Men’s Fashion: ಪುರುಷರಲ್ಲೂ ಇದೆ ಫ್ಯಾಷನ್ ಟ್ರೆಂಡ್! ಈಗಿನ ಹೊಸ ಟ್ರೆಂಡ್ ಏನು ಗೊತ್ತಾ

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಪುರುಷರ ಜೀವನದಲ್ಲಿ ಫ್ಯಾಷನ್ (Men’s Fashion)ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಇಂದು ಫ್ಯಾಷನ್ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಪುರುಷರ ಫ್ಯಾಷನ್ ವಿನ್ಯಾಸಕರು, ಪುರುಷರಿಗೆ ಫ್ಯಾಷನ್ ಪರಿಕರಗಳು, ಪುರುಷರ ಉಡುಪುಗಳಿಗೆ ಫ್ಯಾಷನ್ ಶೋಗಳು (fashion show )ಮತ್ತು ಪುರುಷರಿಗಾಗಿ ವಿಶೇಷ ಫ್ಯಾಷನ್ ಸ್ಟೈಲಿಸ್ಟ್ ಇದ್ದಾರೆ . ಈಗ ಪುರುಷರಿಗೆ ಫ್ಯಾಷನ್ ವಿನ್ಯಾಸಕರು ಹೆಚ್ಚುತ್ತಿದ್ದಾರೆ ಮತ್ತು ಅವರು ತಮ್ಮ ವಿಶಿಷ್ಟ ಶೈಲಿಗಳಿಗೆ ದೊಡ್ಡ ಹೆಸರನ್ನು ಗಳಿಸಿದ್ದಾರೆ.ಪುರುಷರ ಫ್ಯಾಷನ್ ಟ್ರೆಂಡ್ ಗಳು(fashion trend) ರಾಕೆಟ್ ವೇಗದಲ್ಲಿ ಬದಲಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ, ಪುರುಷರು ತಮ್ಮ ವಾರ್ಡ್ರೋಬ್ ಅನ್ನು ಬದಲಾಯಿಸುವುದು ಅತ್ಯಂತ ಅವಶ್ಯಕವಾಗಿದೆ. ಪುರುಷರ ಇತ್ತೀಚಿನ ಫ್ಯಾಷನ್ ಟ್ರೆಂಡ್ ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಕೆಳಗಿನ ಆರ್ಟಿಕಲ್ ಓದಿ.

ಅಥ್ಲೀಶರ್
ಅಥ್ಲೀಶರ್ ಹೊಸ ಶೈಲಿಯಾಗಿದ್ದು ಸ್ವಲ್ಪ ಸಮಯದಿಂದ ಟ್ರೆಂಡಿಂಗ್ ಆಗಿದೆ. ಇದು ಅಥ್ಲೆಟಿಕ್ ಫ್ಯಾಷನ್ ಮತ್ತು ವಿಶ್ರಾಂತಿ/ವಿರಾಮ ಉಡುಗೆಗಳ ಮಿಶ್ರಣವಾಗಿದೆ. ಕೆಲವು ಉದಾಹರಣೆಗಳೆಂದರೆ ಸ್ನೀಕರ್ ಟ್ರೆಂಡ್, ಜೋಗರ್ಸ್ ಮತ್ತು ದೊಡ್ಡ ಗಾತ್ರದ ಟೀ-ಶರ್ಟ್.

ಹೈ-ಸ್ಟ್ರೀಟ್
ಇನ್ನೊಂದು ತೀರಾ ಇತ್ತೀಚಿನ ಟ್ರೆಂಡ್ ಎಂದರೆ ಹೈ-ಸ್ಟ್ರೀಟ್ ಫ್ಯಾಷನ್. ಇದು ಸ್ಟ್ರೀಟ್‌ವೇರ್ ಮತ್ತು ಹೈ-ಫ್ಯಾಶನ್ ಉಡುಪುಗಳ ಸಂಯೋಜನೆಯಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಸಮೂಹ-ಉತ್ಪಾದಿತ ಬಟ್ಟೆಯಾಗಿದ್ದು , ಈ ಬಟ್ಟೆಗಳು ಸುಲಭವಾಗಿ ಆನ್ಲೈನ್ ಅಂಗಡಿಗಳಲ್ಲಿ ಲಭ್ಯವಿದ್ದು ಈಗಿನ ಟ್ರೆಂಡಿ ಫ್ಯಾಶನ್ ಎನಿಸಿಕೊಂಡಿದೆ.

ಸಸ್ಟೈನಬಲ್ ಫ್ಯಾಷನ್
ಫ್ಯಾಶನ್ ಉದ್ಯಮವು ಪರಿಸರದ ಮೇಲೆ ಎರಡನೇ ಅತಿ ದೊಡ್ಡ ಹಾನಿಕಾರಕ ಪರಿಣಾಮವನ್ನು ಹೊಂದಿದ ಇಂಡಸ್ಟ್ರಿ ಆಗಿದೆ. ಸಂಶ್ಲೇಷಿತ ಬಟ್ಟೆಗಳು ಬೃಹತ್ ಪ್ರಮಾಣದಲ್ಲಿ ಪರಿಸರ ಮಾಲಿನ್ಯವನ್ನು ಮಾಡುತ್ತಿದೆ. ಸಸ್ಟೈನಬಲ್ ಫ್ಯಾಷನ್ ಇದಕ್ಕೆ ವಿರುದ್ಧವಾಗಿದೆ . ಸಾವಯವ ಬಟ್ಟೆಗಳು ಮತ್ತು ಪರಿಸರ ಸ್ನೇಹಿ ಬಟ್ಟೆಗಳ ಉತ್ಪಾದನೆ ಇದರ ಧ್ಯೇಯ. ಸಸ್ಟೈನಬಲ್ ಉಡುಪುಗಳು ಈಗ ಟ್ರೆಂಡಿ ಆಗಿದ್ದು ಪರಿಸರ ಪ್ರೇಮಿಯೂ ಆಗಿದೆ.

ಬೌಲಿಂಗ್ ಶರ್ಟ್‌ಗಳು
ಬೌಲಿಂಗ್ ಶರ್ಟ್ ಬಾಕ್ಸ್-ಕಟ್ ಶಾರ್ಟ್-ಸ್ಲೀವ್ ಶರ್ಟ್ ಗಳು ಆಗಿದೆ.ಬೀಚ್ ಗಳಿಗೆ ಹೋಗುವಾಗ ಈ ಶರ್ಟ್ ಗಳನ್ನು ಹಾಕಿಕೊಂಡು ಹೋದರೆ ತುಂಬಾ ಸಕತ್ ಆಗಿ ಕಾಣುತ್ತದೆ . ಈ ಬೌಲಿಂಗ್ ಶರ್ಟ್ ಗಳೊಂದಿಗೆ ಜೀನ್ಸ್ ಶಾರ್ಟ್ ಕಡ್ಡಾಯ.ಈ ಉಡುಪುಗಳು ನಿಮ್ಮನ್ನು ಪಕ್ಕಾ ಟ್ರೆಂಡಿಯೆಸ್ಟ್ ವ್ಯಕ್ತಿಯನ್ನಾಗಿ ಮಾಡುತ್ತದೆ.

ಫ್ಲೋರಲ್ ಪ್ರಿಂಟ್ಸ್
ಫ್ಲೋರಲ್ ಪ್ರಿಂಟ್ಸ್ ನ ಶರ್ಟ್ ಗಳು ಭಾರತೀಯ ಮಾರ್ಕೆಟ್ ನಲ್ಲಿ ತುಂಬಾ ಜನಪ್ರೀಯವಾದ ಫ್ಯಾಷನ್ ಟ್ರೆಂಡ್. ತಮ್ಮ ಶರ್ಟ್ ಗಳ ಮೇಲೆ ಹೂವಿನ ಡಿಸೈನ್ ಇರುವ ಶರ್ಟ್ ಗಳು ಈಗ ತುಂಬಾ ಟ್ರೆಂಡಿ ಆಗಿವೆ.

ಇದನ್ನೂ ಓದಿ : Weight Loss Tips:ವೈಟ್ ಲಾಸ್ ಮಾಡಲು ಪ್ರಯತ್ನಿಸುತ್ತಿದ್ದೀರಾ ! ಆಹಾರದ ಮೂಲಕವೇ ವೈಟ್ ಲಾಸ್ ಮಾಡಲು ಇಲ್ಲಿದೆ ಒಂದಿಷ್ಟು ಟಿಪ್ಸ್

(Men’s Fashion you need to know)

Comments are closed.