದಾಳಿ ಸಂಭವಿಸಿದೆ. ಅಮೆರಿಕದ ಇಂಡಿಯಾನದ ಗ್ರೀನ್​​ವುಡ್​ ಪಾರ್ಕ್​ನ ಮಾಲ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು ಬಂದೂಕು ಧಾರಿ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ ಹಾಗೂ ಮೂವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಮೆರಿಕದ ಪ್ರಮುಖ ನಗರಗಳಲ್ಲಿ ಈ ರೀತಿ ಪದೇ ಪದೇ ಗುಂಡಿನ ದಾಳಿ ನಡೆಯುತ್ತಿರುವುದು ಇಲ್ಲಿ ಭದ್ರತೆಯನ್ನು ಪ್ರಶ್ನಿಸುವಂತಾಗಿದೆ.


ಭಾನುವಾರ ರಾತ್ರಿ ಬಂದೂಕು ಹಾಗೂ ಮದ್ದುಗುಂಡುಗಳು ಮ್ಯಾಗ್​ಜಿನ್​​ ಹೊಂದಿದ್ದ ವ್ಯಕ್ತಿಯು ಗ್ರೀನ್​ವುಡ್​​ನ ಪಾರ್ಕ್​ ಮಾಲ್​ನ ಫುಡ್​ ಕೋರ್ಟ್​ಗೆ ನುಗ್ಗಿ ಗುಂಡು ಹಾರಿಸಿದ್ದಾನೆ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರೆ ಮೂವರು ಗಾಯಗೊಂಡಿದ್ದಾರೆ. ಈ ವೇಳೆ ನಾಗರಿಕ ಬಂದೂಕು ಧಾರಿಯ ಮೇಲೆ ಗುಂಡು ಹಾರಿಸಿದ್ದು ಆತ ಕೂಡ ಸಾವನ್ನಪ್ಪಿದ್ದಾನೆ ಎಂದು ಗ್ರೀನ್​ವುಡ್​ ಪಾರ್ಕ್​ ಮಾಲ್​​ನ ಆಡಳಿತ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.


ಗ್ರೀನ್​ವುಡ್​ ಪಾರ್ಕ್​ ಮಾಲ್​​ನ ರೆಸ್ಟ್​ ರೂಮ್​ನಲ್ಲಿ ಅನುಮಾನಾಸ್ಪದ ಬ್ಯಾಗ್​ ಪತ್ತೆಯಾಗಿದ್ದು ಈ ಬಗ್ಗೆ ಇಂಡಿಯಾನಾ ಪೊಲೀಸ್​ ಮೆಟ್ರೋಪಾಲಿಟನ್​ ಪೊಲೀಸ್​ ಇಲಾಖೆ ತನಿಖೆ ಕೈಗೆತ್ತಿಕೊಂಡಿದೆ. ಈವರೆಗೆ ಯಾರೂ ಈ ಗುಂಡಿನ ದಾಳಿಯ ಹೊಣೆ ಹೊತ್ತಿಲ್ಲ. ಹೀಗಾಗಿ ಗುಂಡಿನ ದಾಳಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.


ಅಮೆರಿಕದಲ್ಲಿ ಪದೇ ಪದೇ ಗುಂಡಿನ ದಾಳಿಯ ಘಟನೆಗಳು ವರದಿಯಾಗುತ್ತಿದೆ. ಮೇ ತಿಂಗಳಲ್ಲಿ ಟೆಕ್ಸಾಸ್​​ನ ಉವಾಲ್ಡೆಯಲ್ಲಿರುವ ರಾಬ್​ ಎಲಿಮೆಂಟರಿ ಶಾಲೆಯಲ್ಲಿ ನಡೆದಿದ್ದ ಗುಂಡಿನ ದಾಳಿಯಲ್ಲಿ 18 ಮಕ್ಕಳು ಹಾಗೂ ಮೂವರು ಸಿಬ್ಬಂದಿ ಸೇರಿ 21 ಮಂದಿ ಸಾವನ್ನಪ್ಪಿದ್ದರು ಹಾಗೂ 17 ಮಂದಿ ಗಾಯಗೊಂಡಿದ್ದರು.

ಇದನ್ನು ಓದಿ : Suryakumar Yadav Success :ಸೂರ್ಯಕುಮಾರ್ ಯಾದವ್ ಯಶಸ್ಸಿನ ಹಿಂದೆ ರೋಹಿತ್ ಶರ್ಮಾ ಪಾತ್ರ ; ರಹಸ್ಯ ಬಿಚ್ಚಿಟ್ಟ SKY !

ಇದನ್ನೂ ಓದಿ : Virat Kohli England tour : 6 ಇನ್ನಿಂಗ್ಸ್ 76 ರನ್, ಕೊಹ್ಲಿ ಇಂಗ್ಲೆಂಡ್ ಟೂರ್ ನಿರಾಶಾದಾಯಕ ಅಂತ್ಯ

us shootout four dead three injured in indianas greenwood park mall

RELATED ARTICLES

Most Popular