Sonam Kapoor : ಬಾಲಿವುಡ್ ನಟಿ ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಇಂದು ಗಂಡು ಮಗುವನ್ನು ಬರಮಾಡಿಕೊಂಡಿದ್ದಾರೆ. ಸೋನಂ ಕಪೂರ್ ತಾವು ಗಂಡು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್ಗೆ ನೀಲಿ ಬಣ್ಣದ ಹಾರ್ಟ್ನ್ನು ಶೀರ್ಷಿಕೆಯಲ್ಲಿ ನೀಡಿದ್ದಾರೆ. ನಟಿ ಸೋನಂ ಕಪೂರ್ ಇತ್ತೀಚಿಗೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿರುವ ನಟಿ ಸೋನಂ ಕಪೂರ್, 20.08.2022ರಂದು ಆವು ನಮ್ಮ ಸುಂದರ ಗಂಡುಮಗುವನ್ನು ಹೃದಯಪೂರ್ವಕವಾಗಿ ಬರ ಮಾಡಿಕೊಂಡಿದ್ದೇವೆ. ನಮ್ಮ ಈ ಪ್ರಯಾಣದಲ್ಲಿ ನಮಗೆ ಬೆಂಬಲ ನೀಡಿದ ಎಲ್ಲಾ ವೈದ್ಯರು, ದಾದಿಯರು , ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಧನ್ಯವಾದಗಳು . ಇದು ಕೇವಲ ಆರಂಭ. ಆದರೆ ನಮ್ಮ ಜೀವನವು ಇಲ್ಲಿಂದ ಶಾಶ್ವತವಾಗಿ ಬದಲಾಗಲಿದೆ ಎಂದು ಬರೆದುಕೊಂಡಿದ್ದರು.

ಈ ಹಿಂದೆ ಇನ್ಸ್ಟಾಗ್ರಾಂನಲ್ಲಿ ತಮ್ಮ ಗರ್ಭಾವಸ್ಥೆಯನ್ನು ಘೋಷಿಸಿದ್ದ ಸೋನಂ ಕಪೂರ್, ನಿನ್ನನ್ನು ಅತ್ಯುತ್ತಮವಾಗಿ ಪೋಷಿಸಲು ನಮ್ಮ ನಾಲ್ಕು ಕೈಗಳು ತಯಾರಿವೆ. ನಿನಗಾಗಿ ಮಿಡಿಯಲು ಎರಡು ಹೃದಯಗಳು ಕಾಯುತ್ತಿವೆ. ನಿನಗಾಗಿ ಪ್ರೀತಿ ಹಾಗೂ ಬೆಂಬಲವನ್ನು ನೀಡಲು ನಮ್ಮ ಕುಟುಂಬವು ಕಾಯುತ್ತಿದೆ ಎಂದು ಬರೆದುಕೊಂಡಿದ್ದರು. ಹೆಚ್ಚಿನ ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿ 2018ರ ಮೇ ತಿಂಗಳಲ್ಲಿ ಮುಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಅದ್ಧೂರಿ ಆರತಕ್ಷತೆ ಕಾರ್ಯಕ್ರಮವನ್ನೂ ನಡೆಸಲಾಗಿತ್ತು. ಆನಂದ್ ಅಹುಜಾ ಫ್ಯಾಶನ್ ಲೇಬಲ್ ಭಾನೆ ಹಾಗೂ ಸ್ನೀಕರ್ ಬೊಟಿಕ್ನ್ನು ನಡೆಸುತ್ತಿದ್ದಾರೆ.
ಇದನ್ನು ಓದಿ : jote joteyali serial : ‘ಜೊತೆ ಜೊತೆಯಲಿ’ ಧಾರವಾಹಿ ವೀಕ್ಷಕರಿಗೆ ಬಿಗ್ ಅಪ್ಡೇಟ್ : ಸೀರಿಯಲ್ನಿಂದ ನಟ ಅನಿರುದ್ಧಗೆ ಕೊಕ್
ಇದನ್ನೂ ಓದಿ : Amulya Twins Children Photo: ಅಮೂಲ್ಯ ಅವಳಿ ಮಕ್ಕಳ ಪೋಟೋ ರಿವೀಲ್: ಮುದ್ದು ಮಕ್ಕಳ ಮುಖ ತೋರಿಸಿದ ನಟಿ
ಇದನ್ನೂ ಓದಿ : Anirudh Jatkar Reaction : ಜೊತೆ ಜೊತೆಯಲಿ ವಿವಾದಕ್ಕೆ ಬಿಗ್ ಟ್ವಿಸ್ಟ್ : ನಿರ್ದೇಶಕ, ನಿರ್ಮಾಪಕರ ವಿರುದ್ದ ನಟ ಅನಿರುದ್ದ್ ಆರೋಪ
It’s A Baby Boy For Sonam Kapoor And Anand Ahuja