Domino’s Job : ಸಂದರ್ಶನದ ವೇಳೆ ಮಹಿಳೆಯ ವಯಸ್ಸು ಕೇಳಿ 3 ಲಕ್ಷ ದಂಡ ಪಾವತಿಸಿದ ಡಾಮಿನಾಸ್​ ಕಂಪನಿ

Domino’s Job : ಸಂದರ್ಶನದಲ್ಲಿ ವಯಸ್ಸು ಹಾಗೂ ಲಿಂಗ ತಾರತಮ್ಯ ಮಾಡಿದ ಕಾರಣಕ್ಕೆ ಡಾಮಿನಾಸ್​​​ ಪಿಜ್ಜಾದ ವಿರುದ್ಧ ಉತ್ತರ ಐರ್ಲೆಂಡ್​​ನ ಮಹಿಳೆಯೊಬ್ಬರು ಕಾನೂನು ಸಮರ ನಡೆಸಿದ್ದಾರೆ. ಈ ಸಂಬಂಧ ಡಾಮಿನಾಸ್​ನ ಕಡೆಯಿಂದ ಕ್ಷಮಾಪಣೆಯ ಭಾಗವಾಗಿ ಜಾನಿಸ್​ ವಾಲ್ಷ್ ಎಂಬ ಮಹಿಳೆಗೆ ಸರಿ ಸುಮಾರು 3.8 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ.


ಈ ವಿಚಾರವಾಗಿ ಮಾಹಿತಿ ನೀಡಿದ ಜಾನಿಸ್​​ ಕೌಂಟಿ ಟೈರೋನ್​​ನ ಸ್ಟ್ರಾಬೇನ್​​ನಲ್ಲಿರುವ ಪಿಜ್ಜಾ ಕಂಪನಿಯ ಶಾಖೆಯೊಂದರಲ್ಲಿ ತಾನು ಡೆಲಿವರಿ ಡ್ರೈವರ್​ ಹುದ್ದೆಗೆ ಸಂದರ್ಶನ ನೀಡಲು ತೆರಳಿದ್ದ ಸಂದರ್ಭದಲ್ಲಿ ಸಂದರ್ಶನಕಾರರು ನನ್ನ ವಯಸ್ಸಿನ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ ಎಂದು ಹೇಳಿದ್ದಾರೆ.


ಸಂದರ್ಶನದ ಸಂದರ್ಭದಲ್ಲಿ ಸಂದರ್ಶನಕಾರರು ಜಾನಿಸ್​​ಗೆ ಅವರ ವಯಸ್ಸಿನ ಬಗ್ಗೆ ಪ್ರಶ್ನೆ ಮಾಡಿದ್ದಾರೆ, ಮಾತ್ರವಲ್ಲದೇ ಈಕೆಯ ವಯಸ್ಸಿನ ಮಾನದಂಡವನ್ನೇ ಇಟ್ಟುಕೊಂಡು ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ನಿರಾಕರಿಸಿದ್ದಾರೆ. ಜಾನಿಸ್​ ತಾನು ವಯಸ್ಸು ಹಾಗೂ ಲಿಂಗದ ಕಾರಣದಿಂದ ತಿರಸ್ಕರಿಸಲ್ಪಟ್ಟಿದ್ದೇನೆ ಎಂದು ತಿಳಿದ ಬಳಿಕ ಸಂದರ್ಶನ ಸಮಿತಿಯ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧರಿಸಿದ್ದರು.


ಜಾನಿಸ್​​ ಫೇಸ್​ಬುಕ್​ ಮೂಲಕ ಕಂಪನಿಯನ್ನು ಸಂಪರ್ಕಿಸಿ ಸಂದರ್ಶನದ ಸಂದರ್ಭದಲ್ಲಿ ತಮಗಾದ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಇದಾದ ಬಳಿಕ ಅವರು ಸಂದರ್ಶನ ಸಮಿತಿಯಿಂದ ಕ್ಷಮೆಯನ್ನು ಸ್ವೀಕರಿಸಿದ್ದಾರೆ. ಅಲ್ಲದೇ ಸಂದರ್ಶಕರಿಗೆ ಸಂದರ್ಶನದ ಸಮಯದಲ್ಲಿ ಯಾರೊಬ್ಬರ ವಯಸ್ಸು ಕೇಳುವುದು ಸೂಕ್ತವಲ್ಲ ಎಂಬುದು ತಿಳಿದಿರಲಿಲ್ಲ ಎಂದು ಕಂಪನಿ ಹೇಳಿದೆ.


ಜಾನಿಸ್​ ಮಹಿಳೆ ಎಂಬ ಕಾರಣಕ್ಕೆ ಅವರನ್ನು ಚಾಲಕ ಹುದ್ದೆಯಿಂದ ಇವರನ್ನು ಕಡೆಗಣಿಸಲಾಗಿತ್ತು. ನಾನು ಡ್ರೈವರ್​ಗಳಾಗಿ ಪುರುಷರು ಮಾತ್ರ ಕೆಲಸ ಮಾಡೋದನ್ನು ನೋಡಿದ್ದೇನೆ. ನಾನು ಮಹಿಳೆಯಾಗಿರುವ ಹಿನ್ನೆಲೆಯಲ್ಲಿ ನನ್ನನ್ನು ಡ್ರೈವರ್​ ಹುದ್ದೆಯಿಂದ ಕಡೆಗಣಿಸಲಾಗಿದೆ ಎಂದು ಭಾವಿಸುತ್ತೇನೆ. ಸಂದರ್ಶನ ಮುಗಿದ ಬಳಿಕವೂ ಡಾಮಿನಾಸ್​ ಕಂಪನಿಯು ಮತ್ತೆ ಡ್ರೈವರ್​ಗಳು ಬೇಕಾಗಿದ್ದಾರೆ ಎಂದು ಜಾಹಿರಾತುಗಳನ್ನು ಪ್ರಕಟಿಸುವುದನ್ನು ಮುಂದುವರಿಸಿದೆ.


ಹೀಗಾಗಿ ಕಾನೂನು ಸಮರ ಆರಂಭಿಸಿದ ಜಾನಿಸ್​ ಉತ್ತರ ಐರ್ಲೆಂಡ್‌ನ ಸಮಾನತೆ ಆಯೋಗಕ್ಕೆ ತಾರತಮ್ಯದ ಪ್ರಕರಣವನ್ನು ದಾಖಲಿಸಿದ್ದಾರೆ. ಆಯೋಗದ ಹಿರಿಯ ಕಾನೂನು ಅಧಿಕಾರಿ ಮೇರಿ ಕಿಟ್ಸನ್​​ ಸಂದರ್ಶಕರು ಕಾನೂನು ಪ್ರಕ್ರಿಯೆಯ ಅಡಿಯಲ್ಲಿಯೇ ಸಂದರ್ಶನವನ್ನು ನಡೆಸಬೇಕು. ಯಾವುದೇ ಹುದ್ದೆಗಳಿಗೆ ಲಿಂಗ ಹಾಗೂ ವಯಸ್ಸನ್ನು ಮಾನದಂಡವಾಗಿ ಸ್ವೀಕರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.


ಡಾಮಿನೋಸ್​ ಪಿಜ್ಜಾ ಈ ವಿಚಾರದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಶಾಖೆಯ ಉದ್ಯೋಗ ಹಾಗೂ ನೇಮಕಾತಿಯು ಶಾಖೆಯ ಜವಾಬ್ದಾರಿಗಳ ಅಡಿಯಲ್ಲಿ ಬರುತ್ತದೆ. ಈ ವಿಚಾರದ ಬಗ್ಗೆಯೂ ಕಂಪನಿಯು ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದೆ .

ಇದನ್ನು ಓದಿ : Sonam Kapoor : ಗಂಡು ಮಗುವಿಗೆ ಜನ್ಮ ನೀಡಿದ ಬಾಲಿವುಡ್​ ನಟಿ ಸೋನಂ ಕಪೂರ್​​​

ಇದನ್ನೂ ಓದಿ : aniruddha banned : ನಟ ಅನಿರುದ್ಧಗೆ ಕಿರುತೆರೆಯಿಂದ 2 ವರ್ಷ ನಿಷೇಧ : ನಿರ್ಮಾಪಕರ ಸಂಘದಿಂದ ತೀರ್ಮಾನ

Woman Gets Rs 3 Lakh Compensation After Her Age Was Asked in Domino’s Job Interview

Comments are closed.