ಗುರುವಾರ, ಮೇ 8, 2025
HomeSportsCricketSecret Behind Hardik Pandya Success ಮದುವೆಗೂ ಮುನ್ನವೇ ಮಗು ; ಆ್ಯಟಿಟ್ಯೂಡ್ ಸಮಸ್ಯೆ, ಸಾಲು...

Secret Behind Hardik Pandya Success ಮದುವೆಗೂ ಮುನ್ನವೇ ಮಗು ; ಆ್ಯಟಿಟ್ಯೂಡ್ ಸಮಸ್ಯೆ, ಸಾಲು ಸಾಲು ವಿವಾದ, ಪಾಂಡ್ಯ ಬದುಕು ಬದಲಿಸಿದ್ದು ‘ಆಕೆ’

- Advertisement -

ಬೆಂಗಳೂರು: (Secret Behind Hardik Pandya Success) ಪ್ರತಿಭೆ, ವಿವಾದ, ಆ್ಯಟಿಟ್ಯೂಡ್, ಟ್ಯಾಲೆಂಟ್.. ಇವೆಲ್ಲದರ ಸಮ್ಮಿಲನ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ. 29 ವರ್ಷದ ಬರೋಡ ಆಟಗಾರ ಹಾರ್ದಿಕ್ ಪಾಂಡ್ಯ ಸದ್ಯ ತಮ್ಮ ವೃತ್ತಿಜೀವನದ ಅಮೋಘ ಫಾರ್ಮ್’ನಲ್ಲಿದ್ದಾರೆ. ಮ್ಯಾಂಚೆಸ್ಟರ್’ನ ಓಲ್ಡ್ ಟ್ರಾಫೊರ್ಡ್ ಮೈದಾನದಲ್ಲಿ ಭಾನುವಾರ ನಡೆದ 3ನೇ ಏಕದಿನ ಪಂದ್ಯದಲ್ಲಿ ಅಮೋಘ 71 ರನ್ ಬಾರಿಸಿದ್ದ ಪಾಂಡ್ಯ ಭಾರತದ ಸರಣಿ ಗೆಲುವಿನ ರೂವಾರಿಯಾಗಿ ಮೂಡಿ ಬಂದಿದ್ದಾರೆ. 260 ರನ್’ಗಳ ಚೇಸಿಂಗ್ ವೇಳೆ ಟೀಮ್ ಇಂಡಿಯಾ 72 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ತಂಡಕ್ಕೆ ಆಸರೆಯಾಗಿದ್ದ ಪಾಂಡ್ಯ, ವಿಕೆಟ್ ಕೀಪರ್ ರಿಷಭ್ ಪಂತ್ ಜೊತೆ 5ನೇ ವಿಕೆಟ್’ಗೆ 133 ರನ್’ಗಳ ಜೊತೆಯಾಟವಾಡಿದ್ದರು. ರಿಷಭ್ ಪಂತ್ ಭರ್ಜರಿ ಶತಕ ಬಾರಿಸಿದ್ರೆ, ಪಾಂಡ್ಯ 55 ಎಸೆತಗಳಲ್ಲಿ ಸ್ಫೋಟಕ 71 ರನ್ ಸಿಡಿಸಿದ್ದರು. ಬೌಲಿಂಗ್’ನಲ್ಲೂ ಮಿಂಚಿ 4 ವಿಕೆಟ್ ಪಡೆದಿದ್ದ ಪಾಂಡ್ಯ, ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

ಇಂಗ್ಲೆಂಡ್ ಸರಣಿಗೂ ಮುನ್ನ ನಡೆದ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕತ್ವ ವಹಿಸಿದ್ದ ಪಾಂಡ್ಯ ಭಾರತಕ್ಕೆ ಸರಣಿ ಗೆದ್ದುಕೊಟ್ಟಿದ್ದರು. ಐಪಿಎಲ್ -2022 ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು. ಹೀಗೆ ವೃತ್ತಿಜೀವನದ ಶ್ರೇಷ್ಠ ಫಾರ್ಮ್’ನಲ್ಲಿರುವ ಹಾರ್ದಿಕ್ ಪಾಂಡ್ಯಗೆ ಕೆಲ ತಿಂಗಳ ಹಿಂದೆ ಟೀಮ್ ಇಂಡಿಯಾದಲ್ಲಿ ಸ್ಥಾನವೇ ಇರಲಿಲ್ಲ. ಕಳೆದ ವರ್ಷ ದುಬೈನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಭಾರತ ತಂಡದಲ್ಲಿ ಪಾಂಡ್ಯ ಸ್ಥಾನ ಕಳೆದುಕೊಂಡಿದ್ದರು. ಅದೇ ಸಂದರ್ಭದಲ್ಲಿ ಟೀಮ್ ಇಂಡಿಯಾದಲ್ಲಿ ಮಧ್ಯಪ್ರದೇಶ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಮಿಂಚುತ್ತಿದ್ದಾಗ ಪಾಂಡ್ಯಗೆ ಭಾರತ ತಂಡದ ಬಾಗಿಲು ಮುಚ್ಚಿತು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಟೀಮ್ ಇಂಡಿಯಾಗೆ ಗ್ರ್ಯಾಂಡ್ ಕಂಬ್ಯಾಕ್ ಮಾಡಿರುವ ಪಾಂಡ್ಯ ತಂಡದ ಪ್ರಮುಖ ಆಟಗಾರನಾಗಿ ತಮ್ಮ ಸ್ಥಾನವನ್ನು ಭದ್ರ ಮಾಡಿಕೊಂಡಿದ್ದಾರೆ.

ಟೀಮ್ ಇಂಡಿಯಾದಿಂದ ಹೊರ ಬಿದ್ದಾಗ ಪಾಂಡ್ಯಗೆ ಆತ್ಮವಿಶ್ವಾಸ ತುಂಬಿದ್ದು ಪತ್ನಿ ನತಾಶ ಸ್ಟಾಂಕೋವಿಕ್. ಸರ್ಬಿಯಾ ಮೂಲದ ನಟಿಯಾಗಿರುವ ನತಾಶಾ ಹಾರ್ದಿಕ್ ಪಾಂಡ್ಯ ಬದುಕಿಗೆ ಎಂಟ್ರಿ ಕೊಟ್ಟ ಬಳಿಕ ಪಾಂಡ್ಯಗೆ ಲೇಡಿ ಲಕ್ ಖುಲಾಯಿಸಿದೆ. 2020ರ ಜನವರಿ 1ರಂದು ನತಾಶ ಸ್ಟಾಂಕೋವಿಕ್ ಜೊತೆ ಹಾರ್ದಿಕ್ ಪಾಂಡ್ಯ ನಿಶ್ಚಿತಾರ್ಥ ಮಾಡಿ ಕೊಂಡಿದ್ದರು. ಅದೇ ವರ್ಷ ಜುಲೈ 30ರಂದು ಪಾಂಡ್ಯ-ನತಾಶ ದಂಪತಿಗೆ ಗಂಡು ಮಗು ಜನಿಸಿತ್ತು. ಮಗುವಿನ ಹೆಸರು ಆಗಸ್ತ್ಯ ಪಾಂಡ್ಯ. ಮದುವೆಗೂ ಮೊದಲೇ ಮಗು, ಆ್ಯಟಿಟ್ಯೂಡ್ ಪ್ರಾಬ್ಲಮ್, ಸಾಲು ಸಾಲು ವಿವಾದಗಳು.. ಈಗ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್. ತಪ್ಪುಗಳಿಂದ ಪಾಠ ಕಲಿತು ಆ ತಪ್ಪುಗಳನ್ನು ತಿದ್ದಿಕೊಂಡಿದ್ದರ ಪರಿಣಾಮವೇ ಹಾರ್ದಿಕ್ ಪಾಂಡ್ಯ 2.0 ಅವತಾರ.

ಇದನ್ನೂ ಓದಿ : Sunil Shetty Praises Hardik Pandya : ಕಂಬ್ಯಾಕ್ ಸ್ಟಾರ್ ಹಾರ್ದಿಕ್ ಪಾಂಡ್ಯನನ್ನು ಹೊಗಳಿದ ಕೆ.ಎಲ್ ರಾಹುಲ್ ಭಾವೀ ಮಾವ

ಇದನ್ನೂ ಓದಿ : T20 Franchise in South Africa : ದಕ್ಷಿಣ ಆಫ್ರಿಕಾದಲ್ಲಿ ಮಿನಿ ಐಪಿಎಲ್, 6 ಟಿ20 ತಂಡ ಖರೀದಿಸಿದ 6 ಐಪಿಎಲ್ ಫ್ರಾಂಚೈಸಿಗಳು

Secret Behind Hardik Pandya Success

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular