ಶುಕ್ರವಾರ, ಜೂನ್ 20, 2025
HomeCinemakiccha sudeep new venture : ಹೋಟೆಲ್​ ಉದ್ಯಮದತ್ತ ಮುಖ ಮಾಡಿದ ಕಿಚ್ಚ ಸುದೀಪ :...

kiccha sudeep new venture : ಹೋಟೆಲ್​ ಉದ್ಯಮದತ್ತ ಮುಖ ಮಾಡಿದ ಕಿಚ್ಚ ಸುದೀಪ : ಕಾಫಿ & ಬನ್ಸ್​ ಸ್ಥಾಪನೆ

- Advertisement -

kiccha sudeep new venture : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ತಮ್ಮ ಮುಂಬರುವ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್​ ರೋಣದ ಪ್ರಚಾರ ಕಾರ್ಯ ಹಾಗೂ ಬಿಗ್​​ ಬಾಸ್​ ಕನ್ನಡ ಸೀಸನ್​ನ 9 ತಯಾರಿಯಲ್ಲಿ ಫುಲ್​ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್​ವುಡ್​ ಮಾತ್ರವಲ್ಲದೇ ಕಾಲಿವುಡ್​, ಬಾಲಿವುಡ್​ನಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವ ನಟ ಕಿಚ್ಚ ಸುದೀಪ ವಿಕ್ರಾಂತ್​ ರೋಣ ಹಾಗೂ ಬಿಗ್​ ಬಾಸ್​ ಬೆನ್ನಲ್ಲೇ ಇದೀಗ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಗುಡ್​ ನ್ಯೂಸ್​ ನೀಡಿದ್ದಾರೆ.


ಕಿಚ್ಚ ಸುದೀಪರಿಗೆ ಅಡುಗೆ ಮಾಡುವುದು ಅಂದರೆ ತುಂಬಾನೇ ಇಷ್ಟ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಬಿಗ್​ ಬಾಸ್​ ಕಾರ್ಯಕ್ರಮದಲ್ಲಿಯೂ ಸಾಕಷ್ಟು ಬಾರಿ ಈ ವಿಚಾರವನ್ನು ಹೇಳಿಕೊಂಡಿರುವ ನಟ ಸುದೀಪ್​ ಆಗಾಗ ಬಿಗ್​ ಬಾಸ್​ ಮನೆಯ ಸ್ಪರ್ಧಿಗಳಿಗೆ ತಾವೇ ಕೈಯಾರ ತಯಾರಿಸಿದ ಆಹಾರವನ್ನು ನೀಡಿದ್ದೂ ಉಂಟು . ತಮ್ಮ ಈ ಹವ್ಯಾಸಕ್ಕೆ ಮತ್ತಷ್ಟು ನೀರೆರೆದಿರುವ ನಟ ಸುದೀಪ್​ ಇದೀಗ ಹೋಟೆಲ್​ ಉದ್ಯಮದತ್ತ ಮುಖ ಮಾಡಿದ್ದಾರೆ.


ಸದ್ಯ ವಿಕ್ರಾಂತ್​ ರೋಣ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ನಟ ಸುದೀಪ್​ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ತಮ್ಮ ಧರ್ಮಪತ್ನಿ ಪ್ರಿಯಾ ಸುದೀಪ್​ ಸಾರಥ್ಯದಲ್ಲಿ ಸುದೀಪ್​ ಕಾಫೀ & ಬನ್ಸ್​ ಇನ್ನೋವೇಷನ್ಸ್​ ಎಂಬ ಉದ್ಯಮವನ್ನು ಆರಂಭಿಸಿದ್ದಾರೆ. ಈ ಸಂಸ್ಥೆಯ ಅಡಿಯಲ್ಲಿ ಸುದೀಪ್ ರೆಸ್ಟಾರಂಟ್​, ಕೆಫೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಲು ಸಿದ್ಧರಾಗಿದ್ದಾರೆ.


ಈ ವಿಚಾರವಾಗಿ ಮಾತನಾಡಿರುವ ಕಿಚ್ಚ ಸುದೀಪ, ನಮ್ಮ ಕುಟುಂಬದ ಉದ್ಯಮ ಅಡುಗೆಯೇ ಆಗಿರೋದ್ರಿಂದ ಅಡುಗೆ ಮಾಡುವ ಕಲೆ ನನ್ನ ರಕ್ತದಲ್ಲೇ ಇದೆ. ನನ್ನ ತಂದೆ ಕೂಡ ಹೋಟೆಲ್​ ಉದ್ಯಮಿ. ಆದರೆ ಈಗ ಅವರು ಇದನ್ನು ಮಾಡುತ್ತಿಲ್ಲ. ಆದರೆ ನಾನೇಕೆ ಇದನ್ನು ಮುಂದುವರಿಸಬಾರದು ಎಂದು ನಿರ್ಧರಿಸಿ ಕಾಫಿ & ಬನ್ಸ್​ ಎಂಬ ಕಂಪನಿಯನ್ನು ಆರಂಭಿಸಿದ್ದೇನೆ. ಇದರ ಅಡಿಯಲ್ಲಿ ಸಣ್ಣ ರೆಸ್ಟಾರೆಂಟ್​ಗಳು ಹಾಗೂ ಕೆಫೆಗಳು ಆರಂಭಗೊಳ್ಳಲಿದೆ. ದೊಡ್ಡ ಸರೋವರದಂತಹ ಸಂಸ್ಥೆ ಕಟ್ಟದಿದ್ದರೂ ಒಂದು ಸಣ್ಣ ಕೊಡುಗೆಯನ್ನಾದರೂ ನೀಡಬೇಕೆಂದು ಈ ಪ್ರಯತ್ನಕ್ಕೆ ಕೈ ಹಾಕಿದ್ದೇನೆ ಎಂದಿದ್ದಾರೆ.

ಇದನ್ನು ಓದಿ : KS Eshwarappa : ಮುಸಲ್ಮಾನರು ಎಲ್ಲಿರ್ತಾರೋ ಅಲ್ಲಿ ಸಿದ್ದರಾಮಯ್ಯ ಚುನಾವಣೆಗೆ ನಿಲ್ತಾರೆ : ಕೆ.ಎಸ್​ ಈಶ್ವರಪ್ಪ ವ್ಯಂಗ್ಯ

ಇದನ್ನೂ ಓದಿ : bomb threat : ಡಿಕೆಶಿ ಮಾಲೀಕತ್ವದ ಖಾಸಗಿ ಶಾಲೆಗೆ ಬಾಂಬ್​ ಬೆದರಿಕೆ ಹಾಕಿದ್ದು ಅದೇ ಶಾಲೆಯ ವಿದ್ಯಾರ್ಥಿ : ತನಿಖೆಯಲ್ಲಿ ಬಯಲಾಯ್ತು ಸತ್ಯಾಂಶ

coffee and buns kiccha sudeep new venture

RELATED ARTICLES

Most Popular