corbett tiger reserve : ಮ್ಯಾನ್​ ವರ್ಸಸ್​ ವೈಲ್ಡ್​​ನಲ್ಲಿ ಪ್ರಧಾನಿ ಮೋದಿ ಶೂಟಿಂಗ್​ ನಡೆಸಿದ್ದ ಜಾಗವಿನ್ನು ‘ಮೋದಿ ಸರ್ಕ್ಯೂಟ್​’

ಉತ್ತರಾಖಂಡ : corbett tiger reserve : ವಿರೋಧಿಗಳು ಎಷ್ಟೇ ಇದ್ದರೂ ಸಹ ನರೇಂದ್ರ ಮೋದಿ ಓರ್ವ ಪ್ರಭಾವಿ ಪ್ರಧಾನಿ ಎಂಬ ಮಾತನ್ನು ತಳ್ಳಿ ಹಾಕುವಂತಿಲ್ಲ. ಈ ಹಿಂದೆ ಎಲ್ಲಾ ಪ್ರಧಾನಿಗಳಿಗಿಂತ ನರೇಂದ್ರ ಮೋದಿ ಭಿನ್ನ ಎಂಬ ಮಾತು ಅನೇಕ ರಾಜಕೀಯ ಪಂಡಿತರ ಬಾಯಿಯಲ್ಲಿಯೇ ಕೇಳಿದ್ದೇವೆ. 2019ರಲ್ಲಿ ಡಿಸ್ಕವರಿ ಚಾನೆಲ್​ನಲ್ಲಿ ಪ್ರಸಾರವಾಗಿದ್ದ ಹೆಸರಾಂತ ಕಾರ್ಯಕ್ರಮ ಮ್ಯಾನ್​ ವರ್ಸಸ್​ ವೈಲ್ಡ್​ನಲ್ಲಿ ಪ್ರಧಾನಿ ಮೋದಿ ಬೇರ್​ ಗ್ರಿಲ್ಸ್​ ಜೊತೆಯಲ್ಲಿ ಉತ್ತರಾಖಂಡ್​​ನ ಕಾರ್ಬೆಟ್​ ಹುಲಿ ಸಂರಕ್ಷಣಾ ಪ್ರದೇಶಗಳಲ್ಲಿ ಶೂಟಿಂಗ್​ ಮಾಡಿದ್ದರು. ಇದೀಗ ಈ ಸ್ಥಳವನ್ನು ಒಂದು ಪ್ರವಾಸಿ ಸ್ಥಳವನ್ನಾಗಿ ಮಾಡಲು ಉತ್ತರಾಖಂಡ್​ ಸರ್ಕಾರ ಮುಂದಾಗಿದೆ. ಶೂಟಿಂಗ್​ನ ಭಾಗವಾಗಿ ಪ್ರಧಾನಿ ಮೋದಿ ಓಡಾಡಿದ ಸ್ಥಳವನ್ನು ಮೋದಿ ಸರ್ಕ್ಯೂಟ್​ನನ್ನಾಗಿ ಅಭಿವೃದ್ಧಿಪಡಿಸಲು ನಿರ್ಧಾರ ಕೈಗೊಳ್ಳಲಾಗಿದೆ.


ಮ್ಯಾನ್​ ವರ್ಸಸ್​ ವೈಲ್ಡ್​ನಲ್ಲಿ ಅಕ್ಷಯ್​ ಕುಮಾರ್​, ರಣವೀರ್​ ಸಿಂಗ್​ ಸೇರಿದಂತೆ ಭಾರತದ ಅನೇಕ ಗಣ್ಯರು ಭಾಗಿಯಾಗಿದ್ದಾರೆ. ಇದೇ ಕಾರ್ಯಕ್ರಮದ ಎಪಿಸೋಡ್​ ಒಂದರಲ್ಲಿ ಪ್ರಧಾನಿ ಮೋದಿ ಕೂಡ ಭಾಗವಹಿಸಿದ್ದರು. ಉತ್ತರಕಾಂಡ್​ನ ಕಾರ್ಬೆಟ್​ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಪ್ರಧಾನಿ ಮೋದಿ ಸಂಚರಿಸಿದ್ದರು ಮಾತ್ರವಲ್ಲದೇ ಕೋಸಿ ನದಿಯನ್ನು ತಾತ್ಕಾಲಿಕ ತೆಪ್ಪದಲ್ಲಿ ದಾಟುವ ಮೂಲಕ ಸಾಹಸ ಪ್ರದರ್ಶಿಸಿದ್ದರು. ಬೇರ್​ ಗ್ರಿಲ್ಸ್​ ಜೊತೆಯಲ್ಲಿ ಬೇವಿನ ಎಲೆಯ ಜ್ಯೂಸ್​ ಕೂಡ ಕುಡಿದಿದ್ದರು.


ಪ್ರಧಾನಿ ಮೋದಿ ಓರ್ವ ಪ್ರಭಾವಿ ನಾಯಕ ಎಂಬ ವಿಚಾರವನ್ನು ಗಮನದಲ್ಲಿಟ್ಟುಕೊಂಡಿರುವ ಉತ್ತರಾಖಂಡ್​ನ ಪ್ರವಾಸಿ ಅಭಿವೃದ್ಧಿ ಮಂಡಳಿಯು ಈ ಸ್ಥಳವನ್ನು ಒಂದು ಪ್ರವಾಸಿ ಸ್ಥಳವನ್ನಾಗಿ ಬದಲಾಯಿಸಲು ಮುಂದಾಗಿದೆ. ಕಾರ್ಬೆಟ್​ ಹುಲಿ ಸಂರಕ್ಷಣಾ ಪ್ರದೇಶವು ಈಗಾಗಲೇ ಖ್ಯಾತಿಯನ್ನು ಪಡೆದಿದೆ. ಇದರ ಜೊತೆಯಲ್ಲಿ ಮೋದಿ ಸರ್ಕ್ಯೂಟ್​ ಹೌಸ್​ ಕೂಡ ನಿರ್ಮಾಣವಾದಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಇಂಬು ಸಿಗಲಿದೆ ಎಂಬುದು ಉತ್ತರಾಖಂಡ್​ ಸರ್ಕಾರದ ಪ್ಲಾನ್​ ಆಗಿದೆ .


ಕೆಲವು ವರ್ಷಗಳ ಹಿಂದೆ ಪ್ರಧಾನಿ ಮೋದಿಯು ಕೇದಾರನಾಥದ ಗುಹೆಯಲ್ಲಿ ಒಬ್ಬರೇ ಕುಳಿತು ಧ್ಯಾನ ಮಾಡಿದ್ದರು. ಇದರ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಇದಾದ ಬಳಿಕ ಕೇದಾರನಾಥದ ಈ ಗುಹೆಗೆ ತೆರಳಲು ಪ್ರವಾಸಿಗರು ಮುಗಿಬಿದ್ದಿದ್ದರು. ಹೀಗಾಗಿ ಇದೇ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಇದೀಗ ಉತ್ತರಾಖಂಡ್​ ಸರ್ಕಾರ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕ್ತಿದೆ .

ಇದನ್ನು ಓದಿ : karnataka ratna award to puneeth : ನವೆಂಬರ್​ 1ರಂದು ಪುನೀತ್​ಗೆ ಮರಣೋತ್ತರ ಕರ್ನಾಟಕ ರತ್ನ ಪ್ರದಾನ

ಇದನ್ನೂ ಓದಿ : ಮಿಯಾಮಿ ಬೀಚ್‌ನಲ್ಲಿ ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಬಿಂದಾಸ್ ಎಂಜಾಯ್

uttarakhand tourism department to develop modi circuit at corbett tiger reserve

Comments are closed.