ಮುಂಬೈ : ಅನಾರೋಗ್ಯದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ರಿಷಿ ಕಪೂರ್ (67 ವರ್ಷ) ವಿಧಿವಶರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ನಿನ್ನೆಯಷ್ಟೇ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

2018ರಲ್ಲಿ ಕ್ಯಾನ್ಸರ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಆದ್ರೀಗ ಉಸಿರಾಟ ಹಾಗೂ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ನಿನ್ನೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಿಷಿ ಕಪೂರ್ ವಿಧಿವಶರಾಗಿದ್ದಾರೆ.

ರಾಜ್ ಕಪೂರ್ 2ನೇ ಮಗನಾಗಿರುವ ರಿಷಿ ಕಪೂರ್ 1970ರಲ್ಲಿ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದರು. ತನ್ನ ಮೊದಲ ಚಿತ್ರದ ಬಾಬಿ ಮೂಲಕ ಅಭಿಮಾನಿಗಳ ಮನಗೆದ್ದ ರಿಷಿ ಕಪೂರ್ ನಂತರದಲ್ಲಿ ಲೈಲಾ ಮಜ್ನು, ರಾಪೋ ಚಕ್ಕರ್, ಸರ್ಗಮ್, ಕರ್ಜ್, ಪ್ರೇಮ್ ರೋಗ್, ನಾಗಿನಿ, ಹನಿಮೂನ್, ಚಾಂದಿ, ಬೋಲ್ ರಾಧಾ ಬೋಲ್ ಸೇರಿದಂತೆ 90ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಅಲ್ಲದೇ ಫಿಲ್ಮ್ ಫೆರ್ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಸೇರಿದಂತೆ ಬಾಲಿವುಡ್ ದಿಗ್ಗಜರು ರಿಷಿ ಕಪೂರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ನಿನ್ನೆಯಷ್ಟೇ ಇರ್ಫಾನ್ ಖಾನ್ ನಿಧನದ ಬೆನ್ನಲ್ಲೇ ರಿಷಿ ಕಪೂರ್ ವಿಧಿವಶರಾಗಿರೋದು ಬಾಲಿವುಡ್ ಗೆ ಆಘಾತ ಮೂಡಿಸಿದೆ.