Zomato ಪಿಜ್ಜಾ ಆರ್ಡರ್ ರದ್ದು: ಗ್ರಾಹಕರಿಗೆ 10,000 ರೂ. ಪಾವತಿಸಲು ಆದೇಶ

ನವದೆಹಲಿ : (Zomato cancel pizza order) ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಆಹಾರ ವಿತರಣಾ ಸಂಸ್ಥೆಗಳು ಸಕಾಲದಲ್ಲಿ ಜನರಿಗೆ ಆರ್ಡರ್‌ ಪೂರೈಕೆ ಮಾಡುತ್ತಿಲ್ಲ ಎಂಬ ಆರೋಪವಿದೆ. ಆದ್ರೆ ಈ ನಡುವಲ್ಲೇ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆಯಾದ ಝೊಮಾಟೊಗೆ ಪಿಜ್ಜಾ ಆರ್ಡರ್ ರದ್ದುಗೊಳಿಸಿದ್ದಕ್ಕಾಗಿ ಚಂಡೀಗಢದ ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಗ್ರಾಹಕರಿಗೆ 10,000 ರೂಪಾಯಿ ಮತ್ತು ಉಚಿತ ಊಟವನ್ನು ಪಾವತಿಸಲು ಆದೇಶಿಸಿದೆ.

ಅಜಯ್ ಶರ್ಮಾ ಎಂಬವರು ನೀಡಿದ ದೂರಿನ ಪ್ರಕಾರ, ಅವರು ರಾತ್ರಿ 10:15 ಕ್ಕೆ ಝೊಮ್ಯಾಟೋ ಮೂಲಕ ಪಿಜ್ಜಾಕ್ಕಾಗಿ ಆರ್ಡರ್ ಮಾಡಿದ್ದರು. ಅಲ್ಲದೇ Paytm ಮೂಲಕ 287.70 ರೂಪಾಯಿಗಳನ್ನು ಪಾವತಿಸಿದ್ದಾರೆ, ಅದರಲ್ಲಿ ತೆರಿಗೆಗಳು ಮತ್ತು ಸಮಯಕ್ಕೆ ತಲುಪಿಸಲು 10 ರೂ. ಹೆಚ್ಚುವರಿಯಾಗಿ ಪಾವತಿಸಿದ್ದರು. ಆದರೂ ಕೂಡ ಝೊಮ್ಯಾಟೋ ರಾತ್ರಿ 10:30 ಕ್ಕೆ ಬುಕ್ಕಿಂಗ್‌ ಆರ್ಡರ್‌ ಕ್ಯಾನ್ಸಲ್‌ ಮಾಡಿತ್ತು. ಅಲ್ಲದೇ ಮರುಪಾವತಿ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು.

ಝೊಮಾಟೋ ಸೇವೆಯ ಬಗ್ಗೆ ಅಸಮಾಧಾನಗೊಂಡ ಅಜಯ್ ಶರ್ಮಾ ಅವರು ಗ್ರಾಹಕ ರಕ್ಷಣಾ ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ದೂರು ನೀಡಿದ್ದಾರೆ. ಅಜಯ್ ಶರ್ಮಾ ಅವರಿಗೆ ಮೊತ್ತವನ್ನು ಮರುಪಾವತಿಸಿದಾಗ, ಅವರು ತಮ್ಮ ಭರವಸೆಯನ್ನು ಈಡೇರಿಸುವಂತೆ ಅಥವಾ ತಮ್ಮ ಪ್ರಚಾರದ ಜಾಹೀರಾತನ್ನು “ಕಭಿ ಟು ಲೇಟ್ ಹೋ ಜಾತಾ” ಹಿಂತೆಗೆದುಕೊಳ್ಳುವಂತೆ ಜೊಮಾಟೊಗೆ ಕೇಳಿಕೊಂಡರು. ಕಿರುಕುಳಕ್ಕೆ ಪರಿಹಾರ ನೀಡಬೇಕು ಎಂದು ಕೋರಿದರು. ಆದಾಗ್ಯೂ, ಅವರ ಮನವಿಯನ್ನು ವಜಾಗೊಳಿಸಲಾಯಿತು.

ಇಷ್ಟಕ್ಕೆ ಸುಮ್ಮನಾಗದ ಅಜಯ್‌ ಶರ್ಮಾ ಅವರು ರಾಜ್ಯ ಆಯೋಗದ ಮುಂದೆ ಮನವಿ ಸಲ್ಲಿಸಿದರು. ದೂರುದಾರರು, “ಸಂಬಂಧಿತ ಸಮಯದಲ್ಲಿ ಐಟಂ ಅನ್ನು ತಲುಪಿಸಲು ಯಾವುದೇ ತೊಂದರೆ ಇದ್ದಲ್ಲಿ, ಪ್ರತಿಕ್ರಿಯಿಸಿದವರು ಬುಕಿಂಗ್ ಮಾಡಬಾರದು, ಅವರು ನಂತರ ಅದನ್ನು ರದ್ದುಗೊಳಿಸಿದರು. ಈ ಕುರಿತು ತನಗೆ ನ್ಯಾಯ ದೊರಕಿಸಿಕೊಡುವಂತೆ ಮನವಿಯನ್ನು ಮಾಡಿದ್ದರು.

ಸರಿಯಾದ ಸಮಯಕ್ಕೆ ಸೇವೆ ನೀಡುವ ಸಲುವಾಗಿ ಝೊಮಾಟೋ ರೂ 10 ಹೆಚ್ಚುವರಿ ಶುಲ್ಕವನ್ನು ಪಡೆಯುತ್ತದೆ. ಅಲ್ಲದೇ ಈ ರೀತಿಯಾಗಿ ಹಣವನ್ನು ಪಡೆದ ನಂತರದಲ್ಲಿ ಆರ್ಡರ್‌ ಅನ್ನು ಸಕಾಲದಲ್ಲಿ ನೀಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಸೇವೆಯನ್ನು ಸರಿಯಾದ ರೀತಿಯಲ್ಲಿ ನೀಡದೇ ಅನ್ಯಾಯ ಎಸಗಲಾಗಿದೆ ಎಂದು ಅಜಯ್ ಶರ್ಮಾ ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಅಜಯ್‌ ಶರ್ಮಾ ಅವರು ಸಲ್ಲಿಸಿದ ದೂರಿನ ಕುರಿತು ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ರಾಜ್ ಶೇಖರ್ ಅತ್ರಿ ಮತ್ತು ಸದಸ್ಯ ನ್ಯಾಯಮೂರ್ತಿ ರಾಜೇಶ್ ಕೆ ಆರ್ಯ ಅವರು ಆದೇಶವನ್ನು ಪ್ರಕಟಿಸಿದ್ದಾರೆ. ಅಲ್ಲದೇ ಆಕರ್ಷಣೀಯ ಜಾಹೀರಾತುಗಳು ಅಥವಾ ಪ್ರಚಾರಗಳನ್ನು ಪೂರೈಸಲು ಸಾಧ್ಯವಾಗದಿದ್ದರೆ ಅವುಗಳನ್ನು ಪ್ರಕಟಿಸಬಾರದು ಎಂದು ಸೂಚಿಸಿದ್ದಾರೆ.

ಇದನ್ನೂ ಓದಿ : Atal Pension Yojana : ಅಟಲ್‌ ಪಿಂಚಣಿ ಯೋಜನೆಯ ನಿಯಮ ಬದಲು: ನೀವೂ ಆ ನಿಯಮದ ಅಡಿಯಲ್ಲಿ ಬರ್‍ತೀರಾ; ಒಮ್ಮೆ ಚೆಕ್‌ ಮಾಡಿ

ಇದನ್ನೂ ಓದಿ : KL Rahul Zimbabwe player : ಕೆ.ಎಲ್ ರಾಹುಲ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್‌ಗೆ ಬಂದ ಜಿಂಬಾಬ್ವೆ ಆಟಗಾರ

Zomato cancel pizza order ordered to pay Rs10,000 to customer

Comments are closed.