ಸೋಮವಾರ, ಏಪ್ರಿಲ್ 28, 2025
HomeCoastal NewsHindu awareness letter : ಸಾರ್ವಜನಿಕ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಜೊತೆಯಲ್ಲಿ ಮನೆ ಮನೆಗೆ ಬಂದಿದೆ...

Hindu awareness letter : ಸಾರ್ವಜನಿಕ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಜೊತೆಯಲ್ಲಿ ಮನೆ ಮನೆಗೆ ಬಂದಿದೆ ಹಿಂದೂ ಜಾಗೃತಿ ಸಂದೇಶ

- Advertisement -

ಮಂಗಳೂರು : Hindu awareness letter : ಪ್ರವೀಣ್​ ನೆಟ್ಟಾರು , ಮಸೂದ್​ ಹಾಗೂ ಫಾಜಿಲ್​ ಹತ್ಯೆಗಳ ಬಳಿಕ ಕಡಲ ನಗರಿಯಲ್ಲಿ ಕೋಮು ಸಂಘರ್ಷಗಳು ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಇಂದು ಗಣೇಶ ಚತುರ್ಥಿಗೆ ಧರ್ಮ ಸಂಘರ್ಷದ ಕರಿ ನೆರಳು ಬೀಳಬಹುದೇ ಎಂಬ ಆತಂಕ ಕೂಡ ಹೆಚ್ಚಾಗಿದ್ದು ಈ ನಿಟ್ಟಿನಲ್ಲಿ ಪೊಲೀಸರು ಕೂಡ ಸಖತ್​ ಅಲರ್ಟ್ ಆಗಿದ್ದಾರೆ.


ಕರಾವಳಿಯಲ್ಲಿ ಗಣೇಶೋತ್ಸವಕ್ಕೂ ಧರ್ಮದಂಗಲ್​ನ ಕರಿ ನೆರಳು ಆವರಿಸಿದೆ. ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯ ಜೊತೆಯಲ್ಲಿ ಜನರ ಕೈಗೆ ಮತ್ತೊಂದು ಕರ ಪತ್ರ ಕೂಡ ಸೇರುತ್ತಿದೆ. ಹಿಂದೂ ಸುರಕ್ಷಾ ಸಮಿತಿ ಪುತ್ತೂರು ಜಿಲ್ಲೆಯ ಹೆಸರಿನಲ್ಲಿ ಈ ಕರಪತ್ರವನ್ನು ಹಂಚಲಾಗುತ್ತಿದೆ. ಇದೇ ಮೊದಲ ಬಾರಿಗೆ ಮನೆ ಮನೆಗೆ ಹಿಂದೂ ಸುರಕ್ಷಾ ಸಮಿತಿಯಿಂದ ಕರಪತ್ರಗಳು ತೆರಳಿವೆ .


ಹಿಂದೂ ಸುರಕ್ಷಾ ಸಮಿತಿಯು ನೀಡಿರುವ ಈ ಕರಪತ್ರದಲ್ಲಿ ಶಿವಮೊಗ್ಗದ ಹರ್ಷ, ಬೆಳ್ಳಾರೆಯ ಪ್ರವೀಣ್​ ನೆಟ್ಟಾರು ಹತ್ಯೆಯ ಬಗ್ಗೆ ಉಲ್ಲೇಖಿಸಲಾಗಿದೆ. ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಷಡ್ಯಂತ್ರದ ಪೂರ್ವಭಾವಿಯಾಗಿ ಈ ಕೊಲೆಗಳನ್ನು ಮಾಡಲಾಗುತ್ತಿದೆ ಎಂದು ಈ ಕರಪತ್ರದಲ್ಲಿ ಬರೆಯಲಾಗಿದೆ. ಹೀಗಾಗಿ ನಾವು ಅನ್ಯಧರ್ಮದವರಿಗೆ ವ್ಯಾಪಾರ ನಿಷೇಧ ಮಾಡೋಣ ಎಂದು ಕರೆ ನೀಡಲಾಗಿದೆ.


ಮನೆಯ ಮಕ್ಕಳನ್ನು ಆಗಾಗ ದೇವಸ್ಥಾನಕ್ಕೆ ಕರೆದುಕೊಂಡು ಹೋಗೋಣ. ಮಕ್ಕಳಿಗೆ ಹಿಂದೂ ಆಚಾರ- ವಿಚಾರಗಳ ಬಗ್ಗೆ ಸಂಸ್ಕಾರವನ್ನು ನೀಡೋಣ. ಹಿಂದೂಗಳ ಅಂಗಡಿಗಳಿಂದಲೇ ಬಟ್ಟೆ, ಚಪ್ಪಲಿ, ಎಲೆಕ್ಟ್ರಾನಿಕ್​ ವಸ್ತುಗಳು, ತರಕಾರಿ, ಮೀನು, ಮಾಂಸ, ದಿನಸಿಗಳನ್ನು ಖರೀದಿ ಮಾಡೋಣ.ಮನೆಯಲ್ಲಿ ಬೆಳೆದ ಅಡಿಕೆ, ತೆಂಗು, ಬಾಳೆ ಇತ್ಯಾದಿ ಕೃಷಿ ಉತ್ಪನ್ನಗಳನ್ನು ಹಿಂದೂ ವ್ಯಾಪಾರಿಗಳಿಗೇ ಮಾರಾಟ ಮಾಡೋಣ. ಭೂಮಿ ಮಾರಾಟ ಅಥವಾ ಲೀಸ್​ಗೆ ನೀಡುವ ಸಂದರ್ಭದಲ್ಲಿಯೂ ಹಿಂದೂಗಳನ್ನೇ ಆಯ್ಕೆ ಮಾಡಿಕೊಳ್ಳೋಣ. ಜಾತಿ -ಭೇದವನ್ನು ಮರೆತು ನಾವೆಲ್ಲ ಬಂಧು ಭಾವ ಮೆರೆಯೋಣ ಎಂದು ಕರಪತ್ರದಲ್ಲಿ ಬರೆಯಲಾಗಿದೆ.


ಪ್ರತಿಯೊಂದು ಗ್ರಾಮಗಳಲ್ಲಿಯೂ ಅನ್ಯಮತೀಯ ಶಕ್ತಿಗಳ ಅನೈತಿಕ ಕೃತ್ಯವನ್ನು ತಡೆಯೋಣ. ಸ್ನೇಹಕ್ಕೂ ಸಿದ್ಧ, ಸಮರಕ್ಕೂ ಸಿದ್ಧ ಎಂಬ ಘೋಷ ವಾಕ್ಯದೊಂದಿಗೆ ಈ ಕರಪತ್ರವನ್ನು ಸಾರ್ವಜನಿಕ ಗಣೇಶೋತ್ಸವ ಆಮಂತ್ರಣ ಪತ್ರಿಕೆಯೊಂದಿಗೆ ಮನೆ ಮನೆಗೂ ಹಂಚಿಕೆ ಮಾಡಲಾಗಿದೆ.

ಇದನ್ನು ಓದಿ : Amazon Flipkart parcels : ಅಮೆಜಾನ್, ಫ್ಲಿಪ್ ಕಾರ್ಟ್ ಪಾರ್ಸಲ್ ಗಳ ಗತಿ ಏನಾಯ್ತು ನೋಡಿದ್ರೆ ನೀವೇ ಶಾಕ್ ಆಗ್ತೀರಾ

ಇದನ್ನೂ ಓದಿ : Mikhail Gorbachev: ಸೋವಿಯತ್ ಒಕ್ಕೂಟದ ಕೊನೇ ನಾಯಕ ಮಿಖಾಯಿಲ್ ಗೋರ್ಬಚೇವ್ ಇನ್ನಿಲ್ಲ

Hindu awareness letter along with Public Ganeshotsav invitation letter

RELATED ARTICLES

Most Popular