ಬೆಂಗಳೂರು : namma clinics : ರಾಜ್ಯದ ಜನತೆಯ ಆರೋಗ್ಯವನ್ನು ಕಾಪಾಡುವ ಸಲುವಾಗಿ ರಾಜ್ಯ ಸರ್ಕಾರವು ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಲೇ ಇದೆ. ಇದೀಗ ರಾಜ್ಯದ ಜನತೆಗೆ ತುರ್ತು ಆರೋಗ್ಯ ಸೇವೆಯನ್ನು ನೀಡುವ ಸಲುವಾಗಿ ಬೊಮ್ಮಾಯಿ ನೇತೃತ್ವದ ಸರ್ಕಾರವು ನಮ್ಮ ಕ್ಲಿನಿಕ್ ಆರಂಭಗೊಳಿಸಲು ಸಿದ್ಧತೆಯನ್ನು ನಡೆಸುತ್ತಿದೆ. ನಮ್ಮ ಕ್ಲಿನಿಕ್ ಆರಂಭಕ್ಕೆ ಇದೀಗ ರಾಜ್ಯದ ಜನತೆಯ ಸಹಕಾರವನ್ನು ರಾಜ್ಯ ಸರ್ಕಾರ ಕೋರಿದೆ.
ಹೌದು..! ರಾಜ್ಯ ಸರ್ಕಾರದ ಈ ಯೋಜನೆಯಲ್ಲಿ ಜನ ಸಾಮಾನ್ಯ ಕೂಡ ಕೈ ಜೋಡಿಸಬಹುದಾಗಿದೆ. ರಾಜ್ಯದಲ್ಲಿ ಸುಮಾರು 436 ಕಡೆಗಳಲ್ಲಿ ಈ ಕ್ಲಿನಿಕ್ಗಳು ಆರಂಭಗೊಳ್ಳಲಿದೆ. ಈ ಕ್ಲಿನಿಕ್ಗೆ ಆಕರ್ಷಕ ಗುರುತನ್ನು ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ಇದಕ್ಕಾಗಿ ಜನರ ಸಹಾಯವನ್ನು ಕೋರಿದೆ. ಆಕರ್ಷಕ ಲೋಗೋದ ಹುಡುಕಾಟದಲ್ಲಿರುವ ರಾಜ್ಯ ಸರ್ಕಾರವು ರಾಜ್ಯದ ಜನತೆಯ ಸಹಕಾರವನ್ನು ಕೋರಿದೆ. ನಮ್ಮ ಕ್ಲಿನಿಕ್ಗೆ ಆಕರ್ಷಕ ಹಾಗೂ ವಿಭಿನ್ನ ಲೋಗೋವನ್ನು ತಯಾರಿಸಿ ಜನತೆ logo4nammaclinic@gmail.com ಕಳುಹಿಸುವಂತೆ ಸೂಚಿಸಲಾಗಿದೆ. ರಾಜ್ಯ ಆರೋಗ್ಯ ಇಲಾಖೆಯ ಉದ್ದೇಶವನ್ನು ಹೊಂದಿರುವ ಲೋಗೋಗಳಿಗೆ ಆದ್ಯತೆಯನ್ನು ನೀಡಲಾಗುತ್ತದೆ.
📢 Want to contribute to Arogya Karnataka?
— Dr Sudhakar K (@mla_sudhakar) August 5, 2022
Design a logo for the #NammaClinic that will come up in 436 urban centres across state and stand a chance to win a prize from @CMofKarnataka.
Last date of submission: Aug 15, 2022
Email your designs to: logo4nammaclinic@gmail.com pic.twitter.com/rL8PiWNgEN
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಮ್ಮ ಕ್ಲಿನಿಕ್ ಆರಂಭಗೊಳ್ಳಲಿದೆ. ಉತ್ತಮ ವಿನ್ಯಾಸದ ಲೋಗೋವನ್ನು ಬಿಡಿಸಿದ ಕಲಾವಿದರಿಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ವಿಶೇಷ ವೈಯಕ್ತಿಕ ಗೌರವವನ್ನು ನೀಡಲಿದ್ದಾರೆ.
ಆಸಕ್ತ ಕಲಾವಿದರು ಆಗಸ್ಟ್ ಐದರಿಂದ ಆಗಸ್ಟ್ ಹದಿನೈದರ ಒಳಗಾಗಿ ನಮ್ಮ ಕ್ಲಿನಿಕ್ ಲೋಗೋವನ್ನು ಮೇಲೆ ಸೂಚಿಸಲಾದ ಮೇಲ್ಗೆ ಕಳುಹಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ. ಆಯ್ಕೆಯಾದ ಲೋಗೋವನ್ನು ಬಿಡಿಸಿದವರಿಗೆ ಆಕರ್ಷಕ ಬಹುಮಾನ ದೊರಕುವ ನಿರೀಕ್ಷೆಯಿದೆ.
ಇದನ್ನು ಓದಿ : rashmika mandanna : ಸಿನಿಮಾ ರಂಗಕ್ಕೆ ಗುಡ್ಬೈ ಹೇಳಿ ರಾಜಕೀಯಕ್ಕೆ ಸೇರಲಿದ್ದಾರಾ ರಶ್ಮಿಕಾ ಮಂದಣ್ಣ
ಇದನ್ನೂ ಓದಿ : siddaramotsava : ಸಿದ್ದರಾಮೋತ್ಸವಕ್ಕೆ ಬಂದಿದ್ದು ಸಿದ್ದರಾಮಯ್ಯ ಫ್ಯಾನ್ಸ್, ಕಾಂಗ್ರೆಸ್ ಸತ್ತು ಹೋಗಿದೆ : ರೇಣುಕಾಚಾರ್ಯ ವ್ಯಂಗ್ಯ
ಇದನ್ನೂ ಓದಿ : siddaramotsava : ಸಿದ್ದರಾಮೋತ್ಸವಕ್ಕೆ ಬಂದಿದ್ದು ಸಿದ್ದರಾಮಯ್ಯ ಫ್ಯಾನ್ಸ್, ಕಾಂಗ್ರೆಸ್ ಸತ್ತು ಹೋಗಿದೆ : ರೇಣುಕಾಚಾರ್ಯ ವ್ಯಂಗ್ಯ
ಇದನ್ನೂ ಓದಿ : Pramod Muthalik : ಹಿಂದುತ್ವಕ್ಕಾಗಿ ಹೊಸ ಪಕ್ಷ, ಯೋಗಿ ಮಾದರಿ ಆಡಳಿತ : ಬಿಜೆಪಿಗೆ ಶಾಕ್ ಕೊಟ್ಟ ಪ್ರಮೋದ್ ಮುತಾಲಿಕ್
health minister drsudhakar announces logo competition for namma clinics