Earthquake in Chattisgarh:ಛತ್ತೀಸ್‌ಗಢದಲ್ಲಿ 3.0 ತೀವ್ರತೆಯ ಭೂಕಂಪ

ಗುರುವಾರ (ಆಗಸ್ಟ್ 4, 2022) ಬೆಳಗ್ಗೆ ಛತ್ತೀಸ್‌ಗಢದಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನವು ಭಾರತೀಯ ಕಾಲಮಾನ 11:57ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಸುರ್ಗುಜಾ ವಿಭಾಗದ ಸೂರಜ್‌ಪುರದಿಂದ 15 ಕಿಮೀ ದೂರದಲ್ಲಿ ಭೂಕಂಪನದ ಅನುಭವವಾಗಿದೆ. ಈ ಪ್ರದೇಶದಲ್ಲಿ 10 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಸಂಸ್ಥೆ ಹೇಳಿದೆ(Earthquake in Chattisgarh).

ಆದರೆ ಅದೃಷ್ಟವಶಾತ್ ಭೂಕಂಪ ಪರಿಣಾಮವಾಗಿ ಯಾವುದೇ ದೊಡ್ಡ ಹಾನಿ ಅಥವಾ ಗಾಯಗಳ ಕುರಿತು ಯಾವುದೇ ವರದಿಗಳಿಲ್ಲ.

ಭಾರತದಲ್ಲಿ ಮಾತ್ರವಲ್ಲದೆ,ಜಪಾನ್‌ನ ಫುಕುಶಿಮಾ ಪ್ರಾಂತ್ಯದ ಕರಾವಳಿಯಲ್ಲಿ ಸಹ ಗುರುವಾರ 5.6 ರ ಪ್ರಾಥಮಿಕ ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ. ಆದರೂ ಅಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ.ಜಪಾನ್ ಹವಾಮಾನ ಸಂಸ್ಥೆ (ಜೆಎಂಎ) ಪ್ರಕಾರ, 9.48 ಗಂಟೆಗೆ ಸಂಭವಿಸಿದ ಕಂಪನವು ಕಡಲಾಚೆಯ ಕೇಂದ್ರಬಿಂದುವನ್ನು 37.6 ಡಿಗ್ರಿ ಉತ್ತರಅಕ್ಷಾಂಶದಲ್ಲಿ ಮತ್ತು 141.7 ಡಿಗ್ರಿ ಪೂರ್ವ ರೇಖಾಂಶದಲ್ಲಿ ಕೇಂದ್ರೀಕರಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಏತನ್ಮಧ್ಯೆ, ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ಭೂಕಂಪನ ದಾಖಲಾಗಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಬುಧವಾರ ಮಧ್ಯಾಹ್ನ 2.31 ಗಂಟೆಗೆ ಜಿಲ್ಲೆಯಲ್ಲಿ 3.6 ತೀವ್ರತೆಯ ಕಂಪನ ಸಂಭವಿಸಿದೆ, ಅದರ ಕೇಂದ್ರಬಿಂದು ರಾಪರ್‌ನಿಂದ 13 ಕಿಮೀ ದಕ್ಷಿಣ-ನೈಋತ್ಯ (SSW) ಆಗಿದೆ” ಎಂದು ಗಾಂಧಿನಗರದ ಭೂಕಂಪನ ಸಂಶೋಧನಾ ಸಂಸ್ಥೆ (ISR) ತಿಳಿಸಿದೆ. ಇದು 14.9 ಕಿಮೀ ಆಳದಲ್ಲಿ ದಾಖಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: Top 5 Mumbai Street Foods: ಮುಂಬೈನ ಟಾಪ್ 5 ಸ್ಟ್ರೀಟ್ ಫುಡ್ ಯಾವುವು ಗೊತ್ತಾ; ಇವುಗಳನ್ನ ಮಿಸ್ ಮಾಡದೇ ಟೇಸ್ಟ್ ಮಾಡಿ

ಇದನ್ನೂ ಓದಿ: Amazon Tie Up‌ : ಭಾರತೀಯ ರೈಲ್ವೆಯೊಂದಿಗೆ ಅಮೆಜಾನ್ ಒಪ್ಪಂದ ; ಇಂಟರ್-ಸಿಟಿ ಮಾರ್ಗಗಳಲ್ಲಿ ಗ್ರಾಹಕರ ಪ್ಯಾಕೇಜ್‌ ಸಾಗಾಟ

ಇದನ್ನೂ ಓದಿ: Intermittent Fasting : ತೂಕ ಕಳೆದುಕೊಳ್ಳಲು ಬಯಸುತ್ತೀರಾ : ಹಾಗಾದ್ರೆ ‘ಮಧ್ಯಂತರ ಉಪವಾಸ’ ಮಾಡಿ ನೋಡಿ

ಇದನ್ನೂ ಓದಿ: OnePlus 10T 5G : ಭಾರತಕ್ಕೆ ಕಾಲಿಟ್ಟ OnePlus 10T 5G ಸ್ಮಾರ್ಟ್‌ಫೋನ್‌ ! ಆಗಸ್ಟ್‌6 ರಿಂದ ಮಾರಾಟ ಪ್ರಾರಂಭ

(Earthquake in Chattisgarh today morning )

Comments are closed.