ಕೊರೊನಾ ಲಾಕ್ ಡೌನ್ ಹಿನ್ನೆಲೆ : ಕಾಲೇಜುಗಳಿಗೆ ಹೊಸ ವೇಳಾಪಟ್ಟಿ ಪ್ರಕಟಿಸಿದ UGC

0

ನವದೆಹಲಿ : ಕೊರೊನಾ ಲಾಕ್ ಡೌನ್ ಎಫೆಕ್ಟ್ ಇದೀಗ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ. ಯಾವಾಗ ಶಾಲೆ, ಕಾಲೇಜುಗಳು ಪುನರಾರಂಭವಾಗುತ್ತೆ ಅಂತಾ ನಿಖರವಾಗಿ ಹೇಳೋದಕ್ಕೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಯುಜಿಸಿ ವಾರ್ಷಿಕ ಪರೀಕ್ಷೆ ಸಮಯ ಮತ್ತು 2020-21ರ ಶೈಕ್ಷಣಿಕ ವರ್ಷದ ಹೊಸ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಯುಜಿಸಿ ನೇಮಕ ಮಾಡಿರುವ ಸಮಿತಿ ಸಪ್ಟೆಂಬರ್ ತಿಂಗಳಿನಿಂದ ಕಾಲೇಜುಗಳು ಪುನರಾರಂಭ ಸಾಧ್ಯ ಅಂತಾ ವರದಿ ನೀಡಿದ ಬೆನ್ನಲ್ಲೇ ಯುಜಿಸಿ ಹೊಸ ವೇಳಾಪಟ್ಟಿ ಪ್ರಕಟಿಸಿದೆ. ಎಂ.ಫಿಲ್/ಪಿಎಚ್‍ಡಿ ಅವಧಿಯನ್ನು 6 ತಿಂಗಳು ವಿಸ್ತರಿಸಲಾಗಿದೆ. ಎಂ.ಫಿಲ್/ಪಿಎಚ್‍ಡಿ ವಿದ್ಯಾರ್ಥಿಗಳ ಮೌಖಿಕ ಪರೀಕ್ಷೆಗಳನ್ನು ಯುನಿವರ್ಸಿಟಿಗಳು ಆನ್‍ಲೈನ್ ವಿಡಿಯೋ ಕಾನ್ಪರೆನ್ಸ್ ಮೂಲಕವೇ ನಡೆಸಲು ಯುಜಿಸಿ ಸೂಚಿಸಿದೆ.

ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿಯೂ ಕ್ರಮಕೈಗೊಳ್ಳಲಾಗುತ್ತಿದ್ದು, ಪ್ರಸ್ತುತ ವರ್ಷದಲ್ಲಿ ಬಾಕಿಯಿರುವ ಪರೀಕ್ಷಾ ಅವಧಿಯಲ್ಲಿಯೂ ಬದಲಾವಣೆ ಮಾಡಲು ಚಿಂತನೆ ನಡೆಸಿದ್ದು, 3 ಗಂಟೆಯ ಪರೀಕ್ಷಾ ಅವಧಿಯನ್ನು 2 ಗಂಟೆಗೆ ಇಳಿಸಲು ಚಿಂತನೆ ನಡೆದಿದೆ. ಅಲ್ಲದೇ ಪರೀಕ್ಷೆಗಳನ್ನು ನಡೆಸಲು ಪರ್ಯಾಯ ಮಾರ್ಗಗಳನ್ನು ಅನುರಿಸುತ್ತಿದೆ. ಶಿಕ್ಷಣ ಸಂಸ್ಥೆಗಳು ಕೋವಿಡ್-19 ನಿಯಮ (ಮಾಸ್ಕ್, ಸಾಮಾಜಿಕ ಅಂತರ)ಗಳನ್ನು ಕಡ್ಡಾಯಾಗಿ ಪಾಲಿಸುವಂತೆ ಸೂಚಿಸಿದೆ.

2020-21ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಯುಜಿಸಿ ಮಾಡಿದೆ. ಕಾಲೇಜುಗಳ ದಾಖಲಾತಿ ಅವಧಿಯನ್ನು ವಿಸ್ತರಿಸಲಾಗಿದ್ದು, ತರಗತಿಗಳ ಆರಂಭ, ಪರೀಕ್ಷಾ ದಿನಾಂಕ, ರಜೆ ಅವಧಿಯಲ್ಲಿಯೂ ಕೂಡ ಬದಲಾವಣೆ ಮಾಡಲಾಗಿದೆ. ನೂತನ ವರ್ಷದ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಇಂತಿದೆ.

2020-21 ಶೈಕ್ಷಣಿಕ ವರ್ಷದ ವೇಳಾಪಟ್ಟಿ ಹೀಗಿದೆ:
ದಾಖಲಾತಿ ಆರಂಭ: 01-08-2020 ರಿಂದ 31-08-2020
ತರಗತಿ ಆರಂಭ:
ಹಳೆಯ ವಿದ್ಯಾರ್ಥಿಗಳು (2 ಮತ್ತು 3ನೇ ವರ್ಷದವರಿಗೆ): 01-08-2020
ಮೊದಲ ವರ್ಷದ ವಿದ್ಯಾರ್ಥಿಗಳಿಗೆ: 01-09-2020
ಪರೀಕ್ಷಾ ಅವಧಿ: 01-01-2021 ರಿಂದ 25-01-2021
ಕಾಲೇಜು ಪುನರಾರಂಭ: 27-01-2021
ಕ್ಲಾಸ್ ನಡೆಯುವ ಕೊನೆಯ ದಿನ: 25-05-2021
ಪರೀಕ್ಷಾ ಅವಧಿ: 26-05-2021 ರಿಂದ 25-06-2021
ರಜೆ ಅವಧಿ: 01-07-2021 ರಿಂದ 30-07-2021
ಹೊಸ ಶೈಕ್ಷಣಿಕ ವರ್ಷ ಆರಂಭ (2021-2022): 02-08-2021

ಇನ್ನು ಪ್ರಸ್ತುತ ವರ್ಷದ ಶೈಕ್ಷಣಿಕ ವೇಳಾಪಟ್ಟಿಯಲ್ಲಿಯೂ ಬದಲಾವಣೆಗಳನ್ನು ಮಾಡಿದೆ. ಕಾಲೇಜುಗಳ ಪರೀಕ್ಷಾ ಅವಧಿಯಲ್ಲಿ ಬದಲಾವಣೆ ಮಾಡಿರೊ ಯುಜಿಸಿ, ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಪಾಠ ಬೋಧಿಸಲು ಸೂಚನೆಯನ್ನು ನೀಡಿದೆ.

2019-20 ಶೈಕ್ಷಣಿಕ ವರ್ಷದ ಬದಲಾದ ವೇಳಾಪಟ್ಟಿ :
ಆನ್‍ಲೈನ್ ಕ್ಲಾಸ್ : 16-03-2020 ರಿಂದ 31-05-2020
ಪರೀಕ್ಷಾ ತಯಾರಿ/ ಪ್ರೊಜೆಕ್ಟ್ ವರ್ಕ್/ ಇ-ಲ್ಯಾಬ್ಸ್ / ಪ್ರಾಯೋಗಿಕ ಪರೀಕ್ಷೆ / ಅಸೈನ್‍ಮೆಂಟ್ / ಪ್ಲೇಸಮೆಂಟ್ ಡ್ರೈವ್ ಇತ್ಯಾದಿ: 01-06-2020 ರಿಂದ 15-06-2020
ರಜೆ : 16-06-2020 ರಿಂದ 30-06-2020
ಪರೀಕ್ಷಾ ಅವಧಿ

  1. ಟರ್ಮಿನಲ್ ಸೆಮಿಸ್ಟರ್/ವಾರ್ಷಿಕ: 01-07-2020 ರಿಂದ 15-07-2020
  2. ಇಂಟರ್ ಮೀಡಿಯೆಟ್ ಸೆಮಿಸ್ಟರ್ / ವಾರ್ಷಿಕ: 16-07-2020 ರಿಂದ 31-07-2020
    ಪರೀಕ್ಷಾ ಫಲಿತಾಂಶ:
  3. ಟರ್ಮಿನಲ್ ಸೆಮಿಸ್ಟರ್/ವಾರ್ಷಿಕ: 31-07-2020
  4. ಇಂಟರ್ ಮೀಡಿಯೆಟ್ ಸೆಮಿಸ್ಟರ್ / ವಾರ್ಷಿಕ: 14-08-2020
Leave A Reply

Your email address will not be published.