ಮಂಗಳವಾರ, ಏಪ್ರಿಲ್ 29, 2025
HomeSportsCricketSuryakumar Yadav T20 Ranking : ಪಾಕ್ ನಾಯಕ ಹಿಂದಿಕ್ಕಲು ಎರಡೇ ಪಾಯಿಂಟ್ಸ್‌ : T20...

Suryakumar Yadav T20 Ranking : ಪಾಕ್ ನಾಯಕ ಹಿಂದಿಕ್ಕಲು ಎರಡೇ ಪಾಯಿಂಟ್ಸ್‌ : T20 ಕ್ರಿಕೆಟ್‌ ಜಗತ್ತಿಗೆ ನಂ.1 ಆಗಲಿದ್ದಾರೆ ಸೂರ್ಯಕುಮಾರ್‌

- Advertisement -

ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ (Suryakumar Yadav T20 Ranking ) ಟಿ20 ಕ್ರಿಕೆಟ್”ನಲ್ಲಿ ವಿಶ್ವದ ನಂ.1 ಬ್ಯಾಟ್ಸ್’ಮನ್ ಆಗುವ ಹಾದಿಯಲ್ಲಿದ್ದಾರೆ. ಜಗತ್ತಿನ ನಂ.1 ಬ್ಯಾಟರ್ ಎನಿಸಿಕೊಳ್ಳಲು ಸೂರ್ಯ ಕುಮಾರ್ ಯಾದವ್ ಅವರಿಗೆ ಬೇಕಿರುವುದಿನ್ನು ಕೇವಲ ಎರಡೇ ಎರಡು ರೇಟಿಂಗ್ ಪಾಯಿಂಟ್ಸ್. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ (India Vs West Indies T20 Series) 3ನೇ ಪಂದ್ಯದಲ್ಲಿ ಸ್ಫೋಟಕ 76 ರನ್ ಬಾರಿಸಿದ್ದ ಮುಂಬೈ ಬ್ಯಾಟ್ಸ್’ಮನ್ ಸೂರ್ಯಕುಮಾರ್ ಯಾದವ್, ಐದು ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ 2-1ರ ಮುನ್ನಡೆ ತಂದುಕೊಟ್ಟಿದ್ದರು. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಟಿ20 ಪಂದ್ಯದ ನಂತರ ಐಸಿಸಿ Ranking ಪ್ರಕಟಗೊಂಡಿದ್ದು, 3 ಸ್ಥಾನ ಮೇಲಕ್ಕೆ ಜಿಗಿದಿರುವ ಸೂರ್ಯಕುಮಾರ್ ಯಾದವ್ ಐದರಿಂದ 5ರಿಂದ 2ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ (ICC T20 Batting Ranking).

ಸದ್ಯ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ (Babar Azam) ಐಸಿಸಿ ಟಿ20 ಬ್ಯಾಟಿಂಗ್ Rankingನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಬಾಬರ್ ಅಜಂ ಒಟ್ಟು 818 ರೇಟಿಂಗ್ ಪಾಯಿಂಟ್ಸ್ ಹೊಂದಿದ್ದು, 2ನೇ ಸ್ಥಾನದಲ್ಲಿರುವ ಸೂರ್ಯಕುಮಾರ್ ಯಾದವ್ ಬಳಿಯಿರುವ ರೇಟಿಂಗ್ ಪಾಯಿಂಟ್ಸ್ 816. ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಎರಡು ಟಿ20 ಪಂದ್ಯಗಳಲ್ಲೂ ಸೂರ್ಯಕುಮಾರ್ ಯಾದವ್ ತಮ್ಮ ಅಮೋಘ ಫಾರ್ಮ್ ಮುಂದುವರಿಸಿದ್ರೆ, ಸರಣಿ ಮುಕ್ತಾಯದ ಹೊತ್ತಿಗೆ ಟಿ20 ಕ್ರಿಕೆಟ್’ನಲ್ಲಿ ಜಗತ್ತಿನ ನಂ.1 ಆಟಗಾರ ಎನಿಸಿಕೊಳ್ಳಲಿದ್ದಾರೆ.

ಐಸಿಸಿ ಟಿ20 ಬ್ಯಾಟಿಂಗ್ Ranking

  1. ಬಾಬರ್ ಅಜಂ (ಪಾಕಿಸ್ತಾನ): 818 (ರೇಟಿಂಗ್ ಪಾಯಿಂಟ್ಸ್)
  2. ಸೂರ್ಯಕುಮಾರ್ ಯಾದವ್ (ಭಾರತ): 816
  3. ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ): 794
  4. ಏಡನ್ ಮಾರ್ಕ್ರಮ್ (ದಕ್ಷಿಣ ಆಫ್ರಿಕಾ): 788
  5. ಡಾವಿಡ್ ಮಲಾನ್ (ಇಂಗ್ಲೆಂಡ್): 731

ಕಳೆದ ವರ್ಷ ಅಹ್ಮದಾಬಾದ್”ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್”ಗೆ ಸೂರ್ಯಕುಮಾರ್ ಯಾದವ್ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಟಿ20 ಪಂದ್ಯದ ಹೊತ್ತಿಗೆ ಐಸಿಸಿ ಟಿ20 Rankingನಲ್ಲಿ 1,178ನೇ 32 ವರ್ಷದ ಸೂರ್ಯ, ಒಂದೇ ವರ್ಷದಲ್ಲಿ ನಂ.1 ಸ್ಥಾನಕ್ಕೆ ಹತ್ತಿರವಾಗಿದ್ದಾರೆ.

ಸೂರ್ಯಕುಮಾರ್ ಯಾದವ್ ಟಿ20 ಬ್ಯಾಟಿಂಗ್ Ranking (Suryakumar Yadav T20 Ranking )

ಮೊದಲ ಪಂದ್ಯ: 1,178ನೇ ಸ್ಥಾನ
5ನೇ ಪಂದ್ಯ: 77ನೇ ಸ್ಥಾನ
10ನೇ ಪಂದ್ಯ: 60ನೇ ಸ್ಥಾನ
15ನೇ ಪಂದ್ಯ: 49ನೇ ಸ್ಥಾನ
20ನೇ ಪಂದ್ಯ: 4ನೇ ಸ್ಥಾನ
22ನೇ ಪಂದ್ಯ: 2ನೇ ಸ್ಥಾನ

ಇದನ್ನೂ ಓದಿ : India Vs Pakistan : ಭಾರತ Vs ಪಾಕಿಸ್ತಾನ 3 ಪಂದ್ಯ.. ಕ್ರಿಕೆಟ್ ಪ್ರಿಯರಿಗೆ ಡಬಲ್ ಧಮಾಕಾ ಪಕ್ಕಾ

ಇದನ್ನೂ ಓದಿ : ಮಿಯಾಮಿ ಬೀಚ್‌ನಲ್ಲಿ ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಬಿಂದಾಸ್ ಎಂಜಾಯ್

Suryakumar Yadav T20 Ranking : Two points to overtake Pakistan captain Suryakumar yadav world no 1 in T20 cricket

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular