ಸೋಮವಾರ, ಏಪ್ರಿಲ್ 28, 2025
HomeCinemaAlia Bhatt Trolled: ಆಲಿಯಾ ಭಟ್ ವಿರುದ್ಧ ಬಾಯ್ಕಾಟ್ ‘ಬ್ರಹ್ಮಾಸ್ತ್ರ’

Alia Bhatt Trolled: ಆಲಿಯಾ ಭಟ್ ವಿರುದ್ಧ ಬಾಯ್ಕಾಟ್ ‘ಬ್ರಹ್ಮಾಸ್ತ್ರ’

- Advertisement -

ಮುಂಬೈ: ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಟ್ವಿಟ್ಟರ್ ನಲ್ಲಿ ಸದಾ ಟ್ರೆಡಿಂಗ್ ನಲ್ಲಿ ಇರ್ತಾರೆ. (Alia Bhatt Trolled) ಈಗಲೂ ಟ್ರೆಡಿಂಗ್ ನಲ್ಲಿ ಇದ್ದಾರೆ. ಆದ್ರೆ ಒಳ್ಳೆಯ ಕಾರಣಕ್ಕಲ್ಲ..

ಆಲಿಯಾ ಭಟ್ ವಿರುದ್ಧ ನೆಟ್ಟಿಗರು ತಿರುಗಿಬಿದ್ದಿದ್ದು, ಟ್ವಿಟ್ಟರ್ ನಲ್ಲಿ ಮತ್ತೊಮ್ಮೆ ಬಾಯ್ಕಾಟ್ ಹ್ಯಾಷ್ ಟ್ಯಾಗ್ ಭಾರಿ ಸದ್ದು ಮಾಡ್ತಿದೆ. ಅಷ್ಟಕ್ಕೂ ಆಗಿದ್ದು ಏನಂದ್ರೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಬಾಲಿವುಡ್ ನಟಿ ಕಂ ರಣಬೀರ್ ಕಪೂರ್ ಪತ್ನಿಯೂ ಆಗಿರೋ ಆಲಿಯಾ ಭಟ್ ಒಂದು ಹೇಳಿಕೆ ಕೊಟ್ಟಿದ್ರು. ‘ನೀವು ನನ್ನನ್ನ ಇಷ್ಟ ಪಡದೇ ಇದ್ರೆ ನನ್ನನ್ನ ನೋಡಬೇಡಿ’ ಎಂದಿದ್ರು. ಆಲಿಯಾ ಭಟ್ ಆಡಿದ  ಈ ಮಾತು ‘ನೆಟ್ಟಿಗರ’ನ್ನ ತೀವ್ರವಾಗಿ ಕೆರಳಿಸಿದೆ. ಆಲಿಯಾ ಕೊಟ್ಟ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಹಲ್ ಚಲ್ ಎಬ್ಬಿಸಿದೆ.

ಅನೇಕ ಟ್ವಿಟ್ಟರ್ ಬಳಕೆ ದಾರರು ಇದೀಗ ಆಲಿಯಾ ವಿರುದ್ಧ ಹೊಸ ಸಮರವನ್ನೇ ಸಾರಿದ್ದಾರೆ. ಅಷ್ಟೇ ಅಲ್ಲ ಆಲಿಯಾ ಭಟ್ ಮತ್ತು ರಣಬೀರ್ ನಟಿಸಿರುವ, ಬಿಡುಗಡೆಗೆ ಸಿದ್ಧವಾಗಿರೋ ‘ಬ್ರಹ್ಮಾಸ್ತ್ರ’ ಚಿತ್ರವನ್ನ ನೋಡದಂತೆ ಮತ್ತೊಂದು ಬಾಯ್ಕಾಟ್ ಅಭಿಯಾನ ಶುರುವಾಗಿದೆ. ಕರೀನಾ ಕಪೂರ್ ಬಳಿಕ ಆಲಿಯಾ ಬಟ್ ಈ ರೀತಿ ‘ನಾನಂದ್ರೆ ಇಷ್ಟ ಇಲ್ದೆ ಇದ್ರೆ, ನನ್ನನ್ನ ನೋಡಬೇಡಿ ಅಂತಾ ಹೇಳಿದ್ದಾರೆ. ಹೀಗಾಗಿ ಆಲಿಯಾ ಅಭಿನಯಿಸಿರೋ ‘ಬ್ರಹ್ಮಾಸ್ತ’ ಚಿತ್ರವನ್ನ ನೋಡಬಾರದು ಅಂತಾ ಬಾಯ್ಕಾಟ್ ಅಭಿಯಾನ ಶುರುವಾಗಿದೆ.

ವೈಭವ್ ಸಿಂಗ್ ಅನ್ನೋ ನೆಟ್ಟಿಗ ಮಾಡಿರೋ ಟ್ವೀಟ್ ಹೀಗಿದೆ. ‘ಡಿಯರ್ ಆಲಿಯಾ, #BoycottBollywood ಪ್ರವೃತ್ತಿಯಿಂದಾಗಿ ಬಾಲಿವುಡ್ ತನ್ನ ಬುದ್ಧಿ,  ಮನಸ್ಸನ್ನು ಕಳೆದುಕೊಳ್ಳುತ್ತಿದೆ. ನೀವು ಬಯಸಿದಂತೆ ಆಗಲಿ ಎಂದಿದ್ದಾರೆ. ಹೀಗಾಗಿ ಲಾಲ್ ಸಿಂಗ್ ಚಡ್ಡಾ ಚಿತ್ರದ ನಂತರ ಮತ್ತೊಂದು ಬಾಲಿವುಡ್ ಚಿತ್ರಕ್ಕೆ ಬಾಯ್ಕಟ್ ಭೀತಿ ಎದುರಾಗಿದೆ.

ಇತ್ತೀಚೆಗೆ ಬಿಡುಗಡೆ ಆಗಿದ್ದ, ಬಾಲಿವುಡ್ ಮಿಸ್ಟರ್ ಫರ್ಫೆಕ್ಟ್ ಆಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಚಿತ್ರದ ವಿರುದ್ಧ ಬಾಯ್ಕಾಟ್ ಅಭಿಯಾನ ನಡೆದಿತ್ತು. ಚಿತ್ರ ಬಿಡುಗಡೆಗೂ ಮುನ್ನ ಚಿತ್ರದ ನಾಯಕಿ ಕರೀನಾ ಕಪೂರ್  ಸಂದರ್ಶನವೊಂದರಲ್ಲಿ ‘ಒಂದು ವೇಳೆ ನಾನು ನಿಮಗೆ ಇಷ್ಟ ಆಗದಿದ್ರೆ, ನನ್ನನ್ನ ನೋಡಬೇಡಿ’ ಎಂದಿದ್ರು. ನೆಟ್ಟಿಗರು ಲಾಲ್ ಸಿಂಗ್ ಚಡ್ಡಾ ವಿರುದ್ಧ ಬಾಯ್ಕಾಟ್ ಅಭಿಯಾನ ಶುರು ಮಾಡಿದ ಬಳಿಕ ಕರೀನ್ ದಯವಿಟ್ಟು ಸಿನಿಮಾ ನೋಡಿ ಅಂತಾ ಬೇಡಿಕೊಂಡಿದ್ರು.ಇದೀಗ ಆಲಿಯಾ ಭಟ್ ಗೂ ಇದೇ ಪರಿಸ್ಥಿತಿ ಬಂದ್ರೆ ಅಚ್ಚರಿಯಿಲ್ಲ..

ಇದನ್ನೂ ಓದಿ : Daali Dhananjay Birthday : ಹುಟ್ಟುಹಬ್ಬ ಮಾಡಿಕೊಳ್ಳಲ್ಲ ಎಂದ ಡಾಲಿಧನಂಜಯ್: ಅಭಿಮಾನಿಗಳಿಗೆ ಕೊಟ್ಟ ಸಂದೇಶ ಏನು ಗೊತ್ತಾ

ಇದನ್ನೂ ಓದಿ : Meghana Raj Sarja Award : ಸಾರೋಟಿನಲ್ಲಿ ಅದ್ದೂರಿ‌ ಮೆರವಣಿಗೆ, ಪ್ರಶಸ್ತಿ: ಸೋಷಿಯಲ್ ಮೀಡಿಯಾದಲ್ಲಿ ಖುಷಿ ಹಂಚಿಕೊಂಡ ಮೇಘನಾ

Alia Bhatt Trolled social media movie brahmastra boycott Bollywood

RELATED ARTICLES

Most Popular