ದಕ್ಷಿಣ ಕನ್ನಡ : Fazil was killed : ಬುದ್ಧಿವಂತರ ಜಿಲ್ಲೆ ಎಂದು ಕರೆಯಿಸಿಕೊಳ್ತಿದ್ದ ದಕ್ಷಿಣ ಕನ್ನಡ ಇದೀಗ ಜನರಲ್ಲಿ ಭೀತಿಯನ್ನು ಹುಟ್ಟಿಸುವಂತಹ ಜಿಲ್ಲೆಯಾಗಿ ಬದಲಾಗ್ತಿದೆ. ಕಳೆದ 10 ದಿನಗಳಲ್ಲಿ ಮೂವರು ಯುವಕರ ನೆತ್ತರು ಹರಿದಿರುವುದು ಸಂಪೂರ್ಣ ಕರಾವಳಿ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಮಸೂದ್, ಪ್ರವೀಣ್ ನೆಟ್ಟಾರು ಇದೀಗ ಫಾಜಿಲ್ ಹೀಗೆ ದ್ವೇಷದ ಕಿಚ್ಚಿಗೆ ನಡುರಸ್ತೆಯಲ್ಲಿ ಬೀದಿ ಹೆಣವಾಗುತ್ತಿರುವವರ ಪಟ್ಟಿ ಬೆಳೆಯುತ್ತಲೇ ಇದೆ.
ಅಂದಹಾಗೆ ನಿನ್ನೆ ಸುರತ್ಕಲ್ನಲ್ಲಿ ಕೊಲೆಯಾದ ಫಾಜಿಲ್ ಬದುಕಿದ್ದರೆ ಇಂದು ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ ವಿಧಿಯಾಟ ಬೇರೆಯದ್ದೇ ಇತ್ತು ನೋಡಿ ಜನ್ಮದಿನದ ಮುನ್ನಾದಿನವೇ ಫಾಜಿಲ್ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ. ಬರ್ತಡೇಯ ಹಿಂದಿನ ದಿನ ಫಾಜಿಲ್ ಸ್ಮಾರ್ಟ್ ವಾಚ್ ಹಾಗೂ ಹೊಸ ಬಟ್ಟೆಯನ್ನು ಖರೀದಿ ಮಾಡಬೇಕೆಂದು ಅಂಗಡಿಗೆ ಬಂದಿದ್ದ. ಬಟ್ಟೆ ಶಾಪ್ ಎದುರು ನಿಂತಿದ್ದ ಫಾಜಿಲ್ನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದರು. ಇಂದು ಪುತ್ರನ ಜನ್ಮದಿನದ ಸಂಭ್ರಮದಲ್ಲಿದ್ದ ಪೋಷಕರು ಇಂದು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಇನ್ನು ಪುತ್ರನ ಫಾಜಿಲ್ ಕೊಲೆ ವಿಚಾರವಾಗಿ ದೊಡ್ಡಪ್ಪ ಗಫಾರ್ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ್ದಾರೆ. ನಮಗೆ ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಿ ಶಿಕ್ಷೆಯನ್ನು ವಿಧಿಸಬೇಕು. ಚುನಾವಣೆ ಹತ್ತಿರ ಬಂತು ಅಂದಾಕ್ಷಣ ಬಡವರ ಮಕ್ಕಳೇ ಕೊಲೆಯಾಗುತ್ತಾರೆ. ಎಲ್ಲಿಯೂ ನಾವು ರಾಜಕಾರಣಿಗಳ ಮಕ್ಕಳು ಕೊಲೆಯಾಗಿದ್ದನ್ನು ಕಂಡಿಲ್ಲ. ಇಂದು ಫಾಜಿಲ್ ತಂದೆ ತಾಯಿ ಗೋಳಿಡ್ತಾ ಇದ್ದಾರೆ. ನಮ್ಮ ಕಷ್ಟವನ್ನು ನಾವು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ : Pramod Muthalik barred : ಶಾಂತಿ ಕದಡುವ ಆತಂಕ : ಪ್ರಮೋದ್ ಮುತಾಲಿಕ್ಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ
ಇದನ್ನೂ ಓದಿ : Siddaramaiah : ಬಿಜೆಪಿ ಸರ್ಕಾರಕ್ಕೆ ಚಪ್ಪಲಿಯಲ್ಲಿ ಹೊಡೆಯಬೇಕೆಂದು ಹೇಳಿ ಮರುಕ್ಷಣವೇ ಹೇಳಿಕೆ ವಾಪಸ್ ಪಡೆದ ಸಿದ್ದರಾಮಯ್ಯ
Fazil was killed the day before his birthday