Lamborghini Huracan: ಲಂಬೋರ್ಗಿನಿ ಹುರುಕಾನ್ ಬಿಡುಗಡೆ : ಈ ಕಾರಿನ ವೈಶಿಷ್ಟ್ಯಗಳೇನು ಗೊತ್ತಾ!

ಲಾಂಬೋರ್ಗಿನಿಯು ತನ್ನ ಹ್ಯುರಾಕನ್(Lamborghini Huracan) ಮಾಡೆಲ್ ನ ಹೊಸ ಸದಸ್ಯ ಹುರಾಕನ್ ಟೆಕ್ನಿಕಾವನ್ನು ಈ ವರ್ಷದ ಏಪ್ರಿಲ್‌ನಲ್ಲಿ ಲಾಂಚ್ ಮಾಡಿತ್ತು. ಜಾಗತಿಕವಾಗಿ ಬಿಡುಗಡೆ ಮಾಡಿ ಐದು ತಿಂಗಳ ನಂತರ, ಈ ಕಾರು ಈಗ ಭಾರತಕ್ಕೆ ಪಾದಾರ್ಪಣೆ ಮಾಡಲು ಸಿದ್ಧವಾಗಿದೆ. ಲಂಬೋರ್ಗಿನಿ ಹುರಾಕನ್ ಟೆಕ್ನಿಕಾ ಭಾರತದಲ್ಲಿ ಆಗಸ್ಟ್ 25 ರಂದು ಬಿಡುಗಡೆಯಾಗಲಿದೆ.

ತಮ್ಮ ದುಬಾರಿ ಬೆಲೆಯ ಹೊರತಾಗಿಯೂ, ಲಂಬೋರ್ಗಿನಿ ಕಾರುಗಳು ಭಾರತೀಯ ಖರೀದಿದಾರರಲ್ಲಿ ತಡವಾಗಿ ಸಾಕಷ್ಟು ಉತ್ಸಾಹ ಉಂಟುಮಾಡಿತ್ತು.ಕಂಪನಿಯು ಇತ್ತೀಚೆಗೆ ತನ್ನ ಉರುಸ್ ಎಸ್‌ಯುವಿಯ 200 ನೇ ಮಾಡೆಲ್ಅನ್ನು ದೇಶದಲ್ಲಿ ಮಾರಾಟ ಮಾಡಿತ್ತು. ಅಧಿಕೃತ ಲಾಂಚ್ ಇನ್ನೂ ದೂರದಲ್ಲಿದ್ದರೂ, ವರದಿಯ ಪ್ರಕಾರ, ಹ್ಯುರಾಕನ್ ಟೆಕ್ನಿಕಾಗಾಗಿ ಈಗಾಗಲೇ ಬುಕಿಂಗ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ ಎಂದು ಲಾಂಬೋರ್ಗಿನಿ ತಿಳಿಸಿದೆ.

ಹೊಸ ಹ್ಯುರಾಕನ್ ಟೆಕ್ನಿಕಾ ಕಾರ್ ಸ್ಟ್ಯಾಂಡರ್ಡ್ (Huracan EVO) ಮತ್ತು ಟ್ರ್ಯಾಕ್-ಫೋಕಸ್ಡ್ (Huracan STO) ಎಂಬ ಎರಡು ಬಗೆಯ ವೇರಿಯಂಟ್ ಗಳನ್ನು ಬಿಡುಗಡೆ ಮಾಡಲಿದ್ದಾರೆ. ಲಾಂಬೋರ್ಗಿನಿಯ ಮುಖ್ಯ ತಾಂತ್ರಿಕ ಅಧಿಕಾರಿ ರೂವೆನ್ ಮೊಹ್ರ್ ವಿವರಿಸಿದಂತೆ ಇದು ಎರಡೂ ವೇರಿಯಂಟ್ಗಳು “ಅತ್ಯುತ್ತಮ ಸಂಯೋಜನೆಯ ಕಾರ್ ಗಳಾಗಿವೆ.” ಎಂದಿದ್ದಾರೆ.

ಕಾರ್ಯಕ್ಷಮತೆಗೆ ಬಂದಾಗ, ಹುರಾಕನ್ ಟೆಕ್ನಿಕಾವು ಹ್ಯುರಾಕನ್ ಎಸ್.ಟಿ.ವೊ (STO) ನಂತಹ ವಿಶೇಷಣಗಳನ್ನು ಹೊಂದಿದೆ. ಪವರ್‌ಟ್ರೇನ್, 5.2-ಲೀಟರ್, V10,ಗರಿಷ್ಠ 640hp ಅನ್ನು ಹೊಂದಿದೆ. ಅದರ ಟಾರ್ಕ್ 564 Nm ನಲ್ಲಿ ಗರಿಷ್ಠವಾಗಿದೆ. ಎಂಜಿನ್ 7-ಸ್ಪೀಡ್, ಡ್ಯುಯಲ್-ಕ್ಲಚ್, ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಈ ಕಾರ್ ಅನ್ನು ಸೂಪರ್ ಕಾರ್ ಅನ್ನಾಗಿ ಮಾಡುತ್ತದೆ.

ಪವರ್‌ಟ್ರೇನ್ ಮತ್ತು ಟ್ರಾನ್ಸ್‌ಮಿಷನ್‌ನ ಸಂಯೋಜನೆಯು ಕಾರನ್ನು ಕೇವಲ 3.2 ಸೆಕೆಂಡ್‌ಗಳಲ್ಲಿ ಗಂಟೆಗೆ 0 ರಿಂದ 100 ಕಿಲೋಮೀಟರ್‌ಗಳನ್ನು ಜೂಮ್ ಮಾಡಲು ಮತ್ತು 325 kmph ಗರಿಷ್ಠ ವೇಗಕ್ಕೆ ಓಡಿಸಲು ಸಾಧ್ಯವಾಗುತ್ತದೆ. ಕಾರ್ಬನ್-ಸೆರಾಮಿಕ್ ಡಿಸ್ಕ್ ಈ ಕಾರಿನ ಬ್ರೇಕಿಂಗ್ ಕೆಲಸಗಳನ್ನು ನಿರ್ವಹಿಸುತ್ತವೆ.

ಈಗ, ಕಾರಿನ ಡಿಸೈನ್ ಬಗ್ಗೆ ಹೇಳುವುದಾದರೆ, ಸೂಪರ್‌ಕಾರ್ ಲಾಂಬೋರ್ಗಿನಿಯು ತನ್ನ ಸಿಯಾನ್ ಹೈಬ್ರಿಡ್‌ ಕಲರ್ ನಿಂದ ಸೆಳೆಯುತ್ತದೆ. ಹೆಡ್‌ಲ್ಯಾಂಪ್‌ಗಳ ಕೆಳಗೆ ಹೊಸ ವೈ-ಆಕಾರದ ಗ್ರಾಫಿಕ್ ಅನ್ನು ಈ ಕಾರು ಒಳಗೊಂಡಿದೆ. ಕಾರು ಸಂಪೂರ್ಣ ಕಾರ್ಬನ್-ಫೈಬರ್ ಬಾನೆಟ್, ಷಡ್ಭುಜೀಯ ಎಕ್ಸಾಸ್ಟ್ ಟಿಪ್ಸ್ ಮತ್ತು ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್ ಅನ್ನು ಪಡೆದಿದೆ. ಕಾರು ಸ್ಥಿರವಾದ ಹಿಂಭಾಗದ ಸ್ಪಾಯ್ಲರ್ ಅನ್ನು ಸಹ ಹೊಂದಿದೆ.ಸಿಯಾನ್ ಹೈಬ್ರಿಡ್‌ ಕಲರ್ ಎಲ್ಲರ ಮೆಚ್ಚುಗೆ ಪಡೆದಿದ್ದು ಹೈಯೆಸ್ಟ್ ಟ್ವೀಟ್ ಗಳನ್ನೂ ಪಡೆದಿದೆ.

ಬೆಳೆಯ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲವಾದರೂ , ಮುಂಬರುವ ಕಾರು ಹ್ಯುರಾಕನ್ ಎಸ್.ಟಿ.ವೊ ಗಿಂತ ಕೆಳಗಿರುವ ಸಾಧ್ಯತೆಯಿದೆ. ಇದರ ಬೆಲೆ ಭಾರತದಲ್ಲಿ ರೂ 4.99 ಕೋಟಿನಿಂದ (ಎಕ್ಸ್ ಶೋ ರೂಂ) ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Mission Raftaar: ರೈಲುಗಳ ವೇಗ ಹೆಚ್ಚಳ : ಜಾರಿಯಾಯ್ತು ‘ಮಿಷನ್ ರಫ್ತಾರ್’ ಯೋಜನೆ

(Lamborghini Huracan launched in India )

Comments are closed.