ಮಂಗಳೂರು : Praveen Nettaru murder case:ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ, ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಚುರುಕು ಪಡೆದುಕೊಳ್ತಿದೆ. ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಕೇಂದ್ರ ಗೃಹ ಸಚಿವಾಲಯ ಲಿಖಿತ ಆದೇಶವನ್ನು ನೀಡಿದೆ . ಹೀಗಾಗಿ ಎನ್ಐಎ ಅಧಿಕೃತವಾಗಿ ಈ ಪ್ರಕರಣದ ತನಿಖೆಗೆ ಎಂಟ್ರಿ ಕೊಟ್ಟಿದ್ದು ಆರೋಪಿಗಳು ಶೀಘ್ರದಲ್ಲಿಯೇ ಬಲೆಗೆ ಬೀಳಬಹುದು ಎಂದು ನಿರೀಕ್ಷಿಸಲಾಗಿದೆ.
ಇಲ್ಲಿಯವರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿರುವ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆ ಠಾಣೆ ಪೊಲೀಸರು ಇನ್ನೂ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳ ಶೋಧದಲ್ಲಿದ್ದರು. ಈ ಕೃತ್ಯಕ್ಕೆ ಪರೋಕ್ಷವಾಗಿ ಸಾಥ್ ನೀಡಿದ್ದಾರೆಂಬ ಗುಮಾನಿ ವ್ಯಕ್ತವಾದ ಹಿನ್ನೆಲೆಯಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು ವಿಚಾರಣೆ ಮುಂದುವರಿದಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಕೇರಳದ ಆರೋಪಿಗಳು ಭಾಗಿಯಾಗಿದ್ದಾರೆಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಎನ್ಐಎ ತನಿಖೆಗೆ ಒಳಪಡಿಸಲಾಗಿತ್ತು.
ಆದರೆ ನಿನ್ನೆಯಷ್ಟೇ ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಸ್ಫೋಟಕ ಮಾಹಿತಿಯೊಂದನ್ನು ನೀಡಿದ್ದರು. ಪ್ರವೀಣ್ ನೆಟ್ಟಾರುವನ್ನು ಕೇರಳದ ದುಷ್ಕರ್ಮಿಗಳಲ್ಲ ಬದಲಾಗಿ ಸ್ಥಳೀಯರೇ ಕೊಲೆ ಮಾಡಿದ್ದಾರೆಂದು ಹೇಳಿದ್ದರು. ಗೃಹ ಸಚಿವರ ಈ ಹೇಳಿಕೆಯ ಬಳಿಕ ಈ ಕೊಲೆ ಪ್ರಕರಣವು ರೋಚಕ ತಿರುವನ್ನು ಪಡೆದುಕೊಂಡಿದೆ.
ಈ ಕೊಲೆಯನ್ನು ನಡೆಸಿದ್ದು ಕೇರಳದ ದುಷ್ಕರ್ಮಿಗಳಲ್ಲ ಬದಲಾಗಿ ಕೇರಳದೊಂದಿಗೆ ನಂಟು ಹೊಂದಿರುವ ಸ್ಥಳೀಯ ಯುವಕರೇ ನಡೆಸಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಪ್ರಮುಖ ಹಂತಕರ ಪೈಕಿ ಓರ್ವ ಆರೋಪಿ ಸುಳ್ಯ ತಾಲೂಕಿನ ಬೆಳ್ಳಾರೆ ಮೂಲದವನೇ ಆಗಿದ್ದಾನೆಂಬ ಮಾಹಿತಿ ಕೂಡ ಲಭ್ಯವಾಗಿದೆ. ಹಂತಕರು ಪ್ರವೀಣ್ ನೆಟ್ಟಾರು ಕೊಲೆ ಮಾಡುವ ಸಂದರ್ಭದಲ್ಲಿ ತಮ್ಮ ಮೊಬೈಲ್ಗಳನ್ನು ಮನೆಯಲ್ಲಿಯೇ ಇಟ್ಟು ಬೀಗ ಹಾಕಿ ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ತನಿಖೆಯ ದಿಕ್ಕನ್ನು ತಪ್ಪಿಸುವ ಸಲುವಾಗಿ ತಾವು ಕೇರಳ ಮೂಲದವರು ಎಂದು ಬಿಂಬಿಸಲು ದುಷ್ಕರ್ಮಿಗಳು ಪ್ಲಾನ್ ರೂಪಿಸಿರುವ ಸಾಧ್ಯತೆಯಿದೆ. ಕೇರಳ ನೋಂದಣಿಯ ಬೈಕನ್ನು ಬಳಸುವ ಮೂಲಕ ಪ್ರಕರಣದ ದಿಕ್ಕನ್ನು ತಪ್ಪಿಸಲು ಯತ್ನಿಸಿದ್ದರಬಹುದು ಎಂಬ ಶಂಕೆ ಕೂಡ ಇದೀಗ ವ್ಯಕ್ತವಾಗಿದೆ. ಪ್ರವೀಣ್ ನೆಟ್ಟಾರು ಕೊಲೆಗೈದ ಬಳಿಕ ಹಂತಕರು ಕೇರಳಕ್ಕೆ ತೆರಳಿದ್ದಾರೆ ಎನ್ನುವುದು ತನಿಖೆಯಲ್ಲಿ ದೃಢವಾಗಿದೆ. ಅಲ್ಲದೇ ಈ ತನಿಖೆಯಲ್ಲಿ ವಿದೇಶಿ ವ್ಯಕ್ತಿಗಳೂ ಕೈ ಜೋಡಿಸಿದ್ದಾರೆಂಬ ಅನುಮಾನ ಕೂಡ ಇರೋದ್ರಿಂದ ಆರೋಪಿಗಳು ವಿದೇಶಕ್ಕೆ ಹಾರುವುದನ್ನು ತಪ್ಪಿಸಲು ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನು ಓದಿ : ITR Refund : ನಿಮ್ಮ ಆದಾಯ ತೆರಿಗೆ ರಿಫಂಡ್ ಆಗಿದ್ಯಾ? ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ : Bommai Tests Covid 19 Positive : ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೊನಾ ಸೋಂಕು ದೃಢ : ದೆಹಲಿ ಪ್ರವಾಸ ರದ್ದು
Praveen Nettaru murder case: Use of bike from Kerala to avoid direction of investigation