weekend with ramesh : ಕನ್ನಡ ಕಿರುತೆರೆಯಲ್ಲಿ ಸಧ್ಯ ಧಾರವಾಹಿಗಳಿಗಿಂತ ಹೆಚ್ಚಾಗಿ ರಿಯಾಲಿಟಿ ಶೋಗಳೆ ಹೆಚ್ಚು ಸದ್ದು ಮಾಡುತ್ತಿವೆ . ಬಿಗ್ ಬಾಸ್, ರಾಜಾ ರಾಣಿ, ಜೋಡಿ ನಂ.1, ಇಸ್ಮಾರ್ಟ್ ಜೋಡಿ ಹೀಗೆ ಎಲ್ಲಾ ಚಾನೆಲ್ಗಳಲ್ಲಿಯೂ ಒಂದಿಲ್ಲೊಂದು ರಿಯಾಲಿಟಿ ಶೋಗಳು ನಡೆಯುತ್ತಲೇ ಇದೆ. ಈ ಎಲ್ಲದರ ನಡುವೆ ಇದೀಗ ಕರುನಾಡಿನಲ್ಲಿ ಮನೆ ಮಾತಾಗಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮತ್ತೊಮ್ಮೆ ಆರಂಭಗೊಳ್ಳುವ ಸೂಚನೆ ಸಿಕ್ಕಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸಾಧಕರ ಕುರ್ಚಿಯಲ್ಲಿ ಕುಳ್ಳಿರಿಸಿ ಅವರು ನಡೆದು ಬಂದ ಹಾದಿ, ಸವೆಸಿದ ಕಷ್ಟಗಳು, ಅವಮಾನ, ಅಪಮಾನ, ಸಾಧನೆ, ಸನ್ಮಾನ ಹೀಗೆ ಪ್ರತಿಯೊಂದು ವಿಚಾರಗಳ ಬಗ್ಗೆಯೂ ಮಾತನಾಡುವ ಈ ಶೋ ಸಾಕಷ್ಟು ಪ್ರತೀತಿಯನ್ನು ಗಳಿಸಿದೆ. ಈ ಕಾರ್ಯಕ್ರಮದ ಮೂಲಕ ಯುವ ಜನಕ್ಕೆ ಸ್ಪೂರ್ತಿಯನ್ನು ತುಂಬುವ ಚಂದನವನದ ನಟ ರಮೇಶ್ ಇದೀಗ ಮತ್ತೊಮ್ಮೆ ವೀಕೆಂಟ್ ಟೆಂಟ್ಗೆ ರೀ ಎಂಟ್ರಿ ಕೊಡಲಿದ್ದಾರೆ ಎಂಬ ಸುಳಿವು ಲಭ್ಯವಾಗಿದೆ
2019ರ ಜುಲೈ ತಿಂಗಳಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಕೊನೆಗೊಂಡಿತ್ತು. ಇದಾದ ಬಳಿಕ 3 ವರ್ಷಗಳೇ ಕಳೆದರೂ ಹೊಸ ಸೀಸನ್ ಮಾತ್ರ ಆರಂಭಗೊಂಡಿರಲಿಲ್ಲ. ಪ್ರೇಕ್ಷಕರು ಜೀ ಕನ್ನಡ ವಾಹಿನಿಯ ಬಳಿಯಲ್ಲಿ ಈ ಕಾರ್ಯಕ್ರಮವನ್ನು ಮತ್ತೊಮ್ಮೆ ಆರಂಭಿಸಿ ಎಂದು ಅನೇಕ ಬಾರಿ ಕೇಳಿಕೊಂಡಿದ್ದರು ಕೂಡ. ಇದೀಗ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಮತ್ತೊಮ್ಮೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ಶುರು ಮಾಡೋದಾಗಿ ಹಿಂಟ್ ನೀಡಿದ್ದಾರೆ.
ಈ ಸಂಬಂಧ ಫೇಸ್ಬುಕ್ನಲ್ಲಿ ಪೋಸ್ಟ್ ಶೇರ್ ಮಾಡಿರುವ ರಾಘವೇಂದ್ರ ಹುಣಸೂರು , ವೈಯಕ್ತಿಕವಾಗಿ ನನಗೆ ಫೇವರಿಟ್ ಎನಿಸಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಆರಂಭಗೊಂಡು ಎಂಟು ವರ್ಷಗಳೇ ಕಳೆದಿವೆ. ಕಿರುತೆರೆಯಲ್ಲಿ ಇನ್ನೊಂದು ಸೀಸನ್ ಆರಂಭಿಸಬಹುದೇ..? ಸಾಧಕರ ಸೀಟ್ನಲ್ಲಿ ಕುಳಿತುಕೊಳ್ಳಲು ಯಾರು ಅರ್ಹರು..? ದಯವಿಟ್ಟು ತಿಳಿಸಿ ಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರಿಗೆ ಈ ಬಾರಿಯ ಸಾಧಕರನ್ನು ಆಯ್ಕೆ ಮಾಡುವ ಅವಕಾಶ ನೀಡಿದ್ದೇ ತಡ ಅನೇಕರ ಹೆಸರನ್ನು ಕಮೆಂಟ್ ಬಾಕ್ಸಿನಲ್ಲಿ ಬರೆಯಲಾಗಿದೆ. ಗವಿ ಮಠದ ಸ್ವಾಮೀಜಿಗಳು , ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ , ಬೈರಪ್ಪ, ಯಡಿಯೂರಪ್ಪ,ತಾರಾ, ಹಂಸಲೇಖ, ಸುಧಾರಾಣಿ ಹೀಗೆ ನೆಟ್ಟಿಗರ ಬೇಡಿಕೆಯ ಪಟ್ಟಿ ಬೆಳೆಯುತ್ತಲೇ ಇದೆ.
ಇದನ್ನು ಓದಿ :car lorry accident 6 died : ಕಾರು -ಲಾರಿ ಭೀಕರ ಅಪಘಾತ : 6 ಮಂದಿ ದುರ್ಮರಣ, ಮುಡಿಕೊಟ್ಟು ಬರುವಾಗ ದುರಂತ
ಇದನ್ನೂ ಓದಿ : Janotsava in Davangere : ಸಿದ್ಧರಾಮೋತ್ಸವಕ್ಕೆ ಟಕ್ಕರ್ ಕೊಡುತ್ತಾ ಬಿಜೆಪಿ : ದಾವಣಗೆರೆಯಲ್ಲೇ ಜನೋತ್ಸವಕ್ಕೆ ಕಮಲಪಡೆ ಸಜ್ಜು
raghavendra hunsur hints at weekend with ramesh new season in zee kannada