Ranbir Kapoor-Alia Bhatt : ಬಾಲಿವುಡ್ನ ಫೇಮಸ್ ಜೋಡಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಕೆಲವು ದಿನಗಳ ಹಿಂದೆಯಷ್ಟೇ ತಾವು ಪೋಷಕರಾಗುತ್ತಿದ್ದೇವೆ ಎಂಬ ವಿಚಾರವನ್ನು ರಟ್ಟು ಮಾಡಿದ್ದಾರೆ. ಮುಂಬೈನ ರಣಬೀರ್ ಕಪೂರ್ ನಿವಾಸದಲ್ಲಿ ಅತ್ಯಂತ ಸರಳವಾಗಿ ವಿವಾಹವಾಗುವ ಮೂಲಕ ಈ ಜೋಡಿ ಎಲ್ಲರನ್ನೂ ಬೆರಗುಗೊಳಿಸಿತ್ತು. ಇದಾದ ಬಳಿಕ ಮತ್ತೊಂದು ಆಶ್ಚರ್ಯ ಎಂಬಂತೆ ಆಲಿಯಾ ಭಟ್ ತಾವು ತಾಯಿಯಾಗುತ್ತಿರುವ ವಿಚಾರವನ್ನು ಬಹಿರಂಗಪಡಿಸಿದ್ದರು. ಹೀಗೆ ದಿನಕ್ಕೊಂದು ಸಪ್ರೈಸ್ಗಳನ್ನು ನೀಡುತ್ತಿರುವ ಈ ಜೋಡಿ ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡುವಂತೆ ಕಾಣ್ತಿದೆ. ಅದೇನೆಂದರೆ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅವಳಿ ಮಕ್ಕಳಿಗೆ ತಂದೆಯಾಗುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಸ್ವತಃ ರಣಬೀರ್ ಕಪೂರ್ ನೀಡಿರುವ ಹೇಳಿಕೆಯೊಂದು ಎಲ್ಲರನ್ನೂ ಗೊಂದಲಕ್ಕೀಡು ಮಾಡಿದೆ.
ರಣಬೀರ್ ಕಪೂರ್ ತಮ್ಮ ಮುಂದಿನ ಸಿನಿಮಾ ಶಂಶೇರಾ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಸಂದರ್ಶನಗಳಲ್ಲಿ ತಾನು ತಂದೆಯಾಗುತ್ತಿರುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದೇ ರೀತಿಯ ಸಂದರ್ಶನವೊಂದರಲ್ಲಿ ರಣಬೀರ್ ಕಪೂರ್ಗೆ ನೀವು 2 ಸತ್ಯಗಳನ್ನು ಹಾಗೂ 1 ಸುಳ್ಳನ್ನು ಹೇಳಬೇಕು ಎಂದು ನಿರೂಪಕರು ಕೇಳಿದ್ದರು. ಇದಕ್ಕೆ ರಣಬೀರ್ ಕಪೂರ್, ನಾನು ಅವಳಿ ಮಕ್ಕಳ ತಂದೆಯಾಗುತ್ತಿದ್ದೇನೆ, ನಾನು ಒಂದು ದೊಡ್ಡ ಪೌರಾಣಿಕ ಚಿತ್ರದಲ್ಲಿ ನಟಿಸಲಿದ್ದೇನೆ ಹಾಗೂ ನಾನು ನನ್ನ ವೃತ್ತಿ ಜೀವನದಿಂದ ದೀರ್ಘ ವಿರಾಮ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ರಣಬೀರ್ ಕಪೂರ್ ಈ ರೀತಿಯ ಹೇಳಿಕೆಯನ್ನು ನೀಡುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಲೆಕ್ಕಾಚಾರ ಶುರು ಮಾಡಿದ್ದಾರೆ. ರಣಬೀರ್ ಕಪೂರ್ ಪೌರಾಣಿಕ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಸತ್ಯದ ವಿಚಾರ. ಇನ್ನುಳಿದ ಎರಡು ವಾಕ್ಯಗಳಾದ ಕೆಲಸಕ್ಕೆ ದೀರ್ಘ ವಿರಾಮ ಹಾಗೂ ಅವಳಿ ಮಕ್ಕಳ ತಂದೆ ಇವರೆಡರಲ್ಲಿ ಯಾವುದು ಸುಳ್ಳು ಎಂಬುದನ್ನು ಇದೀಗ ಸೋಶಿಯಲ್ ಮೀಡಿಯಾದಲ್ಲಿ ತಾಳೆ ಹಾಕಲಾಗ್ತಿದೆ. ರಣಬೀರ್ ಕಪೂರ್ ಈ ಸಮಯದಲ್ಲಿ ತಮ್ಮ ವೃತ್ತಿ ಜೀವನದಿಂದ ದೀರ್ಘ ವಿರಾಮವನ್ನಂತೂ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ಅವಳಿ ಮಕ್ಕಳ ತಂದೆಯಾಗುತ್ತಿದ್ದಾರೆ ಎಂಬುದೇ ಸತ್ಯ ಇರಬಹುದು ಎಂಬುದು ಅಭಿಮಾನಿಗಳ ಲೆಕ್ಕಾಚಾರವಾಗಿದೆ.
ಇನ್ನು ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾ ಸೆಪ್ಟೆಂಬರ್ 9ರಂದು ತೆರೆ ಕಾಣಲಿದೆ. ಇದಕ್ಕೂ ಮುನ್ನ ರಣಬೀರ್ ಕಪೂರ್ ಜುಲೈ 22ರಂದು ತೆರೆ ಕಾಣಲಿರುವ ಶಂಶೇರಾ ಸಿನಿಮಾದ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.
Ranbir Kapoor-Alia Bhatt Expecting Twins Here’s What we Know