Airtel : ಆಗಸ್ಟ್ ಅಂತ್ಯದ ವೇಳೆಗೆ ದೇಶದಲ್ಲಿ 5ಜಿ ನೆಟ್ವರ್ಕ್ (Airtel 5G ) ಸೇವೆಯನ್ನು ಆರಂಭಿಸುವುದಾಗಿ ಏರ್ಟೆಲ್ ಘೋಷಣೆ ಮಾಡಿದೆ. ಆಗಸ್ಟ್ ತಿಂಗಳಿನಿಂದ 5 ಜಿ ನೆಟ್ವರ್ಕ್ ಆರಂಭಿಸಲು ಎರಿಕ್ಸನ್, ನೋಕಿಯಾ ಹಾಗೂ ಸ್ಯಾಮ್ಸಂಗ್ನೊಂದಿಗೆ 5ಜಿ ನೆಟ್ವರ್ಕ್ ಒಪ್ಪಂದಗಳಿಗೆ ಸಹಿ ಹಾಕಿರುವುದಾಗಿ ಟೆಲಿಕಾಂ ದೈತ್ಯ ಘೋಷಣೆ ಮಾಡಿದೆ. ಭಾರತದಲ್ಲಿ 5ಜಿ ಸೇವೆಗಳನ್ನು ರೋಲ್ ಔಟ್ ಮಾಡುವ ಮೊದಲ ಟೆಲಿಕಾಂ ದೈತ್ಯ ಏರ್ಟೆಲ್ ಆಗಲಿದೆ .
ಏರ್ಟೆಲ್ ಕಂಪನಿಯು ಎರಿಕ್ಸನ್ ಹಾಗೂ ನೋಕಿಯಾದೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದೆ. ಆದರೆ ಸ್ಯಾಮ್ಸಂಗ್ನೊಂದಿಗೆ ಇತ್ತೀಚಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಟೆಲಿಕಾಂ ಇಲಾಖೆಯು ನಡೆಸಿದ ಸ್ಪೆಕ್ಟ್ರಂ ಹರಾಜಿನಲ್ಲಿ ಏರ್ಟೆಲ್ ಒಂದು ಭಾಗವಾಗಿತ್ತು. ಇದರಲ್ಲಿ ಟೆಲಿಕಾಂ ದೈತ್ಯ 900 MHz, 1800 MHz, 2100 MHz, 3300 MHz ಮತ್ತು 26 GHz ತರಂಗಾಂತರಗಳಲ್ಲಿ 19867.8 MHZ ಸ್ಪೆಕ್ಟ್ರಮ್ ಅನ್ನು ಬಿಡ್ ಮಾಡಿತು ಮತ್ತು ಸ್ವಾಧೀನಪಡಿಸಿಕೊಂಡಿದೆ .
ಭಾರತದಲ್ಲಿ 5ಜಿ ಸೇವೆಗಳನ್ನು ಹೊರತರುವ ಕುರಿತು ಮಾತನಾಡಿದ ಏರ್ಟೆಲ್ ಎಂಡಿ ಹಾಗೂ ಸಿಇಓ ಗೋಪಾಲ್ ವಿಠ್ಠಲ್ , ಏರ್ಟೆಲ್ ಆಗಸ್ಟ್ ತಿಂಗಳಲ್ಲಿ 5 ಜಿ ಸೇವೆಯನ್ನು ಆರಂಭಿಸಲಿದೆ ಎಂದು ಘೋಷಣೆ ಮಾಡಲು ನಮಗೆ ಹೆಮ್ಮೆ ಎನಿಸುತ್ತಿದೆ. ನಮ್ಮ ನೆಟ್ವರ್ಕ್ ಒಪ್ಪಂದಗಳನ್ನು ಅಂತಿಮಗೊಳಿಸಲಿದ್ದೇವೆ. 5G ಸಂಪರ್ಕದ ಸಂಪೂರ್ಣ ಪ್ರಯೋಜನಗಳನ್ನು ತಲುಪಿಸಲು ಏರ್ಟೆಲ್ ಪ್ರಪಂಚದಾದ್ಯಂತದ ಅತ್ಯುತ್ತಮ ತಂತ್ರಜ್ಞಾನ ಪಾಲುದಾರರೊಂದಿಗೆ ಕೆಲಸ ಮಾಡುತ್ತದೆ. ಭಾರತದ ಡಿಜಿಟಲ್ ಆರ್ಥಿಕತೆಯ ಪರಿವರ್ತನೆಯು ಟೆಲಿಕಾಂನಿಂದ ಮುನ್ನಡೆಸಲ್ಪಡುತ್ತದೆ ಮತ್ತು 5G ಕೈಗಾರಿಕೆಗಳು, ಉದ್ಯಮಗಳು ಮತ್ತು ಭಾರತದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಡಿಜಿಟಲ್ ರೂಪಾಂತರವನ್ನು ಚಾಲನೆ ಮಾಡಲು ಆಟವನ್ನು ಬದಲಾಯಿಸುವ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
5ಜಿ ನೆಟ್ವರ್ಕ್ ಪರೀಕ್ಷಿಸಿದ ಭಾರತದ ಮೂರು ಟೆಲಿಕಾಂ ಕಂಪನಿಗಳಲ್ಲಿ ಏರ್ಟೆಲ್ ಮೊದಲನೆಯದಾಗಿದೆ. ಟೆಲಿಕಾಂ ಕಂಪನಿಯು ಹೈದರಾಬಾದ್ನಲ್ಲಿ ಲೈವ್ 4G ನೆಟ್ವರ್ಕ್ನಲ್ಲಿ ಭಾರತದ ಮೊದಲ 5G ಅನುಭವವನ್ನು ಪ್ರದರ್ಶಿಸಿದೆ.
ಇದನ್ನು ಓದಿ : Dakshina Kannada district : ಅಹಿತಕರ ಘಟನೆ ತಪ್ಪಿಸಲು ದಕ್ಷಿಣ ಕನ್ನಡದಲ್ಲಿ ಹೊಸ ನಿಯಮ : ಬೈಕ್ನಲ್ಲಿ ಹಿಂಬದಿ ಸವಾರರು ಕೂರುವ ಹಾಗಿಲ್ಲ
ಇದನ್ನೂ ಓದಿ : India Vs West Indies 3rd T20 : ಕೆರಿಬಿಯನ್ ನಾಡಿನಲ್ಲಿ “ಕನ್ನಡವೇ ಸತ್ಯ, ಕನ್ನಡವೇ ನಿತ್ಯ” ಪೋಸ್ಟರ್
Airtel to start rolling out 5G network in India in August: Here is everything you need to know