woman kills husband : ಜೀನ್ಸ್​ ಪ್ಯಾಂಟ್​ ಧರಿಸಿದ್ದನ್ನು ವಿರೋಧಿಸಿದ್ದಕ್ಕೆ ಪತಿಯನ್ನೇ ಕೊಂದ ಪತ್ನಿ

ಜಾರ್ಖಂಡ್​ : woman kills husband : ಕಾಲ ಎಷ್ಟೇ ಮುಂದುವರಿದಿದ್ದರೂ ಸಹ ಈಗಲೂ ಕೂಡ ಪತ್ನಿ ಇಂತದ್ದೇ ಬಟ್ಟೆಯನ್ನು ಧರಿಸಬೇಕು ಎಂಬ ಷರತ್ತುಗಳನ್ನು ವಿಧಿಸುವ ಪತಿಯಂದಿರು ನಮ್ಮ ದೇಶದಲ್ಲಿದ್ದಾರೆ. ನೀವು ಕೂಡ ನಿಮ್ಮ ಪತ್ನಿಗೆ ಆಕೆ ಇಷ್ಟಬಂದಂತಹ ಡ್ರೆಸ್​ಗಳನ್ನು ಧರಿಸಲು ನಿಷೇಧ ಹೇರಿದ್ದರೆ ಖಂಡಿತವಾಗಿಯೂ ನೀವು ಈ ಸ್ಟೋರಿಯನ್ನು ಓದಲೇಬೇಕು. ಏಕೆಂದರೆ ಜಾರ್ಖಂಡ್​​ನ ಜಮ್ತಾರಾ ಎಂಬಲ್ಲಿ ಮದುವೆಯಾದ ಬಳಿಕ ಜೀನ್ಸ್​ ಧರಿಸುವಂತಿಲ್ಲ ಎಂದು ಪತಿಯು ಷರತ್ತು ವಿಧಿಸಿದ್ದಕ್ಕೆ ಕೋಪಗೊಂಡ ಮಹಿಳೆಯು ತನ್ನ ಪತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಜಮ್ತಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಜೋರ್ಭಿತ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.


ಶನಿವಾರ ರಾತ್ರಿ ವೇಳೆ ಪುಷ್ಪಾ ಹೆಂಬ್ರೋಮ್​​ ಎಂಬಾಕೆ ಜೀನ್ಸ್​ ಧರಿಸಿ ಗೋಪಾಲಪುರ ಎಂಬ ಗ್ರಾಮದಲ್ಲಿ ನಡೆಯುತ್ತಿದ್ದ ಜಾತ್ರೆಯನ್ನು ವೀಕ್ಷಿಸಲು ತೆರಳಿದ್ದಳು. ಆಕೆ ಜಾತ್ರೆ ಮುಗಿಸಿ ಮನೆಗೆ ವಾಪಸ್ಸಾದ ಸಂದರ್ಭದಲ್ಲಿ ಆಕೆಯ ಪತಿ ಆಕೆ ಧರಿಸಿದ್ದ ಉಡುಪಿನ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮದುವೆ ನಂತರ ನಿನಗೆ ಜೀನ್ಸ್​ ಧರಿಸಲು ಅವಕಾಶ ಕೊಟ್ಟಿದ್ಯಾರು ಎಂದು ಪ್ರಶ್ನೆ ಮಾಡಿದ್ದಾರೆ.


ಪತಿಯಿಂದ ಆಕ್ಷೇಪಗಳನ್ನು ಕೇಳಿದ ಬಳಿಕ ಇದೇ ಜೀನ್ಸ್ ವಿಚಾರ ಪತಿ – ಪತ್ನಿ ನಡುವೆ ದೊಡ್ಡ ಕಲಹಕ್ಕೆ ನಾಂದಿ ಹಾಡಿದೆ. ಪತಿಯ ಮೇಲೆ ಕೋಪಗೊಂಡ ಪುಷ್ಪಾ ಅಡುಗೆ ಮನೆಯಲ್ಲಿದ್ದ ಚಾಕುವನ್ನು ತಂದು ಪತಿಯ ಮೇಲೆ ಹಲ್ಲೆ ನಡೆಸಿದ್ದಾಳೆ. ಚಾಕುವಿನಿಂದ ದಾಳಿಗೊಳಗಾದ ಪತಿಗೆ ತೀವ್ರ ರಕ್ತಸ್ರಾವ ಉಂಟಾಗಿದೆ.


ಕೂಡಲೇ ಪತಿಯನ್ನು ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಮೃತ ವ್ಯಕ್ತಿಯ ತಂದೆ ಕರ್ಣೇಶ್ವರ, ಜೀನ್ಸ್​ ಪ್ಯಾಂಟ್​ ಧರಿಸುವ ವಿಚಾರಕ್ಕೆ ಮಗ ಹಾಗೂ ಸೊಸೆ ನಡುವೆ ಜಗಳವಾಗಿತ್ತು. ಜಗಳ ನಡುವೆ ಸೊಸೆಯು ನಮ್ಮ ಪುತ್ರನಿಗೆ ಚಾಕು ಇರಿದು ಕೊಲೆ ಮಾಡಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ : us shootout : ಅಮೆರಿಕ ಮಾಲ್​ವೊಂದರಲ್ಲಿ ಗುಂಡಿನ ದಾಳಿ : ಬಂದೂಕುಧಾರಿ ಸಹಿತ ನಾಲ್ವರು ಸಾವು

ಇದನ್ನೂ ಓದಿ : Sri Lankan PM Ranil Wickremesinghe : ಶ್ರೀಲಂಕಾ ಹಂಗಾಮಿ ಅಧ್ಯಕ್ಷರಾಗಿ ರನಿಲ್​ ವಿಕ್ರಮ ಸಿಂಘೆ ನೇಮಕ

Not allowed to wear jeans after marriage, Jharkhand woman kills husband

Comments are closed.