ಬೆಂಗಳೂರು: (Sachin scored First International Century) ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 100 ಶತಕಗಳನ್ನು ಬಾರಿಸಿದ ಮೊದಲ ಮತ್ತು ಏಕೈಕ ಆಟಗಾರ ನಮ್ಮ ಸಚಿನ್ ತೆಂಡೂಲ್ಕರ್. ತಮ್ಮ 24 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಸಚಿನ್ ತೆಂಡೂಲ್ಕರ್ 100 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ ಮಹೋನ್ನತ ಸಾಧನೆ ಮಾಡಿದ್ದಾರೆ.
ಸಚಿನ್ ಅವರ 100 ಶತಕಗಳ ಪೈಕಿ ಮೊದಲ ಶತಕಕ್ಕೆ ಇಂದು 22ನೇ ವಾರ್ಷಿಕೋತ್ಸವದ ಸಂಭ್ರಮ. ವಿಶೇಷ ಏನಂದ್ರೆ ದೇಶದ ಸ್ವಾತಂತ್ರ್ಯೋತ್ಸದ ಮುನ್ನಾ ದಿನ, ಅಂದ್ರೆ ಆಗಸ್ಟ್ 14ರಂದು ಸಚಿನ್ ತೆಂಡೂಲ್ಕರ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್’ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ದಾಖಲಿಸಿದ್ದರು.
1990ರ ಆಗಸ್ಟ್ 9ರಂದು ಆರಂಭಗೊಂಡಿದ್ದ ಟೆಸ್ಟ್ ಪಂದ್ಯದ ಕೊನೆಯ ದಿನವಾಗ ಆಗಸ್ಟ್ 14ರಂದು ಭಾರತದ 2ನೇ ಇನ್ನಿಂಗ್ಸ್’ನಲ್ಲಿ ಸಚಿನ್ ತೆಂಡೂಲ್ಕರ್ ಅಮೋಘ 119 ರನ್ ಬಾರಿಸಿದ್ದರು. 6ನೇ ಕ್ರಮಾಂಕದಲ್ಲಿ ಕ್ರೀಸ್’ಗಳಿದಿದ್ದ 17 ವರ್ಷದ ಹುಡುಗ ಸಚಿನ್, ಇಂಗ್ಲೆಂಡ್’ನ ದಿಗ್ಗಜ ವೇಗದ ಬೌಲರ್’ಗಳಿಗೆ ಸಡ್ಡು ಹೊಡೆದು 189 ಎಸೆತಗಳಲ್ಲಿ 17 ಬೌಂಡರಿಗಳ ಸಹಿತ 119 ರನ್ ಗಳಿಸುವ ಮೂಲಕ ತಮ್ಮ ಸೆಂಚುರಿ ಬೇಟೆಗೆ ಚಾಲನೆ ಕೊಟ್ಟಿದ್ದರು. ಮತ್ತೊಂದು ವಿಶೇಷ ಏನಂದ್ರೆ ಸಚಿನ್ ಮೊದಲ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದ ಆ ಪಂದ್ಯವೇ ಕರ್ನಾಟಕದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಯವರ ಚೊಚ್ಚಲ ಟೆಸ್ಟ್ ಪಂದ್ಯವಾಗಿತ್ತು.
🗓️ #OnThisDay in 1⃣9⃣9⃣0⃣
— BCCI (@BCCI) August 14, 2022
The legendary @sachin_rt scored his maiden international 💯 against England at the age of 17 and the rest is history 👌👌#TeamIndia pic.twitter.com/9QiynN8bcL
1989ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಸಚಿನ್ ತೆಂಡೂಲ್ಕರ್, ತಮ್ಮ ವೃತ್ತಿಜೀವನದಲ್ಲಿ ಒಟ್ಟು 200 ಟೆಸ್ಟ್ ಪಂದ್ಯಗಳನ್ನಾಡಿ 51 ಶತಕಗಳ ಸಹಿತ 15,921 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ರನ್ ಹಾಗೂ ಅತೀ ಹೆಚ್ಚು ಶತಕಗಳ ವಿಶ್ವದಾಖಲೆ ಸಚಿನ್ ಹೆಸರಲ್ಲಿದೆ.
ಏಕದಿನ ಕ್ರಿಕೆಟ್’ನಲ್ಲೂ ವಿಶ್ವದಾಖಲೆಯ 463 ಪಂದ್ಯಗಳನ್ನಾಡಿರುವ ಸಚಿನ್ ವಿಶ್ವದಾಖಲೆಯ 49 ಶತಕಗಳ ಸಹಿತ ವಿಶ್ವದಾಖಲೆಯ 18,426 ರನ್ ಕಲೆ ಹಾಕಿದ್ದಾರೆ.
ಇದನ್ನೂ ಓದಿ : VVS Laxman Coach : ದ್ರಾವಿಡ್ ಸ್ಥಾನಕ್ಕೆ ಲಕ್ಷ್ಮಣ್.. ಭಾರತ ಕ್ರಿಕೆಟ್ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಕೋಚ್ !
ಇದನ್ನೂ ಓದಿ : India Tour of Zimbabwe : ಇಂದು ಜಿಂಬಾಬ್ವೆಗೆ ಹಾರಲಿದೆ ಕೆ.ಎಲ್ ರಾಹುಲ್ ಸಾರಥ್ಯದ ಟೀಮ್ ಇಂಡಿಯಾ
On this Day Sachin Tendulkar scored First International Century