siddaramotsava : ಸಿದ್ದರಾಮೋತ್ಸವಕ್ಕೆ ಬಂದಿದ್ದು ಸಿದ್ದರಾಮಯ್ಯ ಫ್ಯಾನ್ಸ್​, ಕಾಂಗ್ರೆಸ್​ ಸತ್ತು ಹೋಗಿದೆ : ರೇಣುಕಾಚಾರ್ಯ ವ್ಯಂಗ್ಯ

ಬೆಂಗಳೂರು : siddaramotsava : ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಸೇರಿದ ಅಪಾರ ಜನ ಬಳಗ ಎಲ್ಲೋ ಒಂದು ಕಡೆಯಲ್ಲಿ ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿರುವುದಂತೂ ಸತ್ಯ. ಹೀಗಾಗಿ ಸಿದ್ದರಾಮೋತ್ಸವ ಬೆನ್ನಲ್ಲೇ ಬಿಜೆಪಿ ಈ ಹಿಂದೆ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಬಳಿಕ ರದ್ದು ಮಾಡಿದ್ದ ಜನೋತ್ಸವ ಕಾರ್ಯಕ್ರಮವನ್ನು ಮತ್ತೊಮ್ಮೆ ಆಯೋಜನೆ ಮಾಡುವ ಸಿದ್ಧತೆಯಲ್ಲಿದೆ. ಈ ಮೂಲಕ ರಾಜ್ಯದಲ್ಲಿ ತಾನೂ ಬಲ ಪ್ರದರ್ಶನ ಮಾಡುವ ಪ್ರಯತ್ನಲ್ಲಿದೆ. ಈ ಎಲ್ಲದರ ನಡುವೆ ಇಂದು ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಶಾಸಕ ಎಂಪಿ ರೇಣುಕಾಚಾರ್ಯ, ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದು ಕೇವಲ ಸಿದ್ದರಾಮಯ್ಯ ಅಭಿಮಾನಿಗಳು. ಇದಕ್ಕೂ ಕಾಂಗ್ರೆಸ್​ ಮತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.


ವಿಧಾನಸೌಧದಲ್ಲಿ ಈ ವಿಚಾರವಾಗಿ ಮಾತನಾಡಿದ ರೇಣುಕಾಚಾರ್ಯ, ದಾವಣಗೆರೆಯಲ್ಲಿ ಅಭಿಮಾನೆಗಳೆಲ್ಲ ಸೇರಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಮಾಡಿದ್ದಾರೆ. ಇಲ್ಲಿ ಸೇರಿದ ಜನರನ್ನು ಕಂಡು ಕಾಂಗ್ರೆಸ್​ನವರು ಮುಂದಿನ ಬಾರಿ ತಾವೇ ಅಧಿಕಾರಕ್ಕೆ ಬರುತ್ತೇವೆಂಬ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ಮೇಲೆ ನನಗೂ ಗೌರವವಿದೆ. ಇದೇ ರೀತಿ ಗೌರವ ಇಟ್ಟುಕೊಂಡ ಅನೇಕರು ಆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಹಾಗಂದ ಮಾತ್ರಕ್ಕೆ ಅವೆಲ್ಲ ಕಾಂಗ್ರೆಸ್​ ಮತಗಳಲ್ಲ. ಕಾಂಗ್ರೆಸ್​ ಸತ್ತು ಹೋಗಿದೆ ಎಂದು ವ್ಯಂಗ್ಯವಾಗಿಡ್ಡಾರೆ.


ಡಿಕೆಶಿವಕುಮಾರ್​ ಹಾಗೂ ಸಿದ್ದರಾಮಯ್ಯ ಬಲವಂತದ ಆಲಿಂಗನದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ರಾಹುಲ್​ ಗಾಂಧಿಯೇ ಡಿ,ಕೆ ಶಿವಕುಮಾರ್​ ಬಳಿಯಲ್ಲಿ ಸಿದ್ದರಾಮಯ್ಯರನ್ನು ಅಪ್ಪಿಕೊಳ್ಳುವಂತೆ ಸನ್ನೆ ಮಾಡಿದ್ದಾರೆ. ಇದನ್ನು ನೋಡಿದರೆ ನನಗೆ ನಗು ಬರುತ್ತದೆ. ರಾಹುಲ್​ ಗಾಂಧಿ ತೀರ್ಥವನ್ನು ಮಾತ್ರೆಯಂತೆ ತೆಗೆದುಕೊಳ್ತಾರೆ. ಮೋದಿಯ ಎದುರು ರಾಹುಲ್​ ಕೇವಲ ಝಿರೋ ಎಂದು ಕಾಲೆಳೆದರು.


ನಮ್ಮ ಬಿಜೆಪಿ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಸಾಕಷ್ಟು ಜನಪರ ಯೋಜನೆಗಳನ್ನು ಪರಿಚಯಿಸಿದ್ದಾರೆ. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಯುವಕರಿಗೆ ಆದ್ಯತೆ ನೀಡಿದ್ದೇವೆ. ನಾವು ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತೇವೆ. ಆ ಬಳಿಕ ಮತ್ತೊಮ್ಮೆ ಜನಪರ ಯೋಜನೆಗಳನ್ನು ಮನೆ ಬಾಗಲಿಗೆ ತಲುಪಿಸುತ್ತೇವೆ ಎಂದು ಹೇಳಿದರು.

ಇದನ್ನು ಓದಿ : twist in Praveen Nettaru’s murder case: ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದಲ್ಲಿ ಸ್ಫೋಟಕ ತಿರುವು : ಸ್ಥಳೀಯರೇ ಕೊಲೆಗೈದಿದ್ದಾರೆಂದ ಗೃಹ ಸಚಿವ

ಇದನ್ನೂ ಓದಿ : rashmika mandanna : ಸಿನಿಮಾ ರಂಗಕ್ಕೆ ಗುಡ್​ಬೈ ಹೇಳಿ ರಾಜಕೀಯಕ್ಕೆ ಸೇರಲಿದ್ದಾರಾ ರಶ್ಮಿಕಾ ಮಂದಣ್ಣ

renukacharya criticize congress over siddaramotsava

Comments are closed.